Ankola|ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯ್ಕ ಹತ್ಯೆ ಪ್ರಯತ್ನದ ಹಿಂದೆ ಪ್ರಭಾವಿಗಳ ಕೈವಾಡ !?

Ankola:Four suspects from Goa have been arrested in connection with the attempted murder of Congress leader Gopalakrishna Naik in Ankola. Police suspect political rivalry behind the planned attack.
Congress leader Gopalakrishna Naik attack in Ankola, police arrest Goa-based accused in murder attempt case Congress leader Gopalakrishna Naik attack in Ankola, police arrest Goa-based accused in murder attempt case
Congress leader Gopalakrishna Naik attack in Ankola, police arrest Goa-based accused in murder attempt case

Ankola|ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯ್ಕ ಹತ್ಯೆ ಪ್ರಯತ್ನದ ಹಿಂದೆ ಪ್ರಭಾವಿಗಳ ಕೈವಾಡ !?

Ankola/ಕಾರವಾರ :- ನಿನ್ನೆ ದಿನ ಅಂಕೋಲಾ (ankola) ದಲ್ಲಿ ಗೋಪಾಲಕೃಷ್ಣ ನಾಯಕ ಮೇಲಿನ ಹತ್ಯೆ ಯತ್ನ ಘಟನೆ ಬೆನ್ನಲ್ಲೇ ಪೊಲೀಸರು ಗೋವಾ ಮೂಲದ ನಾಲ್ಕು ಜನ ಆರೋಪಿಗಳನ್ನ ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಅಂಕೋಲ ಭಾಗದಲ್ಲಿ ರಾಜಕೀಯವಾಗಿ ಬೆಳೆದು ನಿಂತಿದ್ದರು. ಗೃಹ ಸಚಿವ ಡಾ. ಜಿ ಪರಮೇಶ್ವರ ಆಪ್ತರಾಗಿದ್ದ ಗೋಪಾಲ ನಾಯಕ ಹಲವರ ವಿರೋಧ ಕಟ್ಟಿಕೊಂಡಿದ್ದರು. ರಾಜಕೀಯವಾಗಿ ಇದೇ ಅವರಿಗೆ ಉರುಳಾಗಿದೆ ಎನ್ನಲಾಗಿದೆ.

Advertisement

Ankola| ಗೋಪಾಲ್ ನಾಯ್ಕ ಹತ್ಯೆಗೆ ವಿಫಲ ಪ್ರಯತ್ನ ಪರಾರಿಯಾದ ಆರೋಪಿಗಳ ಬಂಧನ

ಆರೋಪಿಗಳೆಲ್ಲಾ ಗೋವಾ ಮೂಲದವರಾಗಿದ್ದು ,ಕೊಲೆಗೆ ಮೂರು ತಿಂಗಳಿನಿಂದ ಸ್ಕೆಚ್ ನಡೆದಿತ್ತು.

ಅಂಕೋಲಾದಲ್ಲಿಯೇ ಮನೆ ಮಾಡಿ ಸ್ಕೆಚ್ ಹಾಕಿದ್ದ ಹಂತಕರು ಸೂಕ್ತ ಸಮಯ ಹುಡುಕುತಿದ್ದರು ಎನ್ನಲಾಗಿದೆ.

Ankola gopal Krishna naik case
ಹತ್ಯೆ ಯತ್ನ ನಡೆಸಿ ಪರಾರಿಯಾಗಿತ್ತಿರುವ ಆರೋಪಿಗಳು

ಸದಾ ಯುವಕರ, ಬೆಂಬಲಿಗರ ಜೊತೆ ಇರುತ್ತಿದ್ದ ಗೋಪಾಲ್ ನಾಯಕ ಒಬ್ಬಂಟಿ ಯಾಗಿ ಇರುವುದನ್ನ ಸ್ಕೆಚ್ ಹಾಕಿದ್ದ ಹಂತಕರು ನಿನ್ನೆ ಶೇವಿಂಗ್ ಮಾಡಿಸಲು ಒಬ್ಬರೇ ತೆರಳುವ ವೇಳೆ ಅಟ್ಯಾಕ್ ಮಾಡಲಾಗಿತ್ತು.

ಹಂತಕರಿಂದ ತಪ್ಪಿಸಿಕೊಂಡು ಬ್ಯಾಂಕ್ ಒಂದರೊಳಗೆ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದ ಗೋಪಾಲ‌್ ಸದ್ಯ ಮಣಿಪಾಲ್ ನಲ್ಲಿ ಚಿಕಿತ್ಸೆ ಪಡೆಯುತಿದ್ದು ಚೇತರಸಿಕೊಳ್ಳುತಿದ್ದಾರೆ.

ಅಂಕೋಲದ ಪ್ರಭಾವಿ ವ್ಯಕ್ತಿಯೊಬ್ಬರು ಗೋಪಾಲಕೃಷ್ಣ ನಾಯಕರ ಫೋಟೋ ನೀಡಿ ಕೊಲೆಗೆ ಸುಪಾರಿ ನೀಡಿದ್ದರು ಎನ್ನಲಾಗಿದೆ.

ಅವರು ಅಂಕೋಲದ ಪ್ರಭಾವಿ ವ್ಯಕ್ತಿಯಾಗಿದ್ದು ಇಬ್ಬರ ನಡುವೆ ಈ ಹಿಂದಿನಿಂದಲೂ ವೈರತ್ವ ಇತ್ತು ಎನ್ನಲಾಗಿದೆ.

Ankola| ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯ್ಕ ಹತ್ಯೆಗೆ ಯತ್ನ 

ಎಸ್ ಪಿ ದೀಪನ್ ನೇತೃತ್ವದಲ್ಲಿ ತನಿಖೆ ಮುಂದುವರೆದಿದ್ದು ತಪ್ಪಿಸಿಕೊಂಡ ಆರೋಪಿಗಳ ಪತ್ತೆಗೆ ಗೋವಾದಲ್ಲಿ ರಾತ್ರಿ ಕಾರ್ಯಾಚರಣೆ ನಡೆಸಲಾಗಿದೆ. ಕಾರವಾರದಲ್ಲಿಯೇ ಪಶ್ಚಿಮ ವಲಯ ಐಜಿಪಿ ಮೊಕ್ಕಾಂ ಹೂಡಿದ್ದು ಶೀಘ್ರ ಈ ಘಟನೆ ಹಿಂದಿನ ಸತ್ಯ ಹೊರಬರಲಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement