Miss india world 2026 ಆಗಿ ಹೊರಹುಮ್ಮಿದ ಕಾರವಾರದ ಶಾಸಕ ಸೈಲ್ ಪುತ್ರಿ ಸಾಧ್ವಿ -ವಿಡಿಯೋ ನೋಡಿ.
India news:-ಮಾಡಲಿಂಗ್ ಲೋಕದಲ್ಲಿ ದೊಡ್ಡ ಸಾಧನೆ ಮಾಡಬೇಕು ಎಂಬ ಕನಸಿನೊಂದಿಗೆ ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರ ಪುತ್ರಿ ಸಾಧ್ವಿ ಸೈಲ್ ಇದೀಗ ದೇಶದ ಪ್ರತಿಷ್ಠಿತ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2026 ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಗೋವಾ ರಾಜ್ಯವನ್ನು ಪ್ರತಿನಿಧಿಸಿದ ಸಾಧ್ವಿ ಸೈಲ್ ಅವರು 2027ರಲ್ಲಿ ನಡೆಯಲಿರುವ 74ನೇ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
Karwar| ಆಮೆ ಹೊಟ್ಟೆಯಲ್ಲಿತ್ತು ರಾಶಿ ರಾಶಿ ಪ್ಲಾಸ್ಟಿಕ್ !
ಒಡಿಶಾ ರಾಜ್ಯದ ಭುವನೇಶ್ವರದಲ್ಲಿರುವ ಕಲಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (KIIT) ನಲ್ಲಿ ನಡೆದ ರಾಷ್ಟ್ರೀಯ ಫೈನಲ್ ಸ್ಪರ್ಧೆಯಲ್ಲಿ ಒಟ್ಟು 30 ಸ್ಪರ್ಧಿಗಳು ಭಾಗವಹಿಸಿದ್ದರು. 29 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳ ನಡುವೆ ನಡೆದ ಕಠಿಣ ಸ್ಪರ್ಧೆಯಲ್ಲಿ ಸಾಧ್ವಿ ಸೈಲ್ ಎಲ್ಲರನ್ನೂ ಹಿಂದಿಕ್ಕಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ.
KIIT ವತಿಯಿಂದ ಆಯೋಜಿಸಲ್ಪಟ್ಟ 61ನೇ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯ ಅಂತಿಮ ಆಡಿಷನ್ನಲ್ಲಿ ಟಾಪ್ 23 ಫೈನಲಿಸ್ಟ್ಗಳನ್ನು ಆಯ್ಕೆ ಮಾಡಲಾಗಿತ್ತು. ಈ ಪಟ್ಟಿಯಲ್ಲಿ ಸಾಧ್ವಿ ಸೈಲ್ ಕೂಡ ಸ್ಥಾನ ಪಡೆದಿದ್ದರು. ನಂತರ ಅಂತಿಮ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿ ಕಿರೀಟ ಗೆದ್ದಿದ್ದಾರೆ.
ವಿದ್ಯಾಭ್ಯಾಸದ ಜೊತೆಗೆ ಮಾಡಲಿಂಗ್ ಕ್ಷೇತ್ರವನ್ನು ಆರಿಸಿಕೊಂಡಿರುವ ಸಾಧ್ವಿ ಸೈಲ್ ಮೊದಲು ಗೋವಾದಲ್ಲಿ ನೆಲೆಸಿದ್ದರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿರುವ ಅವರು Smile Foundation ಜೊತೆಗೂ ಸಮಾಜಸೇವೆ ಮಾಡುತ್ತಿದ್ದಾರೆ.
ತಂದೆ ಸತೀಶ್ ಸೈಲ್ ಶಾಸಕರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ತಾನೂ ಕೂಡ ಮಾಡಲಿಂಗ್ ಜೊತೆಗೆ ಸಮಾಜಸೇವೆ ಮಾಡುವ ಉದ್ದೇಶ ಹೊಂದಿದ್ದಾಗಿ ಸಾಧ್ವಿ ತಿಳಿಸಿದ್ದಾರೆ.
ರಾಜ್ಯ ಮಟ್ಟದ ಅಬಾಕಸ್ ಚಾಂಪಿಯನ್ ಆಗಿರುವ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರಶಸ್ತಿ ಪಡೆದಿರುವ ಸಾಧ್ವಿ ಸೈಲ್ ಈಗ ಮಾಡಲಿಂಗ್ ಲೋಕದಲ್ಲೂ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಹಲವು ಫ್ಯಾಷನ್ ಶೋಗಳಲ್ಲಿ ರ್ಯಾಂಪ್ ವಾಕ್ ಮೂಲಕ ಗುರುತಿಸಿಕೊಂಡಿದ್ದಾರೆ.
ಗೋವಾ ರಾಜ್ಯದ ಸಂಸ್ಕೃತಿ, ಪ್ರಕೃತಿ ಸೌಂದರ್ಯ ಮತ್ತು ಜೀವನಶೈಲಿಯ ಪ್ರೇರಣೆಯಿಂದ ಬೆಳೆದ ಸಾಧ್ವಿ ಸೈಲ್ ಅವರ ಈ ಸಾಧನೆ ಕರ್ನಾಟಕಕ್ಕೂ ಹೆಮ್ಮೆ ತಂದಿದೆ.







