Yallapur |ಕಂಟೇನರ್ ಲಾರಿ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಸಾವು

ಯಲ್ಲಾಪುರ ತಾಲೂಕಿನ ಇಡಗುಂದಿ ಸಮೀಪ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಕಂಟೇನರ್ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಹರೀಶ ಭೂಪತಿ ಸಿದ್ದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Yallapur, Idagundi Accident, Container Lorry Accident, Bike Rider Death, NH 52 Yallapur, Idagundi Accident, Container Lorry Accident, Bike Rider Death, NH 52

Yallapur |ಕಂಟೇನರ್ ಲಾರಿ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಸಾವು

ಕಾರವಾರ :- ಯಲ್ಲಾಪುರ (yallapur)ತಾಲೂಕಿನ ಇಡಗುಂದಿ ಸಮೀಪದ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಕಂಟೇನರ್ ಲಾರಿಯ ಚಕ್ರದ ಅಡಿಗೆ ಸಿಲುಕಿ ಬೈಕ್ ಸವಾರರೊಬ್ಬರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.

ಯಲ್ಲಾಪುರ ತಾಲೂಕಿನ ದೋಣಗಾರ ನಿವಾಸಿಯಾದ ಹರೀಶ ಭೂಪತಿ ಸಿದ್ದಿ (21 ವರ್ಷ) ಮೃತಪಟ್ಟ ದುರ್ದೈವಿ. ಯಲ್ಲಾಪುರ ಸಮೀಪದ ಇಡಗುಂದಿ ಹಾಲು ಡೈರಿ ಹತ್ತಿರ ಈ ಘಟನೆ ನಡೆದಿದೆ.

Advertisement

ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತಿ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಿಸುತ್ತಿದ್ದ ಮಹಾರಾಷ್ಟ್ರ ನೋಂದಣಿಯ ಕಂಟೇನರ್ ಲಾರಿ ಚಾಲಕ, ಉತ್ತರ ಪ್ರದೇಶ ಮೂಲದ ಧರ್ಮೇಂದರ ಕುಮಾರ ರಜೀತಲಾಲ್ ಹೆದ್ದಾರಿಯಲ್ಲಿ ವಾಹನಗಳಿಗೆ ಅಪಾಯಕಾರಿಯಾಗಿ ಓವರ್‌ಟೇಕ್ ಮಾಡಲು ಯತ್ನಿಸಿದ್ದಾನೆ.
ಮುಂದೆ ಚಲಿಸುತ್ತಿದ್ದ ಹರೀಶ ಅವರ ಮೋಟಾರ್ ಸೈಕಲ್‌ ಅನ್ನು ಓವರ್‌ಟೇಕ್ ಮಾಡುವ ಗಡಿಬಿಡಿಯಲ್ಲಿ ಲಾರಿಯನ್ನು ಒಮ್ಮೇಲೆ ಬಲಭಾಗದಿಂದ ಎಡಭಾಗಕ್ಕೆ ಚಲಾಯಿಸಿದ್ದಾನೆ. ಈ ವೇಳೆ ಕಂಟೇನರ್ ಲಾರಿಯ ಹಿಂಭಾಗವು ಬೈಕ್‌ನ ಹ್ಯಾಂಡಲ್‌ಗೆ ತಗುಲಿದೆ. ನಿಯಂತ್ರಣ ತಪ್ಪಿ ಬೈಕ್ ಸವಾರ ಹರೀಶ್ ಲಾರಿಯ ಹಿಂಬದಿಯ ಎಡಭಾಗದ ಚಕ್ರದ ಅಡಿಗೆ ಬಿದ್ದಿದ್ದು, ಚಕ್ರವು ತಲೆಯ ಮೇಲೆ ಹರಿದ ಪರಿಣಾಮ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

Yallapur| ಕಾರಿನಲ್ಲೇ ಸುಟ್ಟು ಕರಕಲಾದ ಚಾಲಕ ಸಂಶಯಾಸ್ಪದ ಸಾವಿನ ಶಂಕೆ
ಅಪಘಾತದ ತೀವ್ರತೆಗೆ ಮೋಟಾರ್ ಸೈಕಲ್ ಸಂಪೂರ್ಣ ಜಖಂಗೊಂಡಿದೆ. ಈ ಕುರಿತು ಇಡಗುಂದಿಯ ನಿವಾಸಿ ಸುರೇಶ ಗಣಪಾ ಸಿದ್ದಿ ಅವರು ನೀಡಿದ ದೂರಿನ ಮೇರೆಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನಾ ಸ್ಥಳಕ್ಕೆ ಯಲ್ಲಾಪುರ ಪೊಲೀಸ್ ಉಪ-ನಿರೀಕ್ಷಕರಾದ ರಾಜಶೇಖರ ವಂದಲಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಾರಿ ಚಾಲಕನ ಬೇಜವಾಬ್ದಾರಿಯೇ ಅಪಘಾತಕ್ಕೆ ನೇರ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement