Kaiga| ಕೈಗಾ 5&6 ನೇ ಘಟಕದಲ್ಲಿ ಉದ್ಯೋಗಕ್ಕಾಗಿ ಅರ್ಜಿ ಹಾಕಿದವರು 3000 ,ತರಬೇತಿಗೆ ಬಂದವರು 180 ಜನ!
Kaiga:- ಆತ್ಮ ನಿರ್ಭರ್ ಯೋಜನೆಯಡಿ ಭಾರತ ತನ್ನ ಸ್ವಾಲಂಭಿತನವನ್ನು ಘಟ್ಟಿಗೊಳಿಸಿಕೊಳ್ಳುತಿದ್ದು ಉತ್ತರ ಕನ್ನಡ ಜಿಲ್ಲೆಯ(uttara Kannada) ಕೈಗಾದಲ್ಲಿ ಯಾವುದೇ ದೇಶದ ತಂತ್ರಜ್ಞಾನ ಬಳಸಿಕೊಳ್ಳದೇ ತನ್ನದೇ ತಂತ್ರಜ್ಞಾನದ ಮೂಲಕ ಕೈಗಾದಲ್ಲಿ 5 ಮತ್ತು 6 ನೇ ಅಣು ವಿದ್ಯುತ್ ಸ್ಥಾವರವನ್ನ ನಿರ್ಮಾಣ ಮಾಡುತ್ತಿದೆ.
Kaiga|ಬಿಗಿ ಭದ್ರತೆಯಲ್ಲೇ ಕೈಗಾ ಅಣುಸ್ಥಾವರದಲ್ಲಿ ತಾಮ್ರ ಕಳ್ಳತನ| ಸಿಕ್ಕಿಬಿದ್ದವರ ಮೇಲೆ ಹಲವು ಅನುಮಾನ?
ಹೌದು ದೇಶದ ಅತೀ ದೊಡ್ಡ ಅಣು ವಿದ್ಯುತ್ ಉತ್ಪಾದನಾ ಘಟಕದಲ್ಲಿ ಒಂದಾದ ಉತ್ತರ ಕನ್ನಡ ಜಿಲ್ಲೆಯ ಕೈಗಾದಲ್ಲಿ 21 ಸಾವಿರ ಕೋಟಿ ವೆಚ್ಚದಲ್ಲಿನ 5 ಮತ್ತು 6 ನೇ ಅಣು ವಿದ್ಯುತ್ ಘಟಕ ನಿರ್ಮಾಣವಾಗುತಿದ್ದು , ಈ ಕಾರ್ಯಕ್ಕೆ ಅಣು ಶಕ್ತಿ ಆಯೋಗದ ಅಧ್ಯಕ್ಷ ಅಜಿತ್ ಕುಮಾರ್ ಮೊಹಂತಿ ರಿಂದ ಕಾಂಕ್ರೀಟೀಕರಣಕ್ಕೆ ಚಾಲನೆ ದೊರೆತಿದೆ.
ಕಾರವಾರ ತಾಲೂಕಿನ ಕೈಗಾ ದಲ್ಲಿ 2000 ರಲ್ಲಿ ಕೈಗಾ ಅಣು ವಿದ್ಯುತ್ ಉತ್ಪಾದನೆ ಕೇಂದ್ರ ಪ್ರಾರಂಭಗೊಂಡಿತ್ತು.ಪ್ರಸ್ತುತ 220 ಮೆಗಾ ಸಾಮರ್ಥ್ಯದ 4 ಅಣು ಘಟಕಗಳು ವಿದ್ಯುತ್ ಉತ್ಪಾದನೆ ನಡೆಸುತ್ತಿದೆ.ನಾಲ್ಕು ಘಟಕದಿಂದ 2,280 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ನಡೆಸುತ್ತಿದೆ.ಆದ್ರೆ ಇದೀಗ ಪ್ರಸ್ತುತ 220 ಮೆಗಾ ವ್ಯಾಟ್ ಗಿಂತ ದುಪ್ಪಟ್ಟು ವಿದ್ಯುತ್ ಉತ್ಪಾದನೆ ನಡೆಸುವ ಸಾಮರ್ಥ್ಯದ ಹಾಗೂ ವಿದೇಶದ ಯಾವುದೇ ತಂತ್ರಜ್ಞಾನ ಬಳಸದೇ ಪ್ರತಿ ವಸ್ತುಗಳನ್ನು ಭಾರತದಲ್ಲೇ ಸಿದ್ದಪಡಿಸಿ ತಲಾ 700 ಮ್ಯಾಗಾವ್ಯಾಟ್ ನ ಗುರಿಯೊಂದಿಗೆ 2025 ರಲ್ಲಿ 5 ಮತ್ತು 6 ನೇ ಘಟಕ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.
ಇದೀಗ ಈ ಕಾಮಗಾರಿ ಕಾಂಕ್ರೀಟೀಕರಣ ಹಂತ ತಲುಪಿದ್ದು ಭಾನುವಾರ ಕಾಂಕ್ರೀಟೀಕರಣ ಚಾಲನೆ ನೀಡಲಾಗಿದೆ.2030 ರ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಇನ್ನು ದೇಶದಲ್ಲಿ ಪಿ.ಹೆಚ್.ಡಬ್ಲು ಮಾದರಿ(ಪ್ರಸರೈಸಡ್ ಹೆವೀ ವಾಟರ್ ರಿಯಾಕ್ಟರ್ ) ಹತ್ತು ಯುನಿಟ್ ಗಳನ್ನ ಮಂಜೂರು ಮಾಡಲಾಗಿದೆ.
ಇದರಲ್ಲಿ ಗುಜರಾತ್ ,ರಾಜಸ್ಥಾನ್ ಸೇರಿ ಮೂರು ರಾಜ್ಯಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.ಇನ್ನು ಹೊಸದಾಗಿ ನಿರ್ಮಾಣವಾದ ಘಟಕ ಪೂರ್ಣಗೊಂಡ ನಂತರ 1,33876 ಮಿಲಿಯನ್ ಯುನಿಟ್ಸ್ ಗ್ರೀನ್ ಎನರ್ಜಿ ಉತ್ಪಾದನೆಯಾಗುತ್ತದೆ.
ಈ ಮೂಲಕ ಕೈಗಾ ಅಣುಸ್ಥಾವರದಲ್ಲಿ 2,280 ಮೆಗಾ ವ್ಯಾಟ್ ಉತ್ಪಾದನೆ ಹೆಚ್ಚಲಿದೆ. ಈ ಮೂಲಕ ಈ ದೇಶದಿಂದ ರಷ್ಯಾ, ಗಲ್ಪ್ ರಾಷ್ಟ್ರಗಳಿಗೆ ವಿದ್ಯುತ್ ಪೂರೈಕೆಯ ಗುರಿ ಹೊಂದಿದ್ದು ,ಭಾರತದ ತಂತ್ರಜ್ಞಾನ ಬಳಸಿ ಅಣು ಸ್ಥಾವರಗಳಲ್ಲಿ ಸ್ವದೇಶಿ ನಿರ್ಮಿತ ಹೊಸ ತಾಂತ್ರಿಕತೆಯನ್ನ ಅಳವಡಿಸಿಕೊಳ್ಳಲು ಸಿದ್ದವಾಗಿದೆ ಎನ್ನುತ್ತಾರೆ ಅಣು ಶಕ್ತಿ ಆಯೋಗದ ಅಧ್ಯಕ್ಷ ಅಜಿತ್ ಕುಮಾರ್ ಮೊಹಂತಿ.
ಸ್ಥಳೀಯರಿಗಿಲ್ಲ ಉದ್ಯೋಗ
ಇನ್ನು ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ ಬುದು ದೊಡ್ಡ ದೂರು.ಈಗಾಗಲೇ ಈ ಕುರಿತು ಕೈಗಾದಲ್ಲಿ ಹಲವು ಪ್ರತಿಭಟನೆಗಳು ನಡೆದಿದ್ದವು. ಇನ್ನು ಇದೀವ ಕೈಗಾದ 5&6 ನೇ ಘಟಕ ಕಾಮಗಾರಿಗೆ ಚಾಲನೆ ನೀಡಲಾಗಿದ್ದು ,ಇಲ್ಲಿಯೂ ಸಹ ಸ್ಥಳೋಯರನ್ನ ನಿರ್ಲಕ್ಷಿಸಲಾಗಿದೆ ಎಂದು ಸೋಮವಾರ ಕೈಗಾದ ಕೆಪಿಸಿ ಕಾಲೋನಿಯಲ್ಲಿ ಉದ್ಯೋಗಾಕಾಂಕ್ಷಿಗಳು ದೊಡ್ಡ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಸ್ಥಳೀಯರಿಗೆ ಕೌಶಲ್ಯ ಕೊರತೆ.
ಇನ್ನು ಕೈಗಾದಲ್ಲಿ (kaiga)ಹೊಸ ಅಣುಸ್ಥಾವರದಲ್ಲಿ ಉದ್ಯೋಗ ಅವಕಾಶಗಳು ಸಹ ಹೆಚ್ಚು ಏರಿಕೆ ಆಗುತ್ತಿದೆ. ಸ್ಥಳೀಯರಿಗೆ ಉದ್ಯೋಗ ಕೊಡಲು ಸಾಕಷ್ಟು ಪ್ರಯತ್ನ ನಡೆಯುತ್ತಿದೆ ಎನ್ನುತ್ತಾರೆ ಕೈಗಾದ ಸ್ಥಾನಿಕ ನಿರ್ದೇಶಕರು.
Kaiga| ಕೈಗಾ ಅಣು ತ್ಯಾಜ್ಯ ಘಟಕದಲ್ಲಿ ತುಂಡಾಗಿ ಬಿದ್ದ ಗೇಟ್ | CISF ಯೋಧ ಸಾವು
ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಅವರು ಈಗಾಗಲೇ ಕೈಗಾ ಅಣು ಸ್ಥಾವರದಲ್ಲಿ ಖಾಯಂ ಆಗಿ 1358 ಉದ್ಯೋಗಿಗಳು ಕಾರ್ಯನಿರ್ವಹಿಸುತಿದ್ದು 805 ಜನಕರ್ನಾಟಕದವರಾಗಿದ್ದಾರೆ.ಇದರಲ್ಲಿ 400 ಜನ ಉದ್ಯೋಗಿಗಳು ಉತ್ತರ ಕನ್ನಡ ಜಿಲ್ಲೆಯವರಾಗಿದ್ದಾರೆ. ಆದರೇ ಇತ್ತೀಚಿನ ದಿನದಲ್ಲಿ ಸ್ಥಳೀಯರ ಕೌಶಲ್ಯಾಭಿವೃದ್ಧಿ ಕೊರತೆಯಿಂದ ಗ್ರೂಪ್ ಎ ಮತ್ತು ಗ್ರೂಪ್ ಬಿ ಉದ್ಯೋಗವನ್ನು ಸ್ಥಳೀಯರು ಪಡೆಯುವಲ್ಲಿ ವಿಫಲರಾಗಿದ್ದಾರೆ.
ಕೆಲವು ದಿನದ ಹಿಂದೆ ಕೈಗಾದ 5 ಮತ್ತು 6 ನೇ ಘಟಕಕ್ಕಾಗಿ ಸ್ಥಳೀಯ ಉದ್ಯೋಗಾಕಾಂಕ್ಷಿಗಳನ್ನ ಕರೆದಿದ್ದು ತರಬೇತಿಗಾಗಿ 3000 ಜನ ಅರ್ಜಿ ಹಾಕಿದರೇ ಹಾಜುರಾಗಿದ್ದು ಮಾತ್ರ ಕೇವಲ
180 ಜನ ಮಾತ್ರ. ಇನ್ನು ಕೌಶಲ್ಯವೃದ್ಧಿಗಾಗಿ ಕೈಗಾದಿಂದ ಕಾರವಾರ, ಮಲ್ಲಾಪುರ,ಅಂಕೋಲ ಭಾಗದಲ್ಲಿ ತರಬೇತಿ ಕೇಂದ್ರ ತೆರೆದರೂ ಆಕಾಂಕ್ಷಿಗಳು ಬಾರದೇ ಮುಚ್ಚುವಂತಾಗಿದೆ. ಸ್ಥಳೀಯರು ಇಂತಹ ಅವಕಾಶವನ್ನು ಪಡೆದುಕೊಳ್ಳಬೇಕು ಎಂದು ಕೈಗಾ ಘಟಕದ ಸ್ಥಾನಿಕ ನಿರ್ದೇಶಕ ವಿನೋದ್ ಕುಮಾರ್ ತಿಳಿಸಿದ್ದಾರೆ.
