Dandeli|ಈದ್ಗಾ ಮೈದಾನದಲ್ಲಿ ವಧೆ ಮಾಡಲು ಕಟ್ಟಿಹಾಕಿದ್ದ 22 ಜಾನುವಾರುಗಳ ರಕ್ಷಣೆ : ಪ್ರಕರಣ ದಾಖಲು

ದಾಂಡೇಲಿಯ ಪಟೇಲ್ ನಗರದ ಈದ್ಗಾ ಮೈದಾನದಲ್ಲಿ ವಧೆ ಮಾಡಲು ಕಟ್ಟಿಹಾಕಿದ್ದ 22 ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ. ಪ್ರಕರಣ ದಾಖಲಿಸಿದ ಪೊಲೀಸರು ಜಾನುವಾರುಗಳನ್ನು ಗೋಶಾಲೆಗೆ ರವಾನಿಸಿದ್ದಾರೆ.
ದಾಂಡೇಲಿಯ ಈದ್ಗಾ ಮೈದಾನದಲ್ಲಿ ರಕ್ಷಣೆ ಮಾಡಲಾದ 22 ಜಾನುವಾರುಗಳ ಬಳಿ ಪೊಲೀಸ್ ಸಿಬ್ಬಂದಿ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ದಾಂಡೇಲಿಯ ಈದ್ಗಾ ಮೈದಾನದಲ್ಲಿ ರಕ್ಷಣೆ ಮಾಡಲಾದ 22 ಜಾನುವಾರುಗಳ ಬಳಿ ಪೊಲೀಸ್ ಸಿಬ್ಬಂದಿ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು
ದಾಂಡೇಲಿಯ ಈದ್ಗಾ ಮೈದಾನದಲ್ಲಿ ರಕ್ಷಣೆ ಮಾಡಲಾದ 22 ಜಾನುವಾರುಗಳ ಬಳಿ ಪೊಲೀಸ್ ಸಿಬ್ಬಂದಿ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು

Dandeli|ಈದ್ಗಾ ಮೈದಾನದಲ್ಲಿ ವಧೆ ಮಾಡಲು ಕಟ್ಟಿಹಾಕಿದ್ದ 22 ಜಾನುವಾರುಗಳ ರಕ್ಷಣೆ : ಪ್ರಕರಣ ದಾಖಲು

Dandeli:- ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ(dandeli) ಪಟೇಲ್ ನಗರದ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ವಧೆ ಮಾಡುವ ಉದ್ದೇಶದಿಂದ ಮೇವು, ನೀರು ಇಡದೇ ಕಟ್ಟಿ ಹಾಕಲಾಗಿದ್ದ 22 ಜಾನುವಾರುಗಳನ್ನು ರಕ್ಷಣೆ ಮಾಡಿದ ಘಟನೆ ನಡೆದಿದೆ.

ಬಕ್ರೀದ್ ಹಬ್ಬದ ದಿನದಂದು ವಧೆ ಮಾಡುವ ಉದ್ದೇಶದಿಂದ ಎಲ್ಲಿಂದಲೋ ತಂದಿದ್ದ ಜಾನುವಾರುಗಳನ್ನು ಕಟ್ಟಿ ಹಾಕಿರುವುದನ್ನು ನಗರದ ಗೋ ರಕ್ಷಾ ಸಂಘಟನೆಯ ಪ್ರಮುಖರಾದ ವಾಸುದೇವ ಪ್ರಭು ಹಾಗೂ ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಶ್ರೀನಾಥ ಪಾಸಲಕರ, ಬಿಜೆಪಿ ಮಂಡಲದ ಅಧ್ಯಕ್ಷ ಬುದವಂತಗೌಡ ಪಾಟೀಲ್ ನೇತೃತ್ವದಲ್ಲಿ ಗೋರಕ್ಷಕರು ಹಾಗೂ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳದ ಮುಖಂಡರು ಹಾಗೂ ಕಾರ್ಯಕರ್ತರು ಸ್ಥಳಕ್ಕೆ ಭೇಟಿ ನೀಡಿ ಖಚಿತಪಡಿಸಿಕೊಂಡು ನಗರ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದ್ದರು.

Advertisement

Dandeli | ಕಾಳಿ ನದಿ ತೀರದಲ್ಲಿ 40 ಮರಿಗಳೊಂದಿಗೆ ಮೊಸಳೆ ! ವಿಡಿಯೋ ನೋಡಿ

ಈ ಸಮಯದಲ್ಲಿ ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಸ್ಥಳದಲ್ಲಿದ್ದು, ಜಾನುವಾರುಗಳ ರಕ್ಷಣೆಗಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಮನವಿಯನ್ನು ಮಾಡಿದರು. ಡಿವೈಎಸ್ಪಿ ಶಿವಾನಂದ ಮದರಕಂಡಿ ಮಾರ್ಗದರ್ಶನದಲ್ಲಿ ದಾಂಡೇಲಿ ಸಿಪಿಐ ಶಿವಾನಂದ ಅಂಬಿಗೇರ, ಹಳಿಯಾಳ ಸಿಪಿಐ ಜೈಪಾಲ್ ಪಾಟೀಲ್ ಅವರೊಂದಿಗೆ ಪಿಎಸ್ಐ ಗಳಾದ ಕಿರಣ್ ಪಾಟೀಲ್ ಮತ್ತು ಅಮೀನ್ ಅತ್ತಾರ್ ನೇತೃತ್ವದಲ್ಲಿ ಪೋಲಿಸರು 22 ಜಾನುವಾರುಗಳನ್ನು ವಶಕ್ಕೆ ಪಡೆದು, ಪಶು ವೈದ್ಯರನ್ನು ಸ್ಥಳಕ್ಕೆ ಕರೆಸಿ ಜಾನುವಾರುಗಳ ಆರೋಗ್ಯ ತಪಾಸಣೆಯನ್ನು ಮಾಡಿಸಿದರು.

Dandeli-joida -ಪ್ರತ್ತೇಕ ಅಪಘಾತ ಅತೀ ವೇಗ ತಂತು ಪ್ರಾಣಕ್ಕೆ ಕುತ್ತು!

ಅಂದಾಜು 2,01,000/- ರೂ ಮೌಲ್ಯದ ಒಟ್ಟು 22 ಜಾನುವಾರುಗಳನ್ನು ಹಳಿಯಾಳದ ದುಸಗಿ ಗೋ ಶಾಲೆಗೆ ಕಳುಹಿಸಿಕೊಡಲಾಯಿತು.

ಈ ಘಟನೆಯ ಕುರಿತಂತೆ ಪಟೇಲ್ ನಗರದ ಈದ್ಗಾ ಮೈದಾನ ಕಮಿಟಿಯವರ ಮೇಲೆ ಕಲಂ 4, 5, 7 ಮತ್ತು 12(1), 12(2),12(3) ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣ ಅಧಿನಿಯಮ 2020 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಮಾಂಸಕ್ಕಾಗಿ ಜಾನುವಾರುಗಳನ್ನು ಹತ್ಯೆ ಮಾಡುವ ಉದ್ದೇಶದಿಂದ ಕಟ್ಟಿ ಹಾಕಲಾಗಿದೆ ಎಂಬ ಸುದ್ದಿ ನಗರದಲ್ಲಿ ಕಾಡ್ಗಿಚ್ಚಿನಂತೆ ಹರಡಿತ್ತು. ಒಂದು ಕಡೆ ಹಿಂದೂಪರ ಸಂಘಟನೆಗಳವರು ಸ್ಥಳದಲ್ಲಿ ಜಮಾಯಿಸಿದ್ದರೇ, ಇನ್ನೊಂದು ಕಡೆ ಮುಸ್ಲಿಂ ಯುವಕರು ಸ್ಥಳದಲ್ಲಿ ಜಮಾವಣೆಗೊಂಡಿದ್ದರು.

ಆದರೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರು.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement