Karwar | ನಾಲ್ಕು ತಿಂಗಳ ಫರಿಶ್ರಮ ಕೈಗಾ ಅಣುಸ್ಥಾವರಕ್ಕೆ ಹೊರಟಿದ್ದ ವಿಕಿರಣ ರಕ್ಷಾ ಕವಚ ಹೊತ್ತ ವಾಹನ ಪಲ್ಟಿ -ಏನಾಯ್ತು?
ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣುಸ್ಥಾವರಕ್ಕೆ ಕೊಂಡೊಯ್ಯಲಾಗುತಿದ್ದ ಬೃಹತ್ ವಿಕಿರ್ಣ ರಕ್ಷಾ ಕವಚ ಹೊತ್ತಾ ವಾಹನ ಕೈಗಾಗೆ ತಲುಪಲು ನಾಲ್ಕು ಕಿಲೋಮೀಟರ್ ನಡುವೆಯೇ ಪಲ್ಟಿಯಾಗಿ ಬಿದ್ದ ಘಟನೆ ಕಾರವಾರ ತಾಲೂಕಿನ ಹಟುಗಾ ಗ್ರಾಮದಲ್ಲಿ ನಡೆದಿದೆ.
Kaiga:ಕೈಗಾದಲ್ಲಿ ಎರಡು ಹೊಸ ಅಣು ವಿದ್ಯುತ್ ಘಟಕ: ಈವರೆಗೆ ಕನ್ನಡಿಗರಿಗೆ ಸಿಕ್ಕಿದ್ದೆಷ್ಟು ಉದ್ಯೋಗ ಗೊತ್ತಾ
ಫೆಬ್ರವರಿ 9 ಕ್ಕೆ ಸೂರತ್ ನಿಂದ ಕೈಗಾ ಅಣುಸ್ಥಾವರ ಘಟಕಕ್ಕೆ ವಿಕಿರ್ಣ ರಕ್ಷಾ ಕವಚವನ್ನು ಕೊಂಡೊಯ್ಯಲಾಗುತಿತ್ತು. ಹಲವು ದಿನದಿಂದ ಪರಿಶ್ರಮ ಪಟ್ಟು ಸೂರತ್ ನಿಂದ ಕಾರವಾರ ನಗರವನ್ನ ದಾಟಿದ ಈ ಬೃಹತ್ ಮಲ್ಟಿ ಎಕ್ಸಲ್ ವಾಹನ ಕೈಗಾಗೆ ಹೋಗುವ ಮಾರ್ಗದ ತಿರುವಿನಲ್ಲಿ ಟಯರ್ ಬ್ಲಾಸ್ಟ್ ಆಗಿ ತನ್ನ ನಿಯಂತ್ರಣ ಕಳೆದುಕೊಂಡಿದೆ. ಈ ವೇಳೆ ತಿರುವಿನಲ್ಲೇ 140 ಟನ್ ತೂಕದ ಯಂತ್ರ ಹೊತ್ತ ವಾಹನವೂ ಕೂಡ ಪಲ್ಟಿಯಾಗಿ ಇದರಲ್ಲಿದ್ದ ಬೃಹತ್ ಯಂತ್ರ ಕೂಡ ಬಿದ್ದಿದೆ.

Kaiga|ಬಿಗಿ ಭದ್ರತೆಯಲ್ಲೇ ಕೈಗಾ ಅಣುಸ್ಥಾವರದಲ್ಲಿ ತಾಮ್ರ ಕಳ್ಳತನ| ಸಿಕ್ಕಿಬಿದ್ದವರ ಮೇಲೆ ಹಲವು ಅನುಮಾನ?
ಅದೃಷ್ಟವಶಾತ್ ಯಾರಿಗೂ ಏನೂ ಸಮಸ್ಯೆಯಾಗಿಲ್ಲ. ಹೀಗಾಗಿ ನಿಟ್ಟುಸಿರು ಬಿಡುವಂತಾಗಿದೆ.ಸಧ್ಯ ವಾಹನವನ್ನು ಮೇಲೆತ್ತುವ ಕಾರ್ಯ ನಡೆಯುತಿದ್ದು ಕೈಗಾ-ಇಳಕಲ್ ಹೆದ್ದಾರಿ ಭಾರೀ ವಾಹನ ಸಂಚಾರ ಬಂದ್ ಆಗಿದೆ.
Kaiga| ಕೈಗಾ 5&6 ನೇ ಘಟಕದಲ್ಲಿ ಉದ್ಯೋಗಕ್ಕಾಗಿ ಅರ್ಜಿ ಹಾಕಿದವರು 3000 ,ತರಬೇತಿಗೆ ಬಂದವರು 180 ಜನ!
ಈ ಯಂತ್ರವನ್ನು ಕೈಗಾ (kaiga) ಅಣುಸ್ಥಾವರದಲ್ಲಿ 5 ಮತ್ತು 6 ನೇ ಘಟಕದಲ್ಲಿ ವಿಕಿರ್ಣ ರಕ್ಷಾ ಕವಚವನ್ನ ಅಳವಡಿಸಲು ತರಲಾಗುತಿತ್ತು. ಇದರ ಹೊಣೆಯನ್ನ L&T ಕಂಪನಿ ನಿರ್ವಹಿಸುತಿದ್ದು, 140 ಟನ್ ತೂಕದ ಯಂತ್ರವನ್ನು ನೆಪ್ರೋಸ್ ಟ್ರಾನ್ಸ್ಪೋರ್ಟ್ ಕಂಪನಿಯಿಂದ ತರಲಾಗುತಿತ್ತು.







