Dandeli | ಜಿಪ್‌ಲೈನ್ ದುರಂತ: ಪ್ರವಾಸಿಗ ಗಾಯ ಪ್ರಕರಣ; ರೆಸಾರ್ಟ್ ಮಾಲೀಕ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು

Dandeli | ಜಿಪ್‌ಲೈನ್ ದುರಂತ: ಪ್ರವಾಸಿಗ ಗಾಯ ಪ್ರಕರಣ; ರೆಸಾರ್ಟ್ ಮಾಲೀಕ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು
ಜಿಪ್‌ಲೈನ್ ದುರಂತ: ಪ್ರವಾಸಿಗ ಗಾಯ ಪ್ರಕರಣ; ರೆಸಾರ್ಟ್ ಮಾಲೀಕ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು ಜಿಪ್‌ಲೈನ್ ದುರಂತ: ಪ್ರವಾಸಿಗ ಗಾಯ ಪ್ರಕರಣ; ರೆಸಾರ್ಟ್ ಮಾಲೀಕ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು

Dandeli | ಜಿಪ್‌ಲೈನ್ ದುರಂತ: ಪ್ರವಾಸಿಗ ಗಾಯ ಪ್ರಕರಣ; ರೆಸಾರ್ಟ್ ಮಾಲೀಕ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು

 

ಕಾರವಾರ: ಉತ್ತರ ಕನ್ನಡ ಜಿಲ್ಲೆಯದಾಂಡೇಲಿಯಲ್ಲಿರುವ(dandeli) ಸ್ಟಿರ್ಲಿಂಗ್ ರೆಸಾರ್ಟ್‌ನಲ್ಲಿ ಜಿಪ್‌ಲೈನ್ ದುರಂತದಲ್ಲಿ ಪ್ರವಾಸಿಗ ಗಂಭೀರವಾಗಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರೆಸಾರ್ಟ್ ಮಾಲೀಕ ಸೇರಿದಂತೆ ಮೂವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Advertisement

ಜುಲೈ 3ರಂದು ನಡೆದ ಈ ಘಟನೆಯಲ್ಲಿ ಕುಬೇರ ಸುರುಪುರ (40) ಎಂಬ ಪ್ರವಾಸಿಗ ಜಿಪ್‌ಲೈನ್ ಬೆಲ್ಟ್ ತುಂಡಾಗಿ ಸುಮಾರು 40 ಅಡಿ ಎತ್ತರದಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಇದನ್ನೂ ಓದಿ:-Dandeli |ಯುವತಿಯನ್ನ ರೂಮಿಗೆ ಕರೆದ ಪೊಲೀಸರು! ಇಬ್ಬರು ಪೊಲೀಸರ ಮೇಲೆ ದೂರು ದಾಖಲು 

ಈ ಪ್ರಕರಣ ಸಂಬಂಧ ಸ್ಟಾರ್ಲಿಂಗ್ ರೆಸಾರ್ಟ್ ಮಾಲೀಕ ಉಸ್ಮಾನ್ ವಹಾಬ್, ಸಿಬ್ಬಂದಿಗಳಾದ ರಾಘವೇಂದ್ರ ಶೆಟ್ಟಿ ಹಾಗೂ ಪವನ್ ವಿರುದ್ಧ, ಕುಬೇರ್ ಸುರುಪುರ ರವರು ನೀಡಿದ ದೂರಿನಮೇಲೆ  ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 289, 125(B) ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement