Honnavar| ಗೋ ಕಳ್ಳತನ ನಡೆಸಿ ಹತ್ಯೆ ಮಾಡಿ ಮಾಂಸ ಕದ್ದೊಯ್ದ ಕಳ್ಳರು.
ಕಾರವಾರ :- ಮೇಯಲು ಬಿಟ್ಟಿದ್ದ ಗೋವನ್ನು ಕದ್ದು ಕೊಂದು ಮಾಂಸ ವನ್ನ ಗೋ ಕಳ್ಳರು ತೆಗೆದುಕೊಂಡುಹೋದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ (honnavar)ತಾಲೂಕಿನ ವಂದೂರು ಸಮೀಪದ ಜಡಿಗದ್ದೆಯಲ್ಲಿ ನಡೆದಿದೆ.
ವಂದೂರಿನ ಜಡಿಗದ್ದೆಯ ಗಣಪತಿ ಮಹಾಬಲೇಶ್ವರ ಭಟ್ ಎನ್ನುವವರಿಗೆ ಸೇರಿದ್ದ ದನ ಇದಾಗಿದ್ದು ಅವರ ಗೇರ್ ಪ್ಲಾಟ್ ನಲ್ಲಿ ದನವನ್ನ ಕಡಿದು ಮಾಂಸ ಕದ್ದೊಯ್ಯಲಾಗಿದೆ.ಸ್ಥಳಕ್ಕೆ ಹೊನ್ನಾವರ ಸಿಪಿಐ ಸಿದ್ದರಾಮೇಶ್ವರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಘಟನೆ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು .
Honnavar |ಬೈಕ್ ಹಾಗೂ KSRTC ಬಸ್ ನಡುವೆ ಅಪಘಾತ ಬೈಕ್ ಸವಾರ ಸಾವು
2025 ರ ಜನವರಿಯಲ್ಲಿ ಗೋಹತ್ಯೆ ಮಾಡಿ ಮದುವೆ ಮನೆಗೆ ಸರಬರಾಜು ಮಾಡಿದ್ದ ಗೋ ಕಳ್ಳರು.
ಕುಡಿತದ ಚಟ ಮಾನವೀಯತೆಯನ್ನೇ ಮರೆಸಿತ್ತು. ಹಣಕ್ಕಾಗಿ ಗರ್ಭ ಧರಿಸಿದ್ದ ಗೋ ಹತ್ಯೆ ಮಾಡಿ ಮದುವೆ ಮನೆಯ ಊಟಕ್ಕೆ ನೀಡಿದ್ದವರಿಗೆ ಪಾಪದ ಶೇಷ ತುತ್ತು ಅನ್ನಕ್ಕಾಗಿ ಹಮಾಲಿ ಕೆಲಸ ಮಾಡುವಂತೆ ಮಾಡಿ ಕೊನೆಗೂ ಇದೀಗ ಜೈಲು ಪಾಲಾಗುವಂತೆ ಮಾಡಿದೆ. ಹೌದು ರಾಜ್ಯಾಧ್ಯಾಂತ ಸದ್ದು ಮಾಡಿದ್ದ ಹೊನ್ನಾವರದಲ್ಲಿ ನಡೆದ ಗರ್ಭಧರಿಸಿದ್ದ ಗೋ ಹತ್ಯೆ ಪ್ರಕರಣವನ್ನ ಎರಡು ತಿಂಗಳ ನಂತರ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದರು.
Honnavar |KSRTC ಬಸ್ ಗೆ ಡಿಕ್ಕಿ ಹೊಡೆದ ಓಮಿನಿ-ಚಾಲಕ ಸಾವು
ಜನವರಿ 19 ರಂದು ಸಾಲ್ಕೋಡಿನ ಕೃಷ್ಣ ಆಚಾರಿಯವರ ಪ್ರೀತಿಯಿಂದ ಸಾಕಿದ್ದ ಹಸು ಹತ್ಯೆಯಾಗಿದ್ದನ್ನು ನೋಡಿ ಚಿರತೆ ಕೊಂದಿರಬಹುದು ಎಂದುಕೊಂಡಿದ್ದರು.ಆದ್ರೆ ಹಸುವಿನ ತಲೆ ,ಕಾಲುಗಳನ್ನು ಕತ್ತರಿಸಿ ಮಾಂಸ ಕೊಂಡೊಯ್ದುದನ್ನು ನೋಡಿದ ಅವರು ಮಾಂಸಕ್ಕಾಗಿ ಕೊಂಡೊಯ್ದಿರುವ ಸಂಶಯದಿಂದ ತಕ್ಷಣ ದೂರು ನೀಡಿದರು. ಆರು ತಿಂಗಳ ಗರ್ಭ ಧರಿಸಿದ್ದ ಹಸು ಹತ್ಯೆ ಜಿಲ್ಲೆಯಲ್ಲಿ ಅಲ್ಲದೇ ರಾಜ್ಯದಲ್ಲೂ ಸದ್ದು ಮಾಡಿತ್ತು.ಸರ್ಕಾರ ಸಹ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿತು.
ಇದರ ಬೆನ್ನಲ್ಲೇ ಈ ಹಿಂದಿನ ಪೊಲೀಸ್ ವರಿಷ್ಟಾಧಿಕಾರಿ ಎಂ. ನಾರಾಯಣ್ ಆರು ತಂಡಗಳನ್ನು ಮಾಡಿ ತನಿಖೆ ಕೈಗೊಂಡರು.ಸುಮಾರು 800ಕ್ಕೂ ಅಧಿಕ ಜನರನ್ನ ಪೊಲೀಸರು ವಿಚಾರಣೆ ನಡೆಸಿ ಹಸುವನ್ನ ಕೊಂದವರು ಗುರುತಿಸಿದ್ದ ಪೊಲೀಸರು ಆರೋಪಿಗಳ ಬಂಧನಕ್ಕೆ ಜಾಡು ಬೀಸಿದ್ದರು. ಆರೋಪಿಗಳನ್ನ ಹುಡುಕಿಕೊಟ್ಟವರಿಗೆ ಬಹುಮಾನವನ್ನ ಸಹ ಕೊಡಲಾಗುವುದು ಎಂದು ಘೋಷಣೆ ಮಾಡಿದ್ದರು. ಅಂತಿಮವಾಗಿ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ವಾಸೀಂ ಎಂಬಾತನನ್ನ ಮುಂಬೈನಲ್ಲಿ ಬಂಧಿಸಿದಂತೆ ಇನ್ನೋರ್ವ ಆರೋಪಿ ಮುಜಾಮಿಲ್ ಎನ್ನುವಾತನನ್ನ ಭಟ್ಕಳದಲ್ಲಿ ಬಂದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
Kumta|ನಾವ್ಯಾರೂ ಸಿಎಂ ರೇಸ್ ನಲ್ಲಿ ಇಲ್ಲ -ಸತೀಶ್ ಜಾರಕಿಹೊಳಿ
ಇನ್ನು ಪ್ರಕರಣಕ್ಕೆ ಸಹಕಾರ ಕೊಟ್ಟಿದ್ದ ಇಬ್ಬರು ಆರೋಪಿಗಳನ್ನ ಪೊಲೀಸರು ಬಂದಿಸಿದ್ದರು. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಫೈಜಾನ್ ಎನ್ನುವ ಆರೋಪಿ ಕಾಲಿಗೆ ಪೊಲೀಸರು ಗುಂಡನ್ನ ಸಹ ಹಾರಿಸಿದ್ದರು. ಇದಾದ ನಂತರ ವಾಸೀಂ ಹಾಗೂ ಮುಜಾಮಿಲ್ ಇಬ್ಬರು ಧಾರವಾಡಕ್ಕೆ ತೆರಳಿ ಅಲ್ಲಿಂದ ಮುಂಬೈ ಕಡೆ ಹೋಗಿ ತಪ್ಪಿಸಿಕೊಂಡಿದ್ದರು. ಪ್ರಕರಣ ಕೋಮು ಪ್ರಚೋಧನೆ ಉಂಟು ಮಾಡುತ್ತಿದ್ದರಿಂದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ ನಾರಾಯಣ್ ಗಂಭೀರವಾಗಿ ತೆಗೆದುಕೊಂಡು ಜಿಲ್ಲಾ ಪೊಲೀಸರ ವಿಶೇಷ ತಂಡವನ್ನ ಸಹ ಕೇರಳ,ಗೋವಾ,ಮಹರಾಷ್ಟ್ರ, ರಾಜಸ್ಥಾನಗಳಿಗೂ ಕಳುಹಿಸಿದ್ದರು. ಇನ್ನು ಆರೋಪಿಗಳಾದ ವಾಸಿಂ , ಮುಜಾಮಿಲ್ ಮದ್ಯ ವ್ಯಸನಿಗಳಾಗಿದ್ದರು. ಕುಡಿತದ ಹಣಕ್ಕಾಗಿ ತಮ್ಮೂರಿನ ಸುತ್ತಮುತ್ತ ಇರುವ ಗೋವುಗಳನ್ನು ಕದ್ದು ಹತ್ಯೆ ಮಾಡಿ ಮಾರಾಟ ಮಾಡಿ ಬಂದ ಹಣದಲ್ಲಿ ಮೋಜು ಮಸ್ತಿ ಮಾಡುತಿದ್ದರು .ಮೊದಲು ಕದ್ದ ಹಸುಗಳ ಫೋಟೋ ಹೊಡೆದು ತನ್ನ ಗ್ರಾಹಕರಿಗೆ ಕಳುಹಿಸಿ ಮಾಂಸ ಮಾರಾಟ ಮಾಡುತಿದ್ದರು. ಬಂದ ಹಣದಲ್ಲಿ ಕಂಠಪೂರ್ತಿ ಕುಡಿದು ಮೋಜು ಮಾಡುತಿದ್ದರು.ಎಲ್ಲಿ ತನ್ನ ಇಬ್ಬರು ಸಹಚರರು ಪೊಲೀಸರ ಅಥಿತಿಯಾದರೂ ಹೊನ್ನಾವರದಿಂದ ಧಾರವಾಡಕ್ಕೆ ಹೋಗಿ ಮುಂಬೈ ನಲ್ಲಿ ತಲೆಮರಸಿಕೊಂಡಿದ್ದರು. ಕೈಯಲ್ಲಿದ್ದ ಹಣ ಕಾಲಿಯಾಗಿ ತುತ್ತು ಅನ್ನಕ್ಕೆ ಪರದಾಡುವಂತಾಯಿತೋ ವಾಸಿಂ ಮುಂಬೈ ನಲ್ಲಿ ಹಮಾಲಿ ಕೆಲಸ ಮಾಡಿದರೇ ತುತ್ತು ಅನ್ನಕ್ಕೂ ಕಷ್ಟವಾದಾಗ ಮುಜಾಮಿಲ್ ಭಟ್ಕಳಕ್ಕೆ ಮರಳಿದ್ದನು. ಈತ ಭಟ್ಕಳಕ್ಕೆ ಬಂದ ಮಾಹಿತಿಯನ್ನು ಸ್ಥಳೀಯರೊಬ್ಬರು ನೀಡಿದ್ದು ತಕ್ಷಣ ಭಟ್ಕಳದಲ್ಲಿ ಆತನನ್ನು ಬಂಧಿಸಿದ್ರೆ, ಮುಂಬೈ ನಲ್ಲಿ ಓರ್ವ ವ್ಯಕ್ತಿಯೊಬ್ಬರು ನೀಡಿದ ಮಾಹಿತಿಯಿಂದ ವಾಸಿಂ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
Honnavar |ಗೇರುಸೊಪ್ಪ ಬಳಿ ಕಾರು ಅಪಘಾತ| ಇಬ್ಬರು ಸಜೀವ ದಹನ
ಆದರೇ ಇದೀಗತ್ತೆ ಗೋಹತ್ಯೆಗಳು ನಡೆಯುತಿದ್ದು ಕೃಷಿಕರ ಹಸುಗಳನ್ನ ಟಾರ್ಗೆಟ್ ಮಾಡಿ ಹತ್ಯೆ ಮಾಡುಮೂಲಕ ಮಾಂಸ ಮಾರಾಟ ಜಾಲ ಸಕ್ರಿಯವಾಗಿದೆ.







