Haliyala|ಪಿಎಸ್‌ಐ ಹುದ್ದೆ ಕೊಡಿಸುವುದಾಗಿ ನಂಬಿಸಿ ಮಾಜಿ ಸೈನಿಕನಿಗೆ ಲಕ್ಷಾಂತರ ಹಣ ವಂಚನೆ!

ಹಳಿಯಾಳದಲ್ಲಿ ಪಿಎಸ್‌ಐ ಹುದ್ದೆ ಕೊಡಿಸುವುದಾಗಿ ನಂಬಿಸಿ ನಿವೃತ್ತ ಸೈನಿಕನಿಂದ 18.90 ಲಕ್ಷ ರೂ. ಪಡೆದು ವಂಚನೆ ನಡೆಸಿದ ಆರೋಪದಡಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಬಾಕಿ ಹಣ ಕೇಳಿದ್ದಕ್ಕೆ ಜೀವ ಬೆದರಿಕೆ ಹಾಕಿದ ಆರೋಪವೂ ಕೇಳಿಬಂದಿದೆ
ಪಿಎಸ್‌ಐ ಹುದ್ದೆ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆಗೊಳಗಾದ ನಿವೃತ್ತ ಸೈನಿಕರ ಪ್ರಕರಣದ ಸಾಂದರ್ಭಿಕ ಚಿತ್ರ. ಪಿಎಸ್‌ಐ ಹುದ್ದೆ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆಗೊಳಗಾದ ನಿವೃತ್ತ ಸೈನಿಕರ ಪ್ರಕರಣದ ಸಾಂದರ್ಭಿಕ ಚಿತ್ರ.
ಪಿಎಸ್‌ಐ ಹುದ್ದೆ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆಗೊಳಗಾದ ನಿವೃತ್ತ ಸೈನಿಕರ ಪ್ರಕರಣದ ಸಾಂದರ್ಭಿಕ ಚಿತ್ರ.

Haliyala|ಪಿಎಸ್‌ಐ ಹುದ್ದೆ ಕೊಡಿಸುವುದಾಗಿ ನಂಬಿಸಿ ಮಾಜಿ ಸೈನಿಕನಿಗೆ ಲಕ್ಷಾಂತರ ಹಣ ವಂಚನೆ!

Haliyala: ಪಿಎಸ್‌ಐ (PSI) ಹುದ್ದೆ ಕೊಡಿಸುವುದಾಗಿ ನಂಬಿಸಿ ನಿವೃತ್ತ ಸೈನಿಕರೊಬ್ಬರಿಗೆ ಬರೋಬ್ಬರಿ 18.90 ಲಕ್ಷ ರೂಪಾಯಿ ಪಡೆದು ವಂಚಿಸಿ, ಬಳಿಕ ಬಾಕಿ ಹಣ ಕೇಳಿದ್ದಕ್ಕೆ ಜೀವ ಬೆದರಿಕೆ ಹಾಕಿದ ಘಟನೆ ಹಳಿಯಾಳ (haliyala) ಶಹರದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ವಂಚನೆ ಹಾಗೂ ಜೀವ ಬೆದರಿಕೆ ಪ್ರಕರಣ ದಾಖಲಾಗಿದೆ.

ಇದನ್ಬೂ ಓದಿ:-Haliyala | ರೌಡಿಶೀಟರ್ ರಾಕೇಶ್ ವಾಲಿಕರ್ ಬಂಧನ 

ಹಳಿಯಾಳದ ಕೆ.ಹೆಚ್.ಬಿ ಕಾಲೋನಿ ನಿವಾಸಿಗಳಾದ ಸಣ್ಣನಿಂಗಪ್ಪ ಅರ್ಜುನ ಶೆಟ್ಟಣ್ಣನವರ (58), ಅವರ ಮಕ್ಕಳಾದ ಕಿರಣ ಸಣ್ಣನಿಂಗಪ್ಪ ಶೆಟ್ಟಣ್ಣನವರ (36) ಮತ್ತು ಮಂಜುನಾಥ ಸಣ್ಣನಿಂಗಪ್ಪ ಶೆಟ್ಟಣ್ಣನವರ (34) ಎಂಬುವವರೇ ಆರೋಪಿಗಳಾಗಿದ್ದಾರೆ.

Advertisement

ದುರ್ಗನಗರದ ನಿವಾಸಿ, ನಿವೃತ್ತ ಸೈನಿಕರಾದ ವಿಷ್ಣು ಮಹಾಬಳೇಶ್ವರ ಶಿರೋಡಕರ್ (40) ಎಂಬುವರು ವಂಚನೆಗೊಳಗಾದ ದುರ್ದೈವಿ.

ಇದನ್ನ ಓದಿ’-Haliyala |ಅತೀ ವೇಗ ತಂತು ಆಪತ್ತು-ಕಾರು-ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿ-ಓರ್ವ ಸಾವು

ಆರೋಪಿಗಳು ದಿನಾಂಕ 06-02-2023 ರಿಂದ 10-04-2026 ರ ಅವಧಿಯಲ್ಲಿ ಪಿರ್ಯಾದಿದಾರರಾದ ವಿಷ್ಣು ಅವರಿಗೆ ಪಿಎಸ್‌ಐ ಹುದ್ದೆ ಕೊಡಿಸುವುದಾಗಿ ನಂಬಿಸಿದ್ದರು. ಆರೋಪಿಗಳ ಮಾತನ್ನು ನಿಜವೆಂದು ನಂಬಿದ ವಿಷ್ಣು ಅವರು ಆರೋಪಿಗಳ ಎಸ್‌ಬಿಐ (SBI) ಬ್ಯಾಂಕ್ ಖಾತೆಗೆ ಹಂತ ಹಂತವಾಗಿ 18,00,000/- ರೂ. ಹಣವನ್ನು ಹಾಗೂ ಫೋನ್ ಪೇ (PhonePe) ಮೂಲಕ 90,000/- ರೂ. ಸೇರಿ ಒಟ್ಟು 18.90 ಲಕ್ಷ ರೂಪಾಯಿಗಳನ್ನು ವರ್ಗಾಯಿಸಿದ್ದರು.

ಹಣ ಪಡೆದ ಬಳಿಕ ಆರೋಪಿಗಳು ಪಿಎಸ್‌ಐ ಹುದ್ದೆಯನ್ನೂ ಕೊಡಿಸದೇ, ಇತ್ತ ಪೂರ್ತಿ ಹಣವನ್ನೂ ವಾಪಸ್ ನೀಡದೇ ಸತಾಯಿಸಿದ್ದಾರೆ. ಪಿರ್ಯಾದಿದಾರರ ಒತ್ತಾಯದ ಮೇರೆಗೆ ಹಂತ ಹಂತವಾಗಿ 7,08,500/- ರೂ. ಹಣವನ್ನು ಮಾತ್ರ ವಾಪಸ್ ನೀಡಿದ್ದು, ಉಳಿದ ಬಾಕಿ ಹಣವನ್ನು ನೀಡಲು ನಿರಾಕರಿಸಿದ್ದಾರೆ. ಕಳೆದ ಏಪ್ರಿಲ್ 10 ರಂದು ಬೆಳಿಗ್ಗೆ 09:30 ರ ಸುಮಾರಿಗೆ ವಿಷ್ಣು ಅವರು ಬಾಕಿ ಹಣವನ್ನು ವಾಪಸ್ ಕೇಳಿದಾಗ, ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, “ಇನ್ನೊಮ್ಮೆ ಹಣ ಕೇಳಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ” ಎಂದು ಕೊ. ಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಆರೋಪಿಗಳಿಂದ ಜೀವ ಬೆದರಿಕೆ ಬಂದ ಹಿನ್ನೆಲೆಯಲ್ಲಿ, ನೊಂದ ನಿವೃತ್ತ ಸೈನಿಕರು ತಮ್ಮ ಕುಟುಂಬದ ಸದಸ್ಯರೊಂದಿಗೆ ಸುದೀರ್ಘ ಚರ್ಚೆ ನಡೆಸಿ ತಡವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ:-Dandeli|ಈದ್ಗಾ ಮೈದಾನದಲ್ಲಿ ವಧೆ ಮಾಡಲು ಕಟ್ಟಿಹಾಕಿದ್ದ 22 ಜಾನುವಾರುಗಳ ರಕ್ಷಣೆ : ಪ್ರಕರಣ ದಾಖಲು

ಹಳಿಯಾಳ ಪೊಲೀಸ್ ಠಾಣೆಯ ಪಿಎಸ್‌ಐ ಆದ  ಬಸವರಾಜ ಮಬನೂರ ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದ್ದು, ಸದ್ಯ ತನಿಖೆ ಮುಂದುವರಿದಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement