Karwar| ಆಮೆ ಹೊಟ್ಟೆಯಲ್ಲಿತ್ತು ರಾಶಿ ರಾಶಿ ಪ್ಲಾಸ್ಟಿಕ್ !
ಕಾರವಾರ :-ಇಂಡೋ-ಪ್ಯಾಸಿಫಿಕ್ ಸಮುದ್ರ ಪ್ರದೇಶ ದಲ್ಲಿ ಕಾಣಸಿಗುವ ಅಪರೂಪದ ಹಾಕ್ಸ್ಬಿಲ್ ಸಮುದ್ರ ಆಮೆಯು ಕಾರವಾರದ (karwar) ರವೀಂದ್ರನಾಥ ಟಾಗೋರ್ ಕಡಲತೀರದಲ್ಲಿ ಶವವಾಗಿ ಪತ್ತೆಯಾಗಿದ್ದು ಮರಣೋತ್ತರ ಪರೀಕ್ಷೆಯಲ್ಲಿ ಆಮೆಯ ಹೊಟ್ಟೆಯಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ಪತ್ತೆಯಾಗಿದೆ.
Ankola|ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯ್ಕ ಹತ್ಯೆ ಪ್ರಯತ್ನದ ಹಿಂದೆ ಪ್ರಭಾವಿಗಳ ಕೈವಾಡ !?
ಸುಮಾರು 30 ರಿಂದ 40 ವರ್ಷ ಪ್ರಾಯದ ಆಮೆ ಇದಾಗಿದೆ .Hawksbill sea turtle (Eretmochelys imbricata) ಕಡಲಾಮೆಗಳಲ್ಲೇ ಅಪರೂಪದ ಹಾಗೂ ಅತ್ಯಂತ ಸುಂದರ ಸಮುದ್ರ ಆಮೆ ಎಂಬ ಖ್ಯಾತಿ ಹೊಂದಿದೆ. ಇದರ ಚಿಪ್ಪಿನ (shell) ಮೇಲೆ ಇರುವ ಬಣ್ಣದ ವಿನ್ಯಾಸ ಮತ್ತು ತೀಕ್ಷ್ಣ ಚಿಲುಮೆ (beak) ಇದನ್ನು ಬೇರೆ ಆಮೆಗಳಿಗಿಂತ ವಿಭಿನ್ನಗೊಳಿಸುತ್ತದೆ. ಹೀಗಾಗಿ ಇವುಗಳ ಚಿಪ್ಪುಗಳನ್ನು ಆಭರಣ ತ್ಯಯಾರಿಕೆಗೆ ಬಳಕೆ ಮಾಡುತಿದ್ದು ಇದೀಗ ಇವು ಸಮುದ್ರ ಬೇಟೆಯಿಂದ ಹಾಗೂ ಸಮುದ್ರದ ಮಾಲಿನ್ಯದಿಂದ ಅವನತಿಯತ್ತ ಸಾಗಿವೆ.

Karwar | ಟಾಗೋರ್ ಕಡಲ ತೀರದಲ್ಲಿ ಸಾವು ಕಂಡ ಅಪರೂಪದ ಕಡಲಾಮೆ
ಭಾರತದ ಅಂಡಮಾನ್ ನಿಕೋಬಾರ್ ಹಾಗೂ ಲಕ್ಷ ದ್ವೀಪದಲ್ಲಿ ಇವುಗಳು ಹೆಚ್ಚಾಗಿ ಕಾಣಸಿಗುತ್ತವೆ. 40 ರಿಂದ 50 ವರ್ಷ ಬದುಕುವ ಇವು ಸಣ್ಣ ಮೀನು, ಜೇಲಿ ಫಿಶ್, ಶಂಖವನ್ನು ಸೇವಿಸುತ್ತವೆ. ಈ ಮೂಲಕ ಸಮುದ್ರದ ಆಹಾರ ಚಕ್ರವನ್ನು ಸುಸ್ತಿತಿಯಲ್ಲಿ ಇಡಲು ಪ್ರಮುಖ ಪಾತ್ರ ವಹಿಸುತ್ತವೆ. ಆದರೇ ಸಮುದ್ರದ ಮಾಲಿನ್ಯದಿಅಮದ ಪ್ಲಾಸ್ಟಿಕ್ ತಿನ್ನುವ ಸ್ಥಿತಿಗೆ ಆಮೆಗಳು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.







