Navy |ಕಾರವಾರದಲ್ಲಿ ಕಲ್ವರಿ ವರ್ಗದ ಸಬ್‌ಮರೀನ್ ಘಟಕ ಉದ್ಘಾಟನೆ|ಏನಿದರ ವಿಶೇಷ ಗೊತ್ತಾ

Navy:Indian Navy inaugurates Kalvari Class Submarine maintenance and pneumatic ram test facility at Kadamba Naval Base in Karwar. This is the first such facility in India, strengthening indigenous submarine testing and maintenance capability.
Kalvari Class Submarine maintenance and pneumatic ram testing facility inaugurated at Kadamba Naval Base Karwar by Indian Navy Vice Admiral B. Shivakumar. Kalvari Class Submarine maintenance and pneumatic ram testing facility inaugurated at Kadamba Naval Base Karwar by Indian Navy Vice Admiral B. Shivakumar.
Kalvari Class Submarine maintenance and pneumatic ram testing facility inaugurated at Kadamba Naval Base Karwar by Indian Navy Vice Admiral B. Shivakumar.

Navy |ಕಾರವಾರದಲ್ಲಿ ಕಲ್ವರಿ ವರ್ಗದ ಸಬ್‌ಮರೀನ್ ಘಟಕ ಉದ್ಘಾಟನೆ|ಏನಿದರ ವಿಶೇಷ ಗೊತ್ತಾ

 

Navy/ಕಾರವಾರ:- ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕದಂಬ ನೌಕಾನೆಲೆಯಲ್ಲಿ ಕಲ್ವರಿ ವರ್ಗದ ಸಬ್‌ಮರೀನ್ ನಿರ್ವಹಣೆಗೆ ಘಟಕ ಆರಂಭ ಮಾಡಲಾಗಿದೆ.ಈ  ವ್ಯವಸ್ಥೆ ದೇಶದಲ್ಲಿ ಇದೇ ಮೊದಲಬಾರಿಯಾಗಿದೆ. ಈವರೆಗೆ ಕಲ್ವರಿ ವರ್ಗದ ಸಬ್‌ಮರೀನ್ ಗಳ ಪರೀಕ್ಷೆಗೆ ಫ್ರಾನ್ಸ್ ದೇಶವನ್ನು ಅವಲಂಬನೆ ಮಾಡಬೇಕಿತ್ತು.

Advertisement

ಇದರಿಂದ ಸಮಯ ಮತ್ತು ಅಧಿಕ ವೆಚ್ಚವಾಗುತಿತ್ತು. ಆದರೇ ಸಧ್ಯ ಸಬ್ ಮೆರಿನ್ ಗಳ ನಿಲ್ದಾಣ ಹಾಗೂ ನಿರ್ವಹಣಾ ಕೇಂದ್ರವಾಗಿರುವ ಕಾರವಾರದ ಕದಂಬ ನೌಕಾನೆಲೆ ಯಲ್ಲಿ ಕಲ್ವರಿ ವರ್ಗದ ಸಬ್‌ಮರೀನ್ ಗಳ ಪರೀಕ್ಷೆಗಾಗಿ ನಿರ್ವಹಣಾ ಘಟಕ ಪ್ರಾರಂಭ ಮಾಡಿದ್ದು ಭಾರತೀಯ ನೌಕಾಪಡೆಯ ವೈಸ್ ಅಡ್ಮಿರಲ್ ಬಿ. ಶಿವಕುಮಾರ್‌ಅವರು ಈ ನ್ಯುಮ್ಯಾಟಿಕ್ ರ್ಯಾಮ್ ಟೆಸ್ಟ್ ಸೌಲಭ್ಯಕ್ಕೆ ಚಾಲನೆ ನೀಡಿದ್ದಾರೆ.

ಈ ಸೌಲಭ್ಯವು ಕಲ್ವರಿ ವರ್ಗದ ಸಬ್‌ಮರೀನ್ ಗಳಲ್ಲಿ ಅಳವಡಿಸಲಾದ ಮಹತ್ವದ ನ್ಯುಮ್ಯಾಟಿಕ್ ವ್ಯವಸ್ಥೆಗಳನ್ನು ಪರೀಕ್ಷಿಸಲು ಮತ್ತು ನಿರ್ವ ಹಿಸಲು ಸಹಾಯ ಮಾಡುತ್ತದೆ. ಇದು ಭಾರತದ ಸ್ವದೇಶಿ ಸಾಮರ್ಥಗಳನ್ನು ಬಲಪಡಿಸು ವಲ್ಲಿ ಪ್ರಮುಖ ಮೈಲುಗಲ್ಲಾಗಿದೆ.

ಕಲ್ವರಿ ವರ್ಗದ ಸಬ್‌ಮರೀನ್ ಏನು ವಿಶೇಷ?

Kalvari Class Submarine
Kalvari Class Submarine

ಕಲ್ವರಿ ವರ್ಗದ ಸಬ್‌ಮರೀನ್ (Kalvari Class Submarine) ಎಂದರೆ ಭಾರತೀಯ ನೌಕಾಪಡೆಯ ಅತ್ಯಾಧುನಿಕ ಡೀಸೆಲ್-ಎಲೆಕ್ಟ್ರಿಕ್ ದಾಳಿಯ ಜಲಾಂತರ್ಗಾಮಿ (attack submarine) ಗಳ ಒಂದು ವರ್ಗ. ಇವು ಫ್ರಾನ್ಸ್ ದೇಶದ Scorpene design ಆಧಾರಿತವಾಗಿದ್ದು ಭಾರತದಲ್ಲೇ ನಿರ್ಮಿಸಲಾಗಿದೆ.

ಈ ಯೋಜನೆಯನ್ನು Indian Navy ಹಾಗೂ Mazagon Dock Shipbuilders Limited ಸಹಯೋಗದಲ್ಲಿ ನಿರ್ಮಿಸಲಾಗಿದೆ.ಈ ಸಬ್‌ಮರೀನ್‌ಗಳು ನೀರಿನೊಳಗೆ ಬಹಳ ಕಡಿಮೆ ಶಬ್ದ ಮಾಡುತ್ತವೆ.

ಇದನ್ನೂ ಓದಿ:-Navy :ಹಿಂದು ಮಹಾಸಾಗರ ದಲ್ಲಿ 9 ಮಿತ್ರ ರಾಷ್ಟ್ರದೊಂದಿಗೆ IOS ಸಾಗರ ಹೆಸರಿನ ಕಾರ್ಯಾಚರಣೆಗೆ ಕಾರವಾರ ದಲ್ಲಿ ಚಾಲನೆ

ಶತ್ರು ರಡಾರ್ ಅಥವಾ ಸೋನಾರ್‌ಗೆ ಸುಲಭವಾಗಿ ಪತ್ತೆಯಾಗುವುದಿಲ್ಲ. ಅತ್ಯಾಧುನಿಕ ಸೋನಾರ್ ವ್ಯವಸ್ಥೆಸ ಮುದ್ರದೊಳಗಿನ ಹಡಗುಗಳು, ಸಬ್‌ಮರೀನ್‌ಗಳು ಹಾಗೂ ಗುರಿಗಳನ್ನು ದೂರದಿಂದ ಪತ್ತೆಹಚ್ಚಲು ಸೋನಾರ್ ಸಿಸ್ಟಮ್ ಇರುತ್ತದೆ.ಟಾರ್ಪಿಡೋ ಮತ್ತು ಕ್ಷಿಪಣಿ ದಾಳಿ ಭಾರಿ ಶಕ್ತಿಯ ಟಾರ್ಪಿಡೋಗಳು ಹಾಗೂ ಆಂಟಿ-ಶಿಪ್ ಮಿಸೈಲ್‌ಗಳು ಬಳಸಬಹುದು.ವಿಶೇಷವಾಗಿ ನೀರಿನೊಳಗೆ ಹೆಚ್ಚು ದಿನ ಇರಬಹುದು

ಡೀಸೆಲ್-ಎಲೆಕ್ಟ್ರಿಕ್ ವ್ಯವಸ್ಥೆಯಿಂದ ಹಲವು ದಿನಗಳ ಕಾಲ ನೀರಿನೊಳಗೆ ಕಾರ್ಯನಿರ್ವಹಿಸುತ್ತದೆ.

ಭಾರತದಲ್ಲೇ ನಿರ್ಮಾಣ

“Make in India” ಯೋಜನೆಯಡಿ ಭಾರತದಲ್ಲೇ ನಿರ್ಮಾಣವಾದ ಅತ್ಯಾಧುನಿಕ ಜಲಾಂತರ್ಗಾಮಿ ಸಬ್ ಮೆರಿನ್ ಗಳಾಗಿವೆ.

ಕಲ್ವರಿ ವರ್ಗದ ಸಬ್‌ಮರೀನ್‌ಗಳು ಒಟ್ಟು ಆರಕ್ಕೂ ಹೆಚ್ಚು ಭಾರತೀಯ ನೌಕಾಪಡೆಯಲ್ಲಿ ಕಾರ್ಯನಿರ್ವಹಿಸುತ್ತಿವೆ.ಮುಂಬೈ ಹಾಗೂ ವಿಶಾಕಪಟ್ಟಣಂ ಇವುಗಳ ನಿಲುಗಡಾ ಸ್ಥಳವಾಗಿದೆ.

Karwar kadamba navy

ಕಾರವಾರ ಕದಂಬ ನೌಕಾನೆಲೆ ಫೇಸ್ -2 ಪ್ರಾಜಕ್ಟ್ ಕಾಮಗಾರಿ ನಡೆಯುತಿದ್ದು ಇಲ್ಲಿ ಸಬ್ ಮೆರಿನ್ ಗಳಿಗೆ ನಿಲ್ದಾಣ ಸಹ ಮಾಡಲಾಗುತ್ತಿದೆ. ಇದಲ್ಲದೇ ಈ ನೌಕಾನೆಲೆ ರಿಪೇರಿ ಯಾರ್ಡ ಸಹ ಆಗಿದ್ದು ಕಲ್ವರಿ ವರ್ಗದ ಸಬ್‌ಮರೀನ್ ಘಟಕ ಪ್ರಾರಂಭ ಮಾಡಿರುವುದು ಮತ್ತಷ್ಟು ಶಕ್ತಿ ನೀಡುವ ಜೊತೆಗೆ ಉದ್ಯೋಗ ಸೃಷ್ಟಿಗೂ ಅವಕಾಶ ಕಲ್ಪಿಸಿದೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement