Kumta| ಕುಂಬಾರ ಹುಳು ಕಡಿದು ಕಾರ್ಮಿಕ ಸಾವು

Kumta news:-A construction worker died after being bitten by a poisonous Kumbara Hulu insect while working at a site in Gunda village of Kumta
Kumta taluk Gunda village construction worker dies after poisonous kumbara hulu insect bite while doing masonry work Kumta taluk Gunda village construction worker dies after poisonous kumbara hulu insect bite while doing masonry work
ಮೃತ ಕಾರ್ಮಿಕನ ಚಿತ್ರ.

Kumta| ಕುಂಬಾರ ಹುಳು ಕಡಿದು ಕಾರ್ಮಿಕ ಸಾವು.

Kumta news 31 december 2025: ಸಾವು ಎಂಬುದು ಬಂದ್ರೆ ಹೇಗೆಲ್ಲಾ ಸಾವಾಗುತ್ತದೆ ಎಂಬುದಕ್ಕೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದ ಘಟನೆಯೇ ಸಾಕ್ಷುಯಾಗಿದೆ.

Kumta| ಬೇರೊಬ್ಬಳ ಸ್ನೇಹ ,ಮಗನಿಗೆ ಕೂಡಿಹಾಕಿ ಚಿತ್ರಹಿಂಸೆ ನೀಡಿದ ಪಾಪಿ ತಂದೆ

ಗಾರೆ ಕೆಲಸ ಮಾಡುತ್ತಿದ್ದ ವೇಳೆ ವಿಷಕಾರಿ ಕುಂಬಾರ ಹುಳ  ಕಚ್ಚಿ, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಕುಮಟಾ (kumta)ತಾಲೂಕಿನ ಗುಂದ ಗ್ರಾಮದಲ್ಲಿ ನಡೆದಿದೆ.

Advertisement

ಕುಮಟಾ ತಾಲೂಕಿನ ಮಾಸೂರು ಗ್ರಾಮದ ನಿವಾಸಿ ಗಣೇಶ ಹನುಮಂತ ಪಟಗಾರ (46) ಮೃತ ದುರ್ದೈವಿ.

Kumta |ಸಮುದ್ರಪಾಲಾಗುತಿದ್ದ ಬೆಂಗಳೂರಿನ ಇಬ್ಬರನ್ನ ಕುಡ್ಲೆ ಬೀಚ್ ನಲ್ಲಿ  ರಕ್ಷಣೆ

ಗಣೇಶ ಅವರು ತಮ್ಮ ಊರಿನ ಮಂಜುನಾಥ ಗುಣಗಾ ಅವರೊಂದಿಗೆ, ಗುಂದ ಗ್ರಾಮದ ರಾಜು ನಾಯ್ಕ ಎನ್ನುವವರ ಮನೆಯ ಕಂಪೌಂಡ್ ಕಟ್ಟುವ ಗಾರೆ ಕೆಲಸಕ್ಕೆ ತೆರಳಿದ್ದರು. ಬೆಳಿಗ್ಗೆ 9:30ರ ಸುಮಾರಿಗೆ ಕೆಲಸದಲ್ಲಿ ನಿರತರಾಗಿದ್ದ ವೇಳೆ ವಿಷಕಾರಿ ಕುಂಬಾರ ಹುಳವೊಂದು ಗಣೇಶ ಅವರ ಕೈ ಹಾಗೂ ತುಟಿಗೆ ಕಚ್ಚಿದೆ.

ವಿಷದ ತೀವ್ರತೆಗೆ ಅವರು ಸ್ಥಳದಲ್ಲೇ ಕುಸಿದು ಬಿದ್ದು ವಾಂತಿ ಮಾಡಿಕೊಳ್ಳಲಾರಂಭಿಸಿದ್ದಾರೆ. ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಂಬ್ಯುಲೆನ್ಸ್ ಮೂಲಕ ಕುಮಟಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ದುರದೃಷ್ಟವಶಾತ್ ಆಸ್ಪತ್ರೆಗೆ ತಲುಪುವ ಮೊದಲೇ, ಮಾರ್ಗಮಧ್ಯೆ ಗುಡಿಗಾರಗಲ್ಲಿ ಸಮೀಪ  ಅವರು ಕೊನೆಯುಸಿರೆಳೆದಿದ್ದಾರೆ.

ಘಟನೆ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement