Kumta| ಪೊಲೀಸರಿಗೆ ಸವಾಲು ಹಾಕಿ ಎಸ್ಕೇಪ್ ಆದ ಪುಡಿರೌಡಿ ಮಾಸೂರು ಮಹೇಶ್! 

Kumta:-uttara kannada ,Kumta Masuru pidi rowdy Mahesh Patagaar escaped police after assault
Kumta Masuru village assault case pidi rowdy police inaction Kumta Masuru village assault case pidi rowdy police inaction
ಹಲ್ಲೆ ಮಾಡುತ್ತಿರುವ ಪುಡಿ ರೌಡಿ

Kumta| ಪೊಲೀಸರಿಗೆ ಸವಾಲು ಹಾಕಿ ಎಸ್ಕೇಪ್ ಆದ ಪುಡಿರೌಡಿ ಮಾಸೂರು ಮಹೇಶ್!

Kumta news:- ಉತ್ತರ ಕನ್ನಡ ಜಿಲ್ಲೆಯ ಕುಮಾಟಾದ (kumta) ಮಾಸೂರಿನಲ್ಲಿ ದೊಣ್ಣೆ ಹಿಡಿದು ಹಲ್ಲೆ ನಡೆಸಿ ರಂಪಾಟ ಮಾಡಿ ಜನರಿಗೆ ಭಯ ಹುಟ್ಟಿಸಿದ್ದ ಪುಡಿ ರೌಡಿ ಮಹೇಶ್ ಪಟಗಾರ್ ಇದೀಗ ಪೊಲೀಸರಿಗೇ ಸವಾಲು ಹಾಕಿ ಎಸ್ಕೇಪ್ ಆಗಿದ್ದಾನೆ.

ಜನವರಿ 10 ರಂದು ಪುಡಿರೌಡಿ ಮಹೇಶ್ ಹೊನ್ನಪ್ಪ ಪಟಗಾರ್ ಅದೇ ಊರಿನ ಬಾಲಚಂದ್ರ ಕುಪ್ಪಯ್ಯ ಪಟಗಾರ್ ಎಂಬಾತನಿಗೆ ದೊಣ್ಣೆಯಿಂದ ಹಲ್ಲೆಮಾಡಿದ್ದನು.

Kumta| ಮಾಸೂರಿನಲ್ಲಿ ದೊಣ್ಣೆಯಿಂದ ರೌಡಿಯಿಂದ ಹಲ್ಲೆ| ನಡುರಸ್ತೆಯಲ್ಲೆ ಪ್ರಜ್ಞೆ ತಪ್ಪಿದ ವ್ಯಕ್ತಿ ವಿಡಿಯೋ ವೈರಲ್ 

Advertisement

ಈ ಕುರಿತು ಕುಮಟಾ ಠಾಣೆಯಲ್ಲಿ ದೂರು ದಾಖಲಾಗಿತ್ತು.ಆದರೇ ಆತನನ್ನು ಬಂಧಿಸಿ ತನಿಖೆ ಮಾಡಿರಲಿಲ್ಲ.

ಇನ್ನು ಈತ ಊರಿನಲ್ಲಿ ಉಪಟಳ ಹೆಚ್ಚಾಗಿದ್ದು , ರಸ್ತೆಯಲ್ಲಿ ಹೋಗುವ ಮಹಿಳೆಯರಿಗೆ ಅವಾಚ್ಯ ಶಬ್ದದಲ್ಲಿ ನಿಂದಿಸುವುದು,ಮದ್ಯದ ಅಮಲಿನಲ್ಲಿ ಊರಿನ ಜನರಿಗೆ ಸುಕಾ ಸುಮ್ಮನೆ ಹಲ್ಲೆ ಮಾಡುವುದು ಮಾಡಿ ಊರಿನಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ.

ಇನ್ನು ದೂರು ದಾಖಲಾಗಿ ಹತ್ತು ದಿನ ಕಳೆದರೂ ಪೊಲೀಸರು ಈತನನ್ನ ಬಂಧಿಸಿ ತನಿಖೆ ನಡೆಸಿರಲಿಲ್ಲ. ಹೀಗಾಗಿ ತನ್ನ ಆಟ ಎಂದಿನಂತೆ ಮುಂದುವರೆಸಿದ್ದನು. ಎಲ್ಲಿ ಮಾಧ್ಯಮದಲ್ಲಿ ಸುದ್ದಿ ಪ್ರಕಟವಾಯಿತೋ ಆಗ ಊರಿನ ಜನರಿಗೆ ಪೊಲೀಸರು ನನಗೆ ಏನೂ ಮಾಡಲು ಆಗಲ್ಲ, ಏನು ಕುತ್ತುಕೊಳ್ಳಲು ಆಗಲ್ಲ, ಹೇಗೆ ಹಿಡಿತಾರೆ ನೋಡ್ತೀನಿ ಎಂದು ಅವಾಜ್ ಹಾಕಿದ್ದನಂತೆ.

ಇನ್ನು ಪೊಲೀಸರು ನಿನ್ನೆ ದಿನ ಆತನ ಬಂಧಿಸಲು ತೆರಳಿದ್ದಾರೆ.ಆದರೇ ಆತ ಪೊಲೀಸರಿಗೆ ಸಿಗದೇ ತಪ್ಪಿಸಿಕೊಂಡಿದ್ದಾನೆ.

ಆತ ಸಹೋದರಿಯ ಮನೆಗೆ ತೆರಳಿರುವುದಾಗಿ ಗ್ರಾಮದ ಜನ ಹೇಳುತ್ತಾರೆ.

ಆದರೇ ಪುಡಿ ರೌಡಿಯೊಬ್ಬ ಕಾನೂನಿನ ಭಯ ವಿಲ್ಲದೇ ಪೊಲೀಸ್ ವ್ಯವಸ್ಥೆಗೇ ಅಣಕಿಸಿ ದೈರ್ಯವಾಗಿ ಸುತ್ತಾಡುತ್ತಾನೆ , ಹತ್ತು ದಿನವಾದರೂ ಕ್ರಮ ಕೈಗೊಂಡಿಲ್ಲ ಎಂಬುದೇ ಈಗ ಪ್ರಶ್ನೆ ಏಳುವಂತೆ ಮಾಡಿದೆ.

ಆತನ ಹಿಡಿದು ಕುಮಟಾ ಪೊಲೀಸರು ಮದ್ಯದ ಅಮಲು ಇಳಿಸಿ ಬುದ್ದಿ ಕಲಿಸುತ್ತಾರ ಎಂಬುದನ್ನ ಕಾದುನೋಡಬೇಕಿದೆ.

ಏನಾಗಿತ್ತು ಘಟನೆ?

Kumta Masuru village assault case pidi rowdy police inaction
ಹಲ್ಲೆ ಮಾಡುತ್ತಿರುವ ಪುಡಿ ರೌಡಿ

ಮಾಸೂರು ಗ್ರಾಮದ ಅಂಗಡಿಯೊಂದರ ಬಳಿ ನಿಂತಿದ್ದ ಬಾಲಚಂದ್ರ ಹೊನ್ನಪ್ಪರಿಗೆ ಮಹೇಶ್ ಪಟಗಾರ್ ಕ್ಷುಲ್ಲಕ ಕಾರಣಕ್ಕೆ ನುಡು ರಸ್ತೆಯಲ್ಲಿ ದೊಣ್ಣೆ ಹಿಡಿದು ಅವಾಚ್ಯ ಶಬ್ದದಿಂದ ನಿಂದಿಸಿದ್ದಾನೆ. ಇದನ್ನು ಪ್ರಶ್ನಿಸಿದ ಆತನಿಗೆ ದೊಣ್ಣೆಯಲ್ಲಿ ಬೇಕಾಬಿಟ್ಟಿ ಥಳಿಸಿದ್ದು ದೊಣ್ಣೆಯಿಂದ ತಲೆ ಹಾಗೂ ಕಿವಿಯ ಭಾಗಕ್ಕೆ ಘಾಸಿಯಾಗುವಂತೆ ಹೊಡೆದಿದ್ದು ಬಾಲಚಂದ್ರ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ.

Kumta| ಕುಂಬಾರ ಹುಳು ಕಡಿದು ಕಾರ್ಮಿಕ ಸಾವು

ಸ್ಥಳೀಯರು ಬಾಲಚಂದ್ರನನ್ನು ತಕ್ಷಣ ಆಸ್ಪತ್ರೆಗೆಕರೆದೊಯ್ದಿದ್ದು .ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇನ್ನು ಘಟನೆ ಜನವರಿ ಹತ್ತರಂದು ನಡೆದಿದೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು ಚರ್ಚೆಗೆ ಎಡೆಮಾಡಿಕೊಟ್ಟಿದೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement