Bhatkal|ಮುಂದುವರೆದ ಮದ್ಯ ನಿಷೇಧ| ಬಕ್ರೀದ್ ಹಬ್ಬದಂದು ಸಾರ್ವಜನಿಕ ನಮಾಜ್ ಮಾಡದಿರಲು ಮುಸ್ಲೀಮರ ನಿರ್ಧಾರ 

ಮುರಿನಕಟ್ಟೆ ಧ್ವಂಸ ಪ್ರಕರಣದ ಹಿನ್ನೆಲೆ ಭಟ್ಕಳದಲ್ಲಿ ಮುಂದುವರೆದ ನಿಷೇಧಾಜ್ಞೆ ನಡುವೆ ಬಕ್ರೀದ್ ಹಬ್ಬದಂದು ಸಾರ್ವಜನಿಕ ನಮಾಜ್ ಬದಲು ಮಸೀದಿಗಳಲ್ಲಿ ಪ್ರಾರ್ಥನೆ ಮಾಡಲು ಮುಸ್ಲಿಂ ಸಮುದಾಯ ನಿರ್ಧಾರ ಮಾಡಿದೆ. ಮೇ 28ರಿಂದ ಮದ್ಯ ಮಾರಾಟಕ್ಕೂ ನಿರ್ಬಂಧ ವಿಧಿಸಲಾಗಿದೆ.
ಭಟ್ಕಳದಲ್ಲಿ ಬಕ್ರೀದ್ ಹಬ್ಬದ ಹಿನ್ನೆಲೆ ಮಸೀದಿಯಲ್ಲಿ ನಮಾಜ್ ಸಲ್ಲಿಸುತ್ತಿರುವ ಮುಸ್ಲಿಂ ಸಮುದಾಯದ ಭಕ್ತರು ಭಟ್ಕಳದಲ್ಲಿ ಬಕ್ರೀದ್ ಹಬ್ಬದ ಹಿನ್ನೆಲೆ ಮಸೀದಿಯಲ್ಲಿ ನಮಾಜ್ ಸಲ್ಲಿಸುತ್ತಿರುವ ಮುಸ್ಲಿಂ ಸಮುದಾಯದ ಭಕ್ತರು
ಭಟ್ಕಳದಲ್ಲಿ ಬಕ್ರೀದ್ ಹಬ್ಬದ ಹಿನ್ನೆಲೆ ಮಸೀದಿಯಲ್ಲಿ ನಮಾಜ್ ಸಲ್ಲಿಸುತ್ತಿರುವ ಮುಸ್ಲಿಂ ಸಮುದಾಯದ ಭಕ್ತರು

Bhatkal|ಮುಂದುವರೆದ ಮದ್ಯ ನಿಷೇಧ| ಬಕ್ರೀದ್ ಹಬ್ಬದಂದು ಸಾರ್ವಜನಿಕ ನಮಾಜ್ ಮಾಡದಿರಲು ಮುಸ್ಲೀಮರ ನಿರ್ಧಾರ.

ಕಾರವಾರ :-  ಭಟ್ಕಳದ ಮುರಿನಕಟ್ಟೆ ಧ್ವಂಸ ಪ್ರಕರಣ ಹಿನ್ನಲೆಯಲ್ಲಿ ಮೇ .27 ರ ವರೆಗೂ ಭಟ್ಕಳದಲ್ಲಿ ನಿಷೇಧಾಜ್ಞೆ ಇರುವ ಹಿನ್ನಲೆಯಲ್ಲಿ ಮುಸ್ಲಿಂ ಸಮುದಾಯದವರು ಬಕ್ರೀದ್ ಹಬ್ಬದಲ್ಲಿ ಸಾರ್ವಜನಿಕವಾಗಿ ನಮಾಜ್ ಮಾಡುವ ಬದಲು ವಿವಿಧ ಮಸೀದಿಗಳಲ್ಲಿ ನಮಾಜ್ ಮಾಡಲು ನಿರ್ಧಾರ ಮಾಡಿದ್ದಾರೆ.

Bhatkal| ಮುರಿನಕಟ್ಟೆ ವಿವಾದ 1 ಸಾವಿರ ಪೊಲೀಸರ ನಿಯೋಜನೆ| ಭಟ್ಕಳದ ಈ ಭಾಗಕ್ಕಿಲ್ಲ ನಿಷೇಧಾಜ್ಞೆ 

Advertisement

ಭಟ್ಕಳದಲ್ಲಿ (bhatkal)ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿಇದ್ದು ಈ ಹಿನ್ನೆಲೆಯಲ್ಲಿ ಬಕ್ರೀದ್ ಹಬ್ಬಕ್ಕೆ ಸಮಸ್ಯೆ ಆಗದಂತೆ ಮುಸ್ಲೀಮರು ಮುನ್ನೆಚ್ಚರಿಕೆ ಕೈಗೊಂಡಿದ್ದು ಭಟ್ಕಳದ ಈದ್ಗಾ ಮೈದಾನದಲ್ಲಿ ನಮಾಜ್ ಮಾಡದಿರಲು ನಿರ್ಧಾರ ಮಾಡಿದ್ದಾರೆ.ಭಟ್ಕಳದಲ್ಲಿ ಇರುವ ಹತ್ತು ದೊಡ್ಡ ಮಸೀದಿಗಳಲ್ಲಿ ನಮಾಜ್ ಮಾಡಲು ನಿರ್ಧಾರ ಮಾಡಿದ್ದು ,ಈ ಸಂದರ್ಭದಲ್ಲಿ

ಬಕ್ರಿದ್ ಪ್ರಯುಕ್ತ ಯಾವುದೇ ರ್ಯಾಲಿ ಮಾಡದಿರಲು ಸಹ ನಿರ್ಧರಿಸಿದ್ದಾರೆ.

ಭಟ್ಕಳದಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನ  ಏಕ ಕಾಲದಲ್ಲಿ ನಮಾಜ್ ಮಾಡುತ್ತಾರೆ.ಪ್ರತಿ ವರ್ಷ ಸಾರ್ವಜನಿಕವಾಗಿ  ಈದ್ಗಾ ಮೈದಾನದಲ್ಲಿ ನಮಾಜ್ ಮಾಡುತ್ತಿದ್ದರು. ಇದರಿಂದ ರಾಷ್ಟ್ರೀಯ ಹೆದ್ದಾರಿವರೆಗೂ ನಮಾಜ್ ಗೆ ಜನ ಸೇರಿತ್ತಿದ್ದರು .ಇದೀಗ ಗಲಭೆ ಹಿನ್ನೆಲೆಯಲ್ಲಿ ನಮಾಜ್ ಮಾಡಲು ಸೀಮಿತ ಸ್ಥಳವನ್ನು ಆಯ್ಕೆ ಮಾಡಿದ್ದಾರೆ. ಇನ್ನು ಭಟ್ಕಳದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಕುರಿತು ಮೇ 28  ರಂದು ಬೆಳಿಗ್ಗೆ 5 ಗಂಟೆಯಿಂದ ಮೇ 29  ರ ಮಧ್ಯರಾತ್ರಿ 12 ಗಂಟೆಯವರೆಗೆ ಭಟ್ಕಳ ಶಹರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿರುವ ಎಲ್ಲಾ ರೀತಿಯ ಮದ್ಯ ಮಾರಾಟ ಮತ್ತು ಸಾಗಾಟ ನಿಷೇಧಿಸಿ, ಮದ್ಯದ ಅಂಗಡಿಗಳನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀ ಪ್ರಿಯಾ ಆದೇಶಿಸಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement