Kumta| ಹಲವು ಕಡೆ ಕಳ್ಳತನ ಕೊನೆಗೂ ಪೆಟ್ರೋಲ್ ಬಂಕ್ ಕಳ್ಳತನದಲ್ಲಿ ಸಿಕ್ಕಿಬಿದ್ದ ಕಳ್ಳರು.
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ (kumta) ಕಳ್ಳತನವನ್ನೇ ಉದ್ಯೋಗ ಮಾಡಿಕೊಂಡಿದ್ದ ಯವಕ ಹಾಗೂ ಅಪ್ರಾಪ್ತ ನೊಬ್ಬ ಹೊನ್ನಾವರ ಸೇರಿದಂತೆ ಹಲವು ಕಡೆ ಚಿಕ್ಕಪುಟ್ಟ ಅಂಗಡಿಗಳಿಗೆ ಕನ್ನ ಹಾಕಿ ಅಲ್ಲಿ ಸಿಕ್ಕ ಹಣ ,ವಸ್ತುಗಳ ಮೂಲಕ ಐಷಾರಾಮಿ ರೀತಿಯಲ್ಲಿ ಬದುಕುತಿದ್ದ ಇಬ್ಬರನ್ನ ಕುಮಟಾ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Kumta news|11 ವಿವಿಧ ಪ್ರಕರಣ-ಬ್ಯಾಂಕ್ ಗೆ ಕನ್ನ ಹಾಕಿದ ಅಂತರ್ ಜಿಲ್ಲಾ ಕಳ್ಳನ ಬಂಧನ.
ಹೌದು ಕುಮಟಾದ ಮಾಸೂರು ಕ್ರಾಸ್ ಬಳಿ ಇರುವ ಪೆಟ್ರೋಲ್ ಬಂಕ್ ನಲ್ಲಿ ನಡೆದಿದ್ದ ಕಳ್ಳತನದಲ್ಲಿ ಇಬ್ಬರು ಕಿಲಾಡಿ ಕಳ್ಳರು ಕುಮಟಾ ಪೊಲೀಸರಿಗೆ ಸೆರೆ ಸಿಕ್ಕಿದ್ದು ಅವರು ನಡೆಸಿದ ಕಳ್ಳತನದ ಸರಮಾಲೆಗಳು ಬೆಳಕಿಗೆ ಬಂದಿದೆ.
ಎಲ್ಲಿ ಏನಾಗಿತ್ತು.
ಕುಮಟಾ ತಾಲೂಕಿನ ಮಾಸೂರು ಕ್ರಾಸ್ ಬಳಿಯ ಪೆಟ್ರೋಲ್ ಬಂಕ್‌ನಲ್ಲಿ ದಿನಾಂಕ 01-02-2026 ರ ರಾತ್ರಿ ಪೆಟ್ರೋಲ್ ಬಂಕ್ ಕಚೇರಿಯ ಹಿಂಭಾಗದ ಕಿಟಕಿಯ ಸರಳುಗಳನ್ನು ಕತ್ತರಿಸಿ ಒಳನುಗ್ಗಿದ್ದ ಕಳ್ಳರು, ಲಾಕರ್ ಮೀಟಿ ಅದರಲ್ಲಿದ್ದ 25,000 ರೂ. ನಗದು ಹಣವನ್ನು ದೋಚಿದ್ದರು. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸ್ ನಿರೀಕ್ಷಕ ಯೋಗೇಶ ಕೆ.ಎಂ. ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡ ಪೊಲೀಸರು ಕುಮಟಾದ ವನ್ನಳ್ಳಿಯ ಕಲ್ಗುಡ್ಡ ಮುಲದ ಆರೋಪಿಗಳಾದ ಅಸ್ಲಂ ಮಹಮ್ಮದ್ ಹನೀಫ ದಂಡು ಹಾಗೂ ಓರ್ವ ಅಪ್ರಾಪ್ತ ಬಾಲಕನನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳಿಂದ ಕಳ್ಳತನಕ್ಕೆ ಬಳಸಿದ 3 ಲಕ್ಷ ರೂ. ಮೌಲ್ಯದ ಎರಡು ಸುಝುಕಿ ಬರ್ಗ್‌ಮನ್ ಸ್ಕೂಟರ್‌ಗಳು, ಕೃತ್ಯಕ್ಕೆ ಬಳಸುತ್ತಿದ್ದ ಆಯುಧಗಳು ಹಾಗೂ ಕಳ್ಳತನ ಮಾಡಿದ್ದ ನಗದು ಹಣವನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೀಸೆ ಮೂಡುವ ಮುಂಚೆ ಕಳ್ಳತನ.
ಇನ್ನು ಆರೋಪಿಗಳಾದ ಇಬ್ಬರು ಕಳ್ಳತನವನ್ನೇ ಉದ್ಯೋಗ ಮಾಡಿಕೊಂಡಿದ್ದರು ಎಂಬುದು ಬೆಳಕಿಗೆ ಬಂದಿದೆ. ಇವರು ಹೊನ್ನಾವರ ಸುತ್ತಾಮುತ್ತಾ ಹಾಗೂ ಕುಮಟಾ ಸೇರಿಂತೆ ಹಲವು ಕಡೆ ಸಣ್ಣಪುಟ್ಟ ಗೂಡಂಗಡಿಗಳಿಗೆ ರಾತ್ರಿ ವೇಳೆ ಕನ್ನ ಹಾಗಿ ಹಣ ,ವಸ್ತುಗಳನ್ನ ಕದಿಯುತಿದ್ದರು. ಆದರೇ ಹೆಚ್ವಿನವು ದೂರೇ ದಾಖಲಾಗುತ್ತಿರಲಿಲ್ಲ . ಹೀಗಾಗಿ ರಾಜಾರೋಷವಾಗಿ ಕಳ್ಳತನ ಮಾಡುತಿದ್ದರು. ಈ ಹುಡಗರೂ ಈವರೆಗೂ ಏಳಕ್ಕೂ ಹೆಚ್ಚು ಕಡೆ ಕಳ್ಳತನ ಮಾಡಿದ್ದರು. ಆದರೇ ದೂರು ದಾಖಲಾಗಿದ್ದು ಮಾತ್ರ ಕೇವಲ ಒಂದು . ಹೀಗಾಗಿ ಕೊನೆಗೆಗೂ ಈ ಕಳ್ಳರು ಕುಮಟಾ ಪೊಲೀಸರಿಗೆ ಸೆರೆ ಸಿಕ್ಕಿದ್ದಾರೆ.
Kumta| ಪೊಲೀಸರಿಗೆ ಸವಾಲು ಹಾಕಿ ಎಸ್ಕೇಪ್ ಆದ ಪುಡಿರೌಡಿ ಮಾಸೂರು ಮಹೇಶ್!
ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪಿ.ಎಸ್.ಐ ಗಳಾದ ಮಯೂರ ಪಟ್ಟಣಶೆಟ್ಟಿ, ರವಿ ಗುಡ್ಡಿ, ಸಾವಿತ್ರಿ ನಾಯಕ ಮತ್ತು ಸಿಬ್ಬಂದಿಗಳ ತಂಡದ ಕಾರ್ಯವನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ. ಎನ್. ಹಾಗೂ ಉನ್ನತ ಅಧಿಕಾರಿಗಳು ಶ್ಲಾಘಿಸಿದ್ದಾರೆ.







