Sirsi |KSRTC ನೌಕರನಿಂದ ಮದ್ಯದ ಅಮಲಿನಲ್ಲಿ ಬಸ್ ನಲ್ಲಿಯೇ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ! ಪ್ರಕರಣ ದಾಖಲು

ಶಿರಸಿ ಮಾಳಂಜಿ ಬಳಿ KSRTC ಬಸ್‌ನಲ್ಲಿ ಪ್ರಯಾಣಿಕನ ಮೇಲೆ ಸಿಬ್ಬಂದಿಯಿಂದ ಹಲ್ಲೆ ಶಿರಸಿ ಮಾಳಂಜಿ ಬಳಿ KSRTC ಬಸ್‌ನಲ್ಲಿ ಪ್ರಯಾಣಿಕನ ಮೇಲೆ ಸಿಬ್ಬಂದಿಯಿಂದ ಹಲ್ಲೆ
ಶಿರಸಿ ಮಾಳಂಜಿ ಬಳಿ KSRTC ಬಸ್‌ನಲ್ಲಿ ಪ್ರಯಾಣಿಕನ ಮೇಲೆ ಸಿಬ್ಬಂದಿಯಿಂದ ಹಲ್ಲೆ
Kannadavani WhatsApp image
ಪ್ರತಿ ದಿನದ ಸುದ್ದಿ ಓದಲು ನಮ್ಮ ವಾಟ್ಸ್ ಅಪ್ ಗ್ರೂಪ್ ಸೇರಲು ಫೋಟೋ ದ ಮೇಲೆ ಕ್ಲಿಕ್ ಮಾಡಿ

Sirsi/ ಕಾರವಾರ :-ಮದ್ಯದ ಅಮಲಿನಲ್ಲಿದ್ದ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಸಹ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮಾಳಂಜಿ ಸಮೀಪ ನಡೆದಿದೆ.ಹಲ್ಲೆಗೊಳಗಾದವರನ್ನು ಹನುಮಂತಪ್ಪ (55) ಎಂಬುವವರಾಗಿದ್ದಾರೆ. ಘಟನೆಯಲ್ಲಿ ಹನುಮಂತಪ್ಪ ಅವರ ಮುಖ ಹಾಗೂ ತಲೆಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಶಿರಸಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಶಿರಸಿಯಿಂದ ಕಿರುವತ್ತಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಈ ಘಟನೆ ನಡೆದಿದೆ. ಕರ್ತವ್ಯ ಮುಗಿಸಿಕೊಂಡು ಮದ್ಯ ಸೇವಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮಾರ್ಟಿನ್ ರಾಜ್ ಎಂಬವರು ಸಹ ಪ್ರಯಾಣಿಕರಿಗೆ ತೊಂದರೆ ನೀಡುತ್ತಿದ್ದರು ಎನ್ನಲಾಗಿದೆ. ಇದನ್ನೂ ಓದಿ:-Sirsi|ಪ್ರಾಂಶುಪಾಲೆ -ವಿದ್ಯಾರ್ಥಿಗಳ ಸಂಘರ್ಷ – ರಜೆ ಮುಗಿಸಿ ಕಾಲೇಜಿಗೆ ಬಂದ ಪ್ರಾಂಶುಪಾಲೆಗೆ ಶಾಕ್ ಕೊಟ್ಟ ವಿದ್ಯಾರ್ಥಿಗಳು

ಈ ಕುರಿತು ಹನುಮಂತಪ್ಪ ಅವರು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಮಾರ್ಟಿನ್ ರಾಜ್ ಅವರು ಹನುಮಂತಪ್ಪ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ .ಘಟನೆ ಸಂಬಂಧಿಸಿದಂತೆ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮಾರ್ಟಿನ್ ರಾಜ್ ವಿರುದ್ಧ ಶಿರಸಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Advertisement

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement