Dandeli-joida -ಪ್ರತ್ತೇಕ ಅಪಘಾತ ಅತೀ ವೇಗ ತಂತು ಪ್ರಾಣಕ್ಕೆ ಕುತ್ತು!

Two people died and three were injured in separate road accidents near Dandeli and Joida in Uttara Kannada district due to high-speed driving. Police have registered cases.
joida dandeli joida dandeli

Dandeli-joida -ಪ್ರತ್ತೇಕ ಅಪಘಾತ ಅತೀ ವೇಗ ತಂತು ಪ್ರಾಣಕ್ಕೆ ಕುತ್ತು!.

ಅತೀ ವೇಗ ತಂದ ಅಪಘಾತ -ಇಬ್ಬರು ಸಾವು

Dandeli/joida  :- ಅತೀ ವೇಗದ ಚಾಲನೆಯಿಂದ ಕಾರೊಂದು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾದ ಪರಿಣಾಮ ಇಬ್ಬರು ಸಾವುಕಂಡು ಓರ್ವ ಗಂಭೀರ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲ್ಲೂಕಿನ

 ಕರ್ಕಾ ಕ್ರಾಸ್ ನ ಅಜಗಾಂವ ಬಳಿ ನಡೆದಿದೆ. ಧಾರವಾಡದ ಫಾರೂಖ್ ಸಾಬ್ ಮತ್ತು ಹಳಿಯಾಳದ ಮುದಸ್ಸಿರ್ ಇಸ್ಮಾಯಿಲ್ ಮುಲ್ಲಾ ಮೃತ ವ್ಯಕ್ತಿಗಳಾಗಿದ್ದು

ಮೃತದೇಹಗಳನ್ನು ಹಳಿಯಾಳ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ದಾಂಡೇಲಿ ಯಿಂದ ಹಳಿಯಾಳಕ್ಕೆ ಹೋಗುವಾಗ ಈ ಘಟನೆ ನಡೆದಿದ್ದು ಡಿಕ್ಕಿಯ ರಭಸಕ್ಕೆ ಕಾರು ಮರದಲ್ಲಿ ಸಿಲುಕಿಕೊಂಡಿತ್ತು. ಘಟನೆ ಸಂಬಂಧ ದಾಂಡೇಲಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಟ್ರಾಕ್ಸ್ ಮತ್ತು ಬೈಕ್ ನಡುವೆ ಅಪಘಾತ -ಇಬ್ಬರು ಗಂಭೀರ

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ (joida) ತಾಲೂಕಿನ ಗುಂದ ಗ್ರಾಮದ ಬಳಿ ಬೈಕ್ ಹಾಗೂ ಟ್ರಾಕ್ಸ್ ನಡುವೆ ಅಪಘಾತವಾಗಿ ಇಬ್ಬರು ಯುವಕರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

Joida |ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ವಿ.ಎ

ಬೈಕ್ ಸವಾರರು ಹಾಗೂ ಎದುರಿನಿಂದ ಬಂದ ಕ್ರೂಜರ್ ಟ್ರಾಕ್ಸ್ ನಡುವೆ ಸಂಭವಿಸಿದ ಡಿಕ್ಕಿಯಿಂದ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉಳವಿಯಿಂದ ಕಲಘಟಗಿ ಗೆ ತೆರಳುವಾಗ ಬೈಕ್ ಗೆ ಟ್ರಾಕ್ಸ್ ಡಿಕ್ಕಿಹೊಡೆದಿದೆ.

ಅಪಘಾತದಲ್ಲಿ ಕಲಘಟಗಿಯ ವಿನಾಯಕ ಮತ್ತು ಆಕಾಶ ಎಂಬ ಬೈಕ್ ಸವಾರರಿಗೆ ಗಾಯವಾಗುದ್ದು ,ಗಾಯಾಳುಗಳನ್ನ  ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನೆ ಸಂಬಂಧ joida  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement