Kumta|ನಾವ್ಯಾರೂ ಸಿಎಂ ರೇಸ್ ನಲ್ಲಿ ಇಲ್ಲ -ಸತೀಶ್ ಜಾರಕಿಹೊಳಿ
Kumta news/ಕಾರವಾರ :- ದಲಿತ ಸಿ.ಎಂ ಬಗ್ಗೆ ಎಲ್ಲಾಕಡೆ ಚರ್ಚೆಯಾಗುತ್ತಿದೆ.ಚರ್ಚೆಯಾದ ತಕ್ಷಣ ಸಿಎಂ ಮಾಡಲು ಆಗುವುದಿಲ್ಲ ,ಸಿಎಂ ಆಕಾಂಕ್ಷಿಗಳು ಹಲವರು ಇದ್ದಾರೆ ಅಂತಿಮವಾಗಿ ಹೈಕಮಾಂಡ್ ನಿರ್ಧಾರ ಮಾಡುತ್ತದೆ.
ನಾವ್ಯಾರೂ ಸಿಎಂ ರೇಸ್ ನಲ್ಲಿ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ (kumta)ಮಾಧ್ಯಮಗಳ ಜೊತೆ ಮಾತನಾಡಿದ ಅವರು ಸಿಎಂ ಐದು ವರ್ಷಕ್ಕೆ ಆಯ್ಕೆ ಮಾಡಿದ್ದಾರೆ. ಈ ಗೊಂದಲಕ್ಕೆ ಬ್ರೇಕ್ ಹಾಕಬೇಕಿದೆ .ಪಕ್ಷದಲ್ಲಿ ಈ ವಿಚಾರವಾಗಿ ಸಾಕಷ್ಟು ಗೊಂದಲ ಇದೆ.ಇದು ಬಗೆಹರಿಯಬೇಕಿದೆ.
Kumta| ಹಲವು ಕಡೆ ಕಳ್ಳತನ ಕೊನೆಗೂ ಪೆಟ್ರೋಲ್ ಬಂಕ್ ಕಳ್ಳತನದಲ್ಲಿ ಸಿಕ್ಕಿಬಿದ್ದ ಕಳ್ಳರು.
ಗೊಂದಲ ನಿವಾರಣೆ ಅಷ್ಟೇ ಸ್ಥಾನ ಬದಲಾವಣೆ ಇಲ್ಲ , ಪಕ್ಷದಲ್ಲಿ ,ಕಾರ್ಯಕರ್ತರಲ್ಲಿ ಹಾಗೂ ನಾಯಕರಲ್ಲಿ ಗೊಂದಲವಿದೆ ಅದು ನಿವಾರಣೆ ಆಗಬೇಕು ,ಎಲ್ಲಾ ರೀತಿಯ ಚರ್ಚೆಗಳಾಗಿವೆ ಎಲ್ಲರೂ ಸಿಎಂ ಆಗಲು ಸಾಧ್ಯವಿಲ್ಲ,ಸೂಕ್ತಸಮಯದಲ್ಲಿ ಹೈಕಮಾಂಡ್ ನಿರ್ದಾರ ಮಾಡುತ್ತೆ ಈಗಂತೂ ಸಿಎಂ ಇದ್ದಾರೆ ,ಬದಲಾವಣೆ ಹೈಕಮಾಂಡ ಗೆ ಬಿಟ್ಟಿದ್ದು ಎಂದರು.ಇನ್ನು ಸಿಎಂ ಟ್ವೀಟ್ ವಿಚಾರ ವಾಗಿ ಪ್ರತಿಕ್ರಿಯಿಸಿದ ಅವರು ಅವರು ಟ್ವೇಟ್ ಮಾಡಿದ್ದು , ಅವರೇ ಹೇಳಬೇಕು ,ಪಕ್ಷದಲ್ಲಿ ಸಮಸ್ಯೆ ಇದೆ ಸರಿಯಾಗುತ್ತಾ ಇರುತ್ತದೆ ಎಂದರು.
ಇನ್ನು ಬಿಜೆಪಿ ರವರು ಬ್ರಷ್ಟಾಚಾರದ ಬಗ್ಗೆ ಬೇರೆಯವರ ಮೇಲೆ ಆರೋಪ ಮಾಡುತ್ತದೆ.ಅವರ ಎಂ.ಎಲ್.ಎ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಅವರೇ ತಮ್ಮ ಬ್ರಷ್ಟಾಚಾರದ ಬಗ್ಗೆ ಸಾಕ್ಷಿ ಕೊಟ್ಟಿದ್ದಾರೆ ಎಂದರು.







