Sirsi |ಹೆದ್ದಾರಿ ಅಗಲೀಕರಣ -ಆರು ವರ್ಷವಾದರೂ ಕೆಡವಿದ ಬಸ್ ನಿಲ್ದಾಣ ಕಟ್ಟುವುದನ್ನೇ ಮರೆತರು!

ಶಿರಸಿ ಕುಮಟಾ ರಾಷ್ಟ್ರೀಯ ಹೆದ್ದಾರಿ 766E ಪಕ್ಕದಲ್ಲಿ ಬಸ್ ತಂಗುದಾಣ ಇಲ್ಲದೆ ತಾತ್ಕಾಲಿಕ ವ್ಯವಸ್ಥೆಯಲ್ಲಿ ಬಸ್ ಕಾಯುತ್ತಿರುವ ಪ್ರಯಾಣಿಕರು. ಶಿರಸಿ ಕುಮಟಾ ರಾಷ್ಟ್ರೀಯ ಹೆದ್ದಾರಿ 766E ಪಕ್ಕದಲ್ಲಿ ಬಸ್ ತಂಗುದಾಣ ಇಲ್ಲದೆ ತಾತ್ಕಾಲಿಕ ವ್ಯವಸ್ಥೆಯಲ್ಲಿ ಬಸ್ ಕಾಯುತ್ತಿರುವ ಪ್ರಯಾಣಿಕರು.
ಶಿರಸಿ ಕುಮಟಾ ರಾಷ್ಟ್ರೀಯ ಹೆದ್ದಾರಿ 766E ಪಕ್ಕದಲ್ಲಿ ಬಸ್ ತಂಗುದಾಣ ಇಲ್ಲದೆ ತಾತ್ಕಾಲಿಕ ವ್ಯವಸ್ಥೆಯಲ್ಲಿ ಬಸ್ ಕಾಯುತ್ತಿರುವ ಪ್ರಯಾಣಿಕರು.

Sirsi |ಹೆದ್ದಾರಿ ಅಗಲೀಕರಣ -ಆರು ವರ್ಷವಾದರೂ ಕೆಡವಿದ ಬಸ್ ನಿಲ್ದಾಣ ಕಟ್ಟುವುದನ್ನೇ ಮರೆತರು!

ಶಿರಸಿ: ಶಿರಸಿ(sirsi)–ಕುಮಟಾ ರಾಷ್ಟ್ರೀಯ ಹೆದ್ದಾರಿ 766ಇ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ವಾಹನಗಳು ಈ ರಸ್ತೆಯಲ್ಲಿ ವೇಗವಾಗಿ ಸಂಚರಿಸುತ್ತಿವೆ. ಆದರೆ, ರಸ್ತೆ ಅಭಿವೃದ್ಧಿಗಾಗಿ ಆರು ವರ್ಷಗಳ ಹಿಂದೆ ತೆರವುಗೊಳಿಸಲಾಗಿದ್ದ ಬಸ್ ತಂಗುದಾಣಗಳನ್ನು ಪುನರ್ ನಿರ್ಮಿಸುವ ಕಾರ್ಯ ಮಾತ್ರ ಇನ್ನೂ ನಡೆದಿಲ್ಲ. ಪರಿಣಾಮವಾಗಿ, ಬಿಸಿಲು, ಮಳೆ ಎನ್ನದೆ ರಸ್ತೆಯ ಬದಿಯಲ್ಲಿ ನಿಂತುಕೊಂಡೇ ಬಸ್‌ಗಾಗಿ ಕಾಯುವ ದುಸ್ಥಿತಿ ಪ್ರಯಾಣಿಕರಿಗೆ ಎದುರಾಗಿದೆ.Sirsi | ಉರುಳಿಗೆ ಸಿಲುಕಿ ಚಿರತೆ ಸಾವು; ಕಿಡಿಗೇಡಿಗಳ ಕೃತ್ಯಕ್ಕೆ ವನ್ಯಜೀವಿ ಬಲಿ!

ಶಿರಸಿ–ಕುಮಟಾ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ 2018ರಲ್ಲಿ ಕೇಂದ್ರ ಸರ್ಕಾರ ಹಸಿರು ನಿಶಾನೆ ನೀಡಿತ್ತು. ಅರಣ್ಯ ಇಲಾಖೆಯ ಅನುಮತಿ ದೊರೆಯುವಲ್ಲಿ ವಿಳಂಬವಾದ ಕಾರಣ 2021ರಲ್ಲಿ ಕಾಮಗಾರಿ ಆರಂಭವಾಗಿತ್ತು. ರಸ್ತೆ ವಿಸ್ತರಣೆಯ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿದ್ದ ಹಲವು ಮರಗಳು ಹಾಗೂ ಬಸ್ ತಂಗುದಾಣಗಳನ್ನು ತೆರವುಗೊಳಿಸಲಾಗಿತ್ತು.Sirsi | ಪ್ರಜಾಸೇವೆ ಆಂದೋಲನ ಸಭೆ: 220ಕ್ಕೂ ಅಧಿಕ ಅರ್ಜಿಗಳ ವಿಚಾರಣೆ, 15 ದಿನಗಳಲ್ಲಿ ಪರಿಹಾರಕ್ಕೆ ಸೂಚನೆ

ಹಿಂದೆ ರಾಜ್ಯ ಹೆದ್ದಾರಿಯಾಗಿದ್ದ ಈ ರಸ್ತೆ ಸುಮಾರು 5.5ರಿಂದ 7 ಮೀಟರ್ ಅಗಲ ಹೊಂದಿತ್ತು. ರಸ್ತೆ ವಿಸ್ತರಣೆಗೆ 12 ಮೀಟರ್ ಜಾಗ ಬಳಸಿಕೊಳ್ಳಲು ಗುತ್ತಿಗೆದಾರ ಸಂಸ್ಥೆ ಆರ್‌ಎನ್‌ಎಸ್‌ಗೆ ಅನುಮತಿ ದೊರೆತ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿದ್ದ ಮರಗಳ ತೆರವು ಕಾರ್ಯದ ಜೊತೆಗೆ ಬಸ್ ತಂಗುದಾಣಗಳನ್ನೂ ಕೆಡವಲಾಗಿತ್ತು.

Advertisement

ಶಿರಸಿ ತಾಲೂಕು ವ್ಯಾಪ್ತಿಯ ಹಾರೂಗಾರ್, ಗೋಳಿ ಕ್ರಾಸ್, ಮುಳಖಂಡ, ಚಿಕ್ಕಡಿ ಸೇರಿದಂತೆ 10ಕ್ಕೂ ಅಧಿಕ ಕಡೆಗಳಲ್ಲಿದ್ದ ಬಸ್ ತಂಗುದಾಣಗಳು ನೆಲಸಮವಾಗಿವೆ. ಆದರೆ, ರಸ್ತೆ ನಿರ್ಮಾಣ ಬಹುತೇಕ ಮುಗಿಯುತ್ತಿದ್ದರೂ ಈ ತಂಗುದಾಣಗಳ ಮರುನಿರ್ಮಾಣಕ್ಕೆ ಮಾತ್ರ ಇನ್ನೂ ಚಾಲನೆ ದೊರೆತಿಲ್ಲ.

ಶ್ರಮದಾನ ಮಾಡಿ ತಂಗುದಾಣ ನಿರ್ಮಿಸಿಕೊಂಡ ಗ್ರಾಮಸ್ಥರು!

ಗೋಳಿ ಕ್ರಾಸ್ ಬಳಿ ರಸ್ತೆ ಮಟ್ಟವನ್ನು ತಗ್ಗಿಸಿರುವುದರಿಂದ ಹಳೆಯ ಬಸ್ ತಂಗುದಾಣ ಎತ್ತರದಲ್ಲಿದೆ. ಹೀಗಾಗಿ ಪ್ರಯಾಣಿಕರು ಅಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ವರ್ಷಗಳಿಂದ ಬಿಸಿಲಿನಲ್ಲೇ ನಿಂತು ಬಸ್ ಕಾಯುತ್ತಿದ್ದ ಸ್ಥಳೀಯರು, ಕೊನೆಗೆ ಈ ವರ್ಷ ಸ್ವತಃ ಶ್ರಮದಾನ ಮಾಡಿ ಅಡಕೆ ಸೋಗೆಯ ಛಾವಣಿ ನಿರ್ಮಿಸಿಕೊಂಡಿದ್ದಾರೆ. ಅಡಕೆ ದಬ್ಬೆಗಳನ್ನು ಬಳಸಿ ಕುಳಿತುಕೊಳ್ಳಲು ಮಂಚವನ್ನೂ ಸಿದ್ಧಪಡಿಸಿಕೊಂಡಿದ್ದಾರೆ.

ಇನ್ನು ಹಾರೂಗಾರ್‌ನಲ್ಲಿ ಬಸ್ ತಂಗುದಾಣ ತೆರವುಗೊಳಿಸಿ ರಸ್ತೆ ವಿಸ್ತರಿಸಿದ ಬಳಿಕ ಪ್ರಯಾಣಿಕರು ನಿಂತುಕೊಳ್ಳಲು ಕೂಡ ಸೂಕ್ತ ಜಾಗವಿಲ್ಲದಂತಾಗಿದೆ. ಕುಮಟಾ ತಾಲೂಕು ವ್ಯಾಪ್ತಿಯ ಹಲವು ಕಡೆಗಳಲ್ಲಿಯೂ ಇದೇ ಪರಿಸ್ಥಿತಿ ಮುಂದುವರಿದಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಹೆದ್ದಾರಿ ಪ್ರಾಧಿಕಾರದ ಸಭೆಯಲ್ಲೂ ಪ್ರಸ್ತಾಪ; ಆದರೂ ಪ್ರಯೋಜನವಿಲ್ಲ!

ಕೆಲ ತಿಂಗಳ ಹಿಂದೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮುಂದಾಳತ್ವದಲ್ಲಿ ನಡೆದ ಹೆದ್ದಾರಿ ಪ್ರಾಧಿಕಾರದ ಸಭೆಯಲ್ಲಿ ತೆರವುಗೊಳಿಸಲಾದ ಬಸ್ ತಂಗುದಾಣಗಳ ಪುನರ್ ನಿರ್ಮಾಣದ ವಿಚಾರ ಪ್ರಸ್ತಾಪವಾಗಿತ್ತು.

ಪ್ರಯಾಣಿಕರು ಬಸ್ ಹತ್ತಲು ರಸ್ತೆ ದಾಟುವ ಪರಿಸ್ಥಿತಿ ನಿರ್ಮಾಣವಾಗಬಾರದು. ಇದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಇರುವುದರಿಂದ ರಸ್ತೆಯ ಎರಡೂ ಬದಿಗಳಲ್ಲಿ ಪ್ರತ್ಯೇಕ ಬಸ್ ತಂಗುದಾಣಗಳನ್ನು ನಿರ್ಮಿಸಬೇಕು ಎಂಬ ಸಲಹೆಯೂ ಸಭೆಯಲ್ಲಿ ಚರ್ಚೆಯಾಗಿತ್ತು. ಆದರೆ, ಸಭೆಯಲ್ಲಿ ಚರ್ಚೆಯಾದ ವಿಚಾರಗಳು ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ.

15 ದಿನಗಳಲ್ಲಿ ರಸ್ತೆ ಕಾಮಗಾರಿ ಪೂರ್ಣ?

ಸತತ ಆರು ವರ್ಷಗಳಿಂದ ನಡೆಯುತ್ತಿರುವ ಶಿರಸಿ–ಕುಮಟಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಇದೀಗ ಅಂತಿಮ ಹಂತಕ್ಕೆ ತಲುಪಿದೆ. ರಸ್ತೆ ಬದಿಯಲ್ಲಿ ನೀರು ಸರಾಗವಾಗಿ ಹರಿದುಹೋಗಲು ಚರಂಡಿ ನಿರ್ಮಾಣ ಮಾಡಲಾಗಿದ್ದು, ಮೈಲಿಗಲ್ಲುಗಳನ್ನು ಅಳವಡಿಸುವ ಕಾರ್ಯವೂ ನಡೆಯುತ್ತಿದೆ.

ಆರ್‌ಎನ್‌ಎಸ್ ಇಂಜಿನಿಯರ್‌ಗಳ ಮಾಹಿತಿ ಪ್ರಕಾರ, ಇನ್ನು 15 ದಿನಗಳ ಒಳಗಾಗಿ ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇದೇ ಸಂಸ್ಥೆಯು ಶಿರಸಿ–ಹಾವೇರಿ ರಸ್ತೆ ನಿರ್ಮಾಣದ ಗುತ್ತಿಗೆಯನ್ನೂ ವಹಿಸಿಕೊಂಡಿರುವುದರಿಂದ ಕಂಪನಿಯ ಗಮನ ಇದೀಗ ಆ ಕಾಮಗಾರಿಯತ್ತ ಹರಿದಿದೆ.

ಆದರೆ, ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದರೂ ತೆರವುಗೊಳಿಸಲಾದ ಬಸ್ ತಂಗುದಾಣಗಳ ಮರುನಿರ್ಮಾಣ ಮಾತ್ರ ಇನ್ನೂ ನನೆಗುದಿಗೆ ಬಿದ್ದಿದೆ. ವಾಹನಗಳ ಸುಗಮ ಸಂಚಾರಕ್ಕೆ ಹೆದ್ದಾರಿ ಅಭಿವೃದ್ಧಿ ಆಗಿರುವುದು ಸ್ವಾಗತಾರ್ಹವಾದರೂ, ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿರುವ ಪ್ರಯಾಣಿಕರಿಗೆ ಕನಿಷ್ಠ ಸೌಲಭ್ಯ ಕಲ್ಪಿಸುವ ಜವಾಬ್ದಾರಿಯನ್ನೂ ಸಂಬಂಧಪಟ್ಟ ಅಧಿಕಾರಿಗಳು ಮರೆಯಬಾರದು.Sirsi | ದೀಪಾವಳಿ ಪ್ರಯುಕ್ತ ಹೊಸಿಲು ದಾಟಿದ ಶ್ರೀಮಾರಿಕಾಂಬಾ ದೇವಾಲಯದ ಪಟ್ಟದ ಕೋಣ-ವಿಡಿಯೋ ನೋಡಿ.

ಆರು ವರ್ಷಗಳಿಂದ ಬಸ್ ತಂಗುದಾಣಗಳಿಗಾಗಿ ಕಾಯುತ್ತಿರುವ ಪ್ರಯಾಣಿಕರ ಸಮಸ್ಯೆಗೆ ಇನ್ನಾದರೂ ಪರಿಹಾರ ಸಿಗುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement