Karwar|ಮಾಲ್ವಾಣ್ ಯುದ್ಧ ನೌಕೆ ಕದಂಬ ನೌಕಾನೆಯಿಂದ ಜು.22ರಿಂದ ಕಾರ್ಯಾರಂಭ-ಅದರ ವಿಶೇಷ ಇಲ್ಲಿದೆ.

Karwar | ಮಾಲ್ವಾಣ್ ಯುದ್ಧ ನೌಕೆ ಜು.22ರಿಂದ ಕದಂಬ ನೌಕಾನೆಲೆಯಲ್ಲಿ ಕಾರ್ಯಾರಂಭ; ವಿಶೇಷತೆಗಳೇನು ವಿವರ ನೋಡಿ
ಮಾಲ್ವಾಣ್ ಯುದ್ಧ ನೌಕೆ ಜು.22ರಿಂದ ಕದಂಬ ನೌಕಾನೆಲೆಯಲ್ಲಿ ಕಾರ್ಯಾರಂಭ; ವಿಶೇಷತೆಗಳೇನು? ಮಾಲ್ವಾಣ್ ಯುದ್ಧ ನೌಕೆ ಜು.22ರಿಂದ ಕದಂಬ ನೌಕಾನೆಲೆಯಲ್ಲಿ ಕಾರ್ಯಾರಂಭ; ವಿಶೇಷತೆಗಳೇನು?

Karwar|ಮಾಲ್ವಾಣ್ ಯುದ್ಧ ನೌಕೆ ಕದಂಬ ನೌಕಾನೆಯಿಂದ ಜು.22ರಿಂದ ಕಾರ್ಯಾರಂಭ-ಅದರ ವಿಶೇಷ ಇಲ್ಲಿದೆ.

 

ಕಾರವಾರ: ಭಾರತೀಯ ತಂತ್ರಜ್ಞಾನದಲ್ಲಿ ತಯಾರಿಸಲಾದ ಮಾಲ್ವಾಣ್ ಯುದ್ಧ ನೌಕೆ ಭಾರತೀಯ ನೌಕಾಸೇನೆಗೆ ಸೇರ್ಪಡೆಯಾಗಲು ಸಿದ್ಧವಾಗಿದ್ದು, ಬುಧವಾರ ಅಧಿಕೃತವಾಗಿ ಕಾರವಾರದ ಕದಂಬ ನೌಕಾನೆಲೆಯಿಂದ ಕಾರ್ಯ ಪ್ರಾರಂಭ ಮಾಡಲಿದೆ.

ಇದನ್ನೂ ಓದಿ:-Navy |ಕಾರವಾರದಲ್ಲಿ ಕಲ್ವರಿ ವರ್ಗದ ಸಬ್‌ಮರೀನ್ ಘಟಕ ಉದ್ಘಾಟನೆ|ಏನಿದರ ವಿಶೇಷ ಗೊತ್ತಾ

Advertisement

ನೌಕಾಸೇನೆ ಈ ಸಂಬಂಧ ತನ್ನ ಅಧಿಕೃತ ಜಾಲತಾಣಗಳಲ್ಲಿ ಪ್ರಚಾರ ನಡೆಸಿದೆ. ಕಾರವಾರದಲ್ಲಿ ನಡೆಯುವ ಸಮಾರಂಭದ ಅಧ್ಯಕ್ಷತೆಯನ್ನು ಭಾರತೀಯ ವಾಯುಸೇನೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ವಹಿಸುವರು. ಪಶ್ಚಿಮ ನೌಕಾ ಕಮಾಂಡ್‌ನ್ ಮುಖ್ಯಸ್ಥ ವೈಸ್ ಅಡ್ಮಿರಲ್ ಸಂಜಯ್ ವತ್ಸಾಯನ್, ಕೊಚ್ಚಿನ್ ಶಿಪ್‌ಯಾರ್ಡ್ನ ಪ್ರಮುಖರು ಆಗಮಿಸುವರು.

 ಕೇರಳ ಕೊಚ್ಚಿಯ ಕೊಚ್ಚಿನ್ ಶಿಪ್‌ಯಾರ್ಡ್ನಲ್ಲಿ ನಿರ್ಮಾಣವಾದ ಜಲಾಂತರ್ಗಾಮಿಗಳನ್ನು ಹೊಡೆದುರುಳಿಸಬಹುದಾದ ಅತ್ಯಾಧುನಿಕ ಯುದ್ಧ ಸಾಮಗ್ರಿಗಳನ್ನು ಹೊಂದಿದ ನೌಕೆಯಾಗಿದೆ. ಇದು ಮಾಹೆ-ಕ್ಲಾಸ್‌ನಲ್ಲಿ ಭಾರತೀಯ ಸೇನೆ ನಿರ್ಮಿಸುತ್ತಿರುವ ಮೂರು ನೌಕೆಗಳಲ್ಲಿ ಇದು ಎರಡನೇಯದಾಗಿದೆ.

ಶೇ.80 ಕ್ಕೀತ ಹೆಚ್ಚು ಭಾರತೀಯ ತಂತ್ರಜ್ಞಾನ

ಸುಮಾರು 13,440 ಕೋಟಿ ರೂ. ಮೊತ್ತದಲ್ಲಿ ಶೇ.80 ಕ್ಕಿಂತ ಹೆಚ್ಚು ಭಾರತೀಯ ತಂತ್ರಜ್ಞಾನದಲ್ಲಿ ನೌಕೆಯನ್ನು ನಿರ್ಮಿಸಲಾಗಿದೆ. ಕೊಚ್ಚಿಯ ಸ್ಮಾರ್ಟ್ ಇಂಜಿನಿಯರಿಂಗ್ ಆ್ಯಂಡ್ ಡಿಸೈನ್ ಸೊಲ್ಯೂಶನ್ ಕಂಪನಿಯ ಇಂಜಿನಿಯರ್‌ಗಳು ಇದರ ಮೂಲ ಸ್ವರೂಪವನ್ನು ಡಿಸೈನ್ ಮಾಡಿದ್ದಾರೆ. ಡಿಆರ್‌ಡಿಒ ಸಿದ್ಧಪಡಿಸಿದ ಸೋನಾರ್, ಶಸ್ತ್ರಾಸ್ತ್ರ ಇದರಲ್ಲಿ ಅಳವಡಿಸಲಾಗಿದೆ. ಬಿಇಎಲ್, ಮಹೀಂದ್ರಾ ಮುಂತಾದ ಭಾರತೀಯ ಕಂಪನಿಗಳ ಬಿಡಿ ಭಾಗಗಳನ್ನು ಹಡಗಿನ ಇನ್ನಿತರ ವಿವಿಧ ವಿಭಾಗಳಲ್ಲಿ ಅಳವಡಿಸಲಾಗಿದೆ. ಕೆಲವು ಸಾಫ್ಟವೇರ್ ಗಳನ್ನು ಮತ್ರ ಪಿನ್‌ಲ್ಯಾಂಡ್‌ನಿಂದ ಪಡೆಯಲಾಗಿದೆ. 2023 ರ ಫೆಬ್ರವರಿಯಲ್ಲಿ ಹಡಗಿನ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಇದೇ ಮಾರ್ಚ್ನಲ್ಲಿ ನಿರ್ಮಾಣ ಕಾರ್ಯ ಪೂರ್ಣವಾಗಿ ಈಗಾಗಲೇ ಪರೀಕ್ಷಾರ್ಥ ಓಡಾಟವೂ ಮುಗಿದಿದೆ.

ಏನು ವಿಶೇಷತೆ:

78 ಮೀಟರ್ ಉದ್ದ 11.26 ಮೀಟರ್ ಅಗಲ ಹಾಗೂ 2.7 ಮೀಟರ್‌ನಷ್ಟು ಆಳವಿರುವ ನೌಕೆ 800 ಟನ್‌ಗೂ ಅಧಿಕ ಭಾರವಿದೆ. ಗಂಟೆಗೆ 25 ನಾಟಿಕಲ್ ಮೈಲ್ ವೇಗದಲ್ಲಿ ತೆರಳಬಲ್ಲದು. 7 ಅಧಿಕಾರಿಗಳು ಸೇರಿ 57 ಸೇಲರ್‌ಗಳು ಇದರಲ್ಲಿ ಕಾರ್ಯ ನಿರ್ವಹಿಸುವರು. ಗಾತ್ರದಲ್ಲಿ ಚಿಕ್ಕದಾಗಿದ್ದರೂ ಶಕ್ತಿಶಾಲಿಯಾಗಿರುವ ಈ ಹಡಗು, ಕಡಿಮೆ ನೀರಿನಲ್ಲಿ ತನ್ನ ಪ್ರಭುತ್ವವನ್ನು ಸಾಧಿಸಲು ಅಗತ್ಯವಿರುವ ಚುರುಕುತನ, ನಿಖರತೆ ಮತ್ತು ಸಹಿಷ್ಣುತೆಯನ್ನು ಹೊಂದಿದೆ. ಜಲಾಂತರ್ಗಾಮಿಗಳನ್ನು ಹೊಡೆದು ಮುಳುಗಿಸಬಹುದಾದ ಟಾರ್ಪಿಡೋ ಲಾಂಚರ್, ರಾಕೆಟ್ ಲಾಂಚರ್‌ಗಳನ್ನು, ಗನ್‌ಗಳನ್ನು ಹಡಗಿನಲ್ಲಿ ಅಳವಡಿಸಲಾಗಿದೆ. ನೌಕೆ ಸೇರ್ಪಡೆಯಿಂದ ಸೇನೆಗೆ ಮತ್ತಷ್ಟು ಬಲ ಬರಲಿದೆ.

ಏಕೆ ಈ ಹೆಸರು ?

ಸಾಮಾನ್ಯವಾಗಿ ಯುದ್ಧ ನೌಕೆಗಳಿಗೆ ಒಂದೊಂದು ಪ್ರಮುಖ ಊರುಗಳ ಹೆಸರಿಡುವ ವಾಡಿಕೆ ಇದೆ. ಮಾಲ್ವಾಣ್ ಎಂಬುದು ಮಹಾರಾಷ್ಟದ ಸಿಂದದುರ್ಗ ಜಿಲ್ಲೆಯ ಕರಾವಳಿಯ ಪ್ರಸಿದ್ಧ ಊರು. 1983 ರಿಂದ 2003 ರ ಅವಧಿಯಲ್ಲಿ ಭಾರತೀಯ ನೌಕೆಯಲ್ಲಿ ಇದೇ ಹೆಸರಿನ ಸಣ್ಣ ಹಡಗು (ಮೈನ್‌ಸ್ವೀಪರ್)ಕಾರ್ಯ ನಿರ್ವಹಿಸಿತ್ತು. ಈಗ ಈ ನೌಕೆಗೆ ಹೆಸರಿಡಲಾಗುತ್ತಿದೆ. ನೌಕಾಸೇನೆ ಸೇರಿದ ನಂತರ ಈ ಹಡಗು ಕಾರವಾರದಿಂದಲೇ (karwar)ಕಾರ್ಯ ನಿರ್ವಹಿಸಲಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement