Karwar|ಆಟೋ ಚಾಲಕನಿಗೆ ತನ್ನೂರಿನ ದೇವಸ್ಥಾನವೇ ಟಾರ್ಗೆಟ್ ! ಆರು ದಿನದಲ್ಲಿ ಏಳು ದೇವಸ್ಥಾನದಲ್ಲಿ ಕಳವು-ಬಂಧನ

Karwar:ಕಾರವಾರದಲ್ಲಿ ಆಟೋ ಚಾಲಕನೊಬ್ಬ ಆರು ದಿನಗಳಲ್ಲಿ ಏಳು ದೇವಸ್ಥಾನಗಳಲ್ಲಿ ಕಳ್ಳತನ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿ 174 ಕೆಜಿ ಹಿತ್ತಾಳೆ ಹಾಗೂ ತಾಮ್ರದ ಪೂಜಾ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರವಾರದಲ್ಲಿ ದೇವಸ್ಥಾನ ಕಳ್ಳತನ ಪ್ರಕರಣದಲ್ಲಿ ಬಂಧಿತನಾದ ಆರೋಪಿಯಿಂದ ವಶಪಡಿಸಿಕೊಂಡ ಹಿತ್ತಾಳೆ ಮತ್ತು ತಾಮ್ರದ ಪೂಜಾ ಸಾಮಗ್ರಿಗಳು. ಕಾರವಾರದಲ್ಲಿ ದೇವಸ್ಥಾನ ಕಳ್ಳತನ ಪ್ರಕರಣದಲ್ಲಿ ಬಂಧಿತನಾದ ಆರೋಪಿಯಿಂದ ವಶಪಡಿಸಿಕೊಂಡ ಹಿತ್ತಾಳೆ ಮತ್ತು ತಾಮ್ರದ ಪೂಜಾ ಸಾಮಗ್ರಿಗಳು.
ಕಾರವಾರದಲ್ಲಿ ದೇವಸ್ಥಾನ ಕಳ್ಳತನ ಪ್ರಕರಣದಲ್ಲಿ ಬಂಧಿತನಾದ ಆರೋಪಿಯಿಂದ ವಶಪಡಿಸಿಕೊಂಡ ಹಿತ್ತಾಳೆ ಮತ್ತು ತಾಮ್ರದ ಪೂಜಾ ಸಾಮಗ್ರಿಗಳು.

Karwar|ಆಟೋ ಚಾಲಕನಿಗೆ ತನ್ನೂರಿನ ದೇವಸ್ಥಾನವೇ ಟಾರ್ಗೆಟ್ ! ಆರು ದಿನದಲ್ಲಿ ಏಳು ದೇವಸ್ಥಾನದಲ್ಲಿ ಕಳವು-ಬಂಧನ

 

ಕಾರವಾರ :-ಕಾರವಾರ (karwar)ತಾಲೂಕಿನೊಂದರಲ್ಲೇ 7 ದಿನಗಳ ಅಂತರದಲ್ಲಿ 6 ದೇವಸ್ಥಾನ ಕಳ್ಳತನ ನಡೆದಿದೆ.

ಇನ್ನು ದೇವಸ್ಥಾನದಲ್ಲಿ ಹಣ ಕದಿಯುವುದಕ್ಕಿಂತ ಹೆಚ್ಚಾಗಿ ಲೋಹದ ವಸ್ತುಗಳೇ ಕಳ್ಳತನವಾಗುತಿದ್ದು ಕಡಿಮೆ ಮೌಲ್ಯದ ವಸ್ತು ಆಗಿದ್ದರಿಂದ ಹಲವು ದೇವಾಲಯದ ಆಡಳಿತ ಮಂಡಳಿ ಪ್ರಕರಣ ದಾಖಲಿಸಲಿಲ್ಲ.

Advertisement

ಇದನ್ನೂ ಓದಿ:-Karwar|ಕೊನೆಗೂ ಕಾರವಾರಿಗರ ಸಮಸ್ಯೆಗೆ ಬೀದಿಗಿಳಿದ ಬಿಜೆಪಿ !

ಸರಣಿ ಕಳ್ಳತನ ಆಗುತ್ತಿದ್ದಂತೆ ಎಚ್ಚೆತ್ತ ಜನ ಕೊನೆಗೂ ಪ್ರಕರಣ ದಾಖಲಿಸಿದ್ದು  24 ಗಂಟೆಯಲ್ಲಿ ಆರೋಪಿ ಪತ್ತೆ ಮಾಡಿ ಬರೊಬ್ಬರಿ 174 ಕೆಜಿಯ ಹಿತ್ತಾಳೆ ಹಾಗೂ ತಾಮ್ರದ ವಸ್ತುಗಳನ್ನ ಕಾರವಾರ ಶಹರ ಹಾಗೂ ಗ್ರಾಮೀಣ ಭಾಗದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಕಾರವಾರದ ಗಿಂಡಿವಾಡ ಮೂಲದ ವಿನಾಯಕ ಗಾಂವ್ಕರ್(39) ಎಂಬಾತನೇ ದೇವಾಲಯದಲ್ಲಿ ಕಳ್ಳತನ ಮಾಡಿದ ಆರೋಪಿಯಾಗಿದ್ದಾನೆ.

ಮೊದಲ ದೂರು ದಾಖಲು.

ದೇವಾಲಯದ ಸಣ್ಣಪುಟ್ಟ ವಸ್ತುಗಳು ಕಳ್ಳತನವಾದ್ದರಿಂದ ಹಲವರು ಇದನ್ನು ನಿರ್ಲಕ್ಷಿಸಿದ್ದರು.

ಇದನ್ನೂ ಓದಿ:-Karwar | ನಾಲ್ಕು ತಿಂಗಳ ಫರಿಶ್ರಮ ಕೈಗಾ ಅಣುಸ್ಥಾವರಕ್ಕೆ ಹೊರಟಿದ್ದ ವಿಕಿರಣ ರಕ್ಷಾ ಕವಚ ಹೊತ್ತ ವಾಹನ ಪಲ್ಟಿ -ಏನಾಯ್ತು?

ಆದರೇ ದಿನಾಂಕ: 06-06-2026 ರಂದು ಕಾರವಾರದ ಗ್ರೀನ್ ಸ್ಟ್ರೀಟ್ ನ  ಶಾಮಸುಂದರ ರವರು ಶಹರ ಪೊಲೀಸ್ ಠಾಣೆಗೆ  ಆಗಮಿಸಿ 20-05-2026 ರಂದು ಅಂದಾಜು ಸಮಯ ಬೆಳಿಗ್ಗೆ 08:30 ಗಂಟೆಯಿಂದ ಸಾಯಂಕಾಲ 05:30 ಗಂಟೆಯ ನಡುವಿನ ಅವಧಿಯಲ್ಲಿ ಕಾರವಾರ ಹಬ್ಬುವಾಡ ರಸ್ತೆಯಲ್ಲಿರುವ ದಾಸಮಾರುತಿ ದೇವಸ್ಥಾನದಲ್ಲಿ ಇಟ್ಟಿದ್ದ ಅಂದಾಜು 50 ಕೆ.ಜಿ (ಅ.ಕಿ 30,000/-) ತೂಕದ ಹಿತ್ತಾಳೆ ಮತ್ತು ತಾಮ್ರದ ವಸ್ತುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ ಎಂದು ದೂರು ನೀಡಿದ್ದರು.

ದೂರನ್ನು ಸ್ವೀಕರಿಸಿ, ಕಾರವಾರ(karwar) ಶಹರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 50/2026 ಕಲಂ: 305 (ಡಿ) ಬಿಎನ್ಎಸ್-2023 ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿರುತ್ತದೆ.

ಗಿರೀಶ ವಿ.ಪೊಲೀಸ್ ಉಪಾಧೀಕ್ಷಕರು, ಕಾರವಾರ ಉಪ ವಿಭಾಗ ಕಾರವಾರ ರವರ ಮಾರ್ಗದರ್ಶನದಂತೆ, ಕಾರವಾರ ಶಹರ ಪೊಲೀಸ್ ಠಾಣೆಯ ಜಯಶ್ರೀ ಮಾನೆ. ಪೊಲೀಸ್ ನಿರೀಕ್ಷಕರು, ಉದ್ದಪ್ಪ ಅ. ಧರೆಪ್ಪನವರ ಉಪ-ನಿರೀಕ್ಷಕರು ಕಾ&ಸೂ, ಸಿ.ಹೆಚ್.ಸಿ. 1341 ಸೂರಜ ಕೊಠಾರಕರ, ಸಿ.ಹೆಚ್.ಸಿ. 940 ಸಚೀನ ನಾಯ್ಕ, ಸಿ.ಹೆಚ್.ಸಿ. 500 ಹಸನ್ ಕುಟ್ಟಿ, ಸಿ.ಪಿ.ಸಿ. 662 ರಾಜೇಶ ನಾಯಕ್, ಸಿ.ಪಿ.ಸಿ. 1840 ಮದೇವ ಸಂಗಾಪುರ, ಸಿ.ಪಿ.ಸಿ. 452 ಪ್ರಕಾಶ ದಂಡೆಪ್ಪನವರ, ಸಿ.ಪಿ.ಸಿ. 1151 ಪ್ರತಾಪಕುಮಾರ ಎಮ್. ರವರ ನೇತೃತ್ವದ ತಂಡವು ಶೀಘ್ರವಾಗಿ ಕಾರ್ಯ ಪ್ರವೃತ್ತರಾಗಿ, ಕಾರ್ಯಾಚರಣೆ ಜರುಗಿಸಿ, ಕಳುವಾದ   ದೇವಸ್ಥಾನದ ಹಿತ್ತಾಳೆ ತಾಮ್ರದ ಪೂಜಾ ಸಾಮಗ್ರಿಗಳನ್ನು ಹಾಗೂ ಆರೋಪಿತರ ಪತ್ತೆ ಕಾರ್ಯದಲ್ಲಿ ನಿರತರಾಗಿದ್ದಾಗ, ಬಾತ್ಮಿದಾರರಿಂದ ಹಾಗೂ ಶಹರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿ.ಸಿ. ಕ್ಯಾಮರಾ ಪುಟೇಜ್‌ಗಳ ಸಹಾಯದಿಂದ ಆರೋಪಿತನನ್ನು ಪತ್ತೆ ಮಾಡಿ, ದಸ್ತಗೀರಿ ಮಾಡಿದ್ದಾರೆ‌.

ಆರೋಪಿತನಾದ-ಮೂಲತಹ ಆಟೋ ಚಾಲಕನಾಗಿರುವ  ವಿನಯ @ ವಿನಾಯಕ ದಯಾನಂದ ಗಾಂವಕರ ಪ್ರಾಯ 40 ವರ್ಷ ಸಾ: ಗಿಂಡಿವಾಡಾ, ಬಾಡ ಕಾರವಾರ. ಈತನು ಕಳುವು ಮಾಡಿದ ಒಟ್ಟೂ 174 ಕೆ.ಜಿ. ತೂಕದ 87,000/- ರೂ. ಮೌಲ್ಯದ ದೇವಸ್ಥಾನದ ಪೂಜೆಗೆ ಬಳಸುವ ಹಿತ್ತಾಳೆ ಮತ್ತು ತಾಮ್ರದ ಪೂಜಾ ಸಾಮಗ್ರಿಗಳಾದ ಘಂಟೆ, ದೀಪದ ಸಮೆ, ಆರತಿ ತಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸದರಿ ಆರೋಪಿತನು ಕಾರವಾರ ಶಹರ, ಕಾರವಾರ ಗ್ರಾಮೀಣ, ಚಿತ್ತಾಕುಲಾ ಠಾಣಾ ವ್ಯಾಪ್ತಿಯ ದೇವಸ್ಥಾನಗಳಿಂದ ಕಳುವು ಮಾಡಿಕೊಂಡಿರುವ ಬಗ್ಗೆ ಒಪ್ಪಿಕೊಂಡಿದ್ದು ಮುಂದಿನ ತನಿಖೆ ಕೈಗೊಳ್ಳಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement