
Sirsi/ ಕಾರವಾರ :-ಮದ್ಯದ ಅಮಲಿನಲ್ಲಿದ್ದ ಕೆಎಸ್ಆರ್ಟಿಸಿ ಸಿಬ್ಬಂದಿ ಸಹ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮಾಳಂಜಿ ಸಮೀಪ ನಡೆದಿದೆ.ಹಲ್ಲೆಗೊಳಗಾದವರನ್ನು ಹನುಮಂತಪ್ಪ (55) ಎಂಬುವವರಾಗಿದ್ದಾರೆ. ಘಟನೆಯಲ್ಲಿ ಹನುಮಂತಪ್ಪ ಅವರ ಮುಖ ಹಾಗೂ ತಲೆಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಶಿರಸಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಶಿರಸಿಯಿಂದ ಕಿರುವತ್ತಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ ಈ ಘಟನೆ ನಡೆದಿದೆ. ಕರ್ತವ್ಯ ಮುಗಿಸಿಕೊಂಡು ಮದ್ಯ ಸೇವಿಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಕೆಎಸ್ಆರ್ಟಿಸಿ ಸಿಬ್ಬಂದಿ ಮಾರ್ಟಿನ್ ರಾಜ್ ಎಂಬವರು ಸಹ ಪ್ರಯಾಣಿಕರಿಗೆ ತೊಂದರೆ ನೀಡುತ್ತಿದ್ದರು ಎನ್ನಲಾಗಿದೆ. ಇದನ್ನೂ ಓದಿ:-Sirsi|ಪ್ರಾಂಶುಪಾಲೆ -ವಿದ್ಯಾರ್ಥಿಗಳ ಸಂಘರ್ಷ – ರಜೆ ಮುಗಿಸಿ ಕಾಲೇಜಿಗೆ ಬಂದ ಪ್ರಾಂಶುಪಾಲೆಗೆ ಶಾಕ್ ಕೊಟ್ಟ ವಿದ್ಯಾರ್ಥಿಗಳು
ಈ ಕುರಿತು ಹನುಮಂತಪ್ಪ ಅವರು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಮಾರ್ಟಿನ್ ರಾಜ್ ಅವರು ಹನುಮಂತಪ್ಪ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ .ಘಟನೆ ಸಂಬಂಧಿಸಿದಂತೆ ಕೆಎಸ್ಆರ್ಟಿಸಿ ಸಿಬ್ಬಂದಿ ಮಾರ್ಟಿನ್ ರಾಜ್ ವಿರುದ್ಧ ಶಿರಸಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
