ಬೆಳಗಾವಿಯಲ್ಲಿ ಅಂಕೋಲ ಮೂಲದ ವೈದ್ಯ ಆತ್ಮಹತ್ಯೆ

ಬೆಳಗಾವಿಯಲ್ಲಿ ಅಂಕೋಲ ಮೂಲದ ಖ್ಯಾತ ವೈದ್ಯ ಡಾ. ದಿನೇಶ ಭಟ್ಕಳ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಚಲನ ಮೂಡಿಸಿದೆ. ಆತ್ಮಹತ್ಯೆಗೂ ಮುನ್ನ ಡಾ. ಪ್ರಭಾಕರ ಕೋರೆಗೆ ವಾಟ್ಸಪ್ ಸಂದೇಶ ರವಾನಿಸಿದ್ದಾಗಿ ತಿಳಿದುಬಂದಿದೆ.
belagavi news belagavi news

ಬೆಳಗಾವಿಯಲ್ಲಿ ಅಂಕೋಲ ಮೂಲದ ವೈದ್ಯ ಆತ್ಮಹತ್ಯೆ.

ಬೆಳಗಾವಿಯಲ್ಲಿ ವೈದ್ಯರ ಆತ್ಮಹತ್ಯೆ ಪ್ರಕರಣ ಭಾರೀ ಸಂಚಲನ ಮೂಡಿಸಿದೆ.
ಕೆಎಲ್ಇ ಸಂಸ್ಥೆಯಲ್ಲಿ ಕಳೆದ ನಾಲ್ಕು ದಶಕಗಳಿಂದ ಸೇವೆ ಸಲ್ಲಿಸಿದ್ದ ಖ್ಯಾತ ವೈದ್ಯ ಡಾ. ದಿನೇಶ ಭಟ್ಕಳ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಅಂಕೋಲಾ ಮೂಲದ ಕೆಎಲ್ಇ ಆಸ್ಪತ್ರೆಯ ಆಡಳಿತಾಧಿಕಾರಿಯಾಗಿದ್ದ ಡಾ. ದಿನೇಶ ಭಟ್ಕಳ್, ಆತ್ಮಹತ್ಯೆಗೂ ಮುನ್ನ ಕೆಎಲ್ಇ ಸಂಸ್ಥೆಯ ಮುಖ್ಯಸ್ಥ ಡಾ. ಪ್ರಭಾಕರ ಕೋರೆಗೆ ವಾಟ್ಸಪ್ ಸಂದೇಶ ರವಾನಿಸಿದ್ದಾರೆ.

Advertisement

Belagavi| ಕೆಲಸಕ್ಕೆಂದು ವಿದೇಶಕ್ಕೆ ಹೋದವರು ಒತ್ತೆಯಾಳಾದ್ರು|ಸೈಬರ್ ವಂಚಕರಿಂದ ಪಾರುಮಾಡಿದ ಪೊಲೀಸರು!

“ನನಗೆ ನೀವು ಇಷ್ಟು ವರ್ಷಗಳ ಕಾಲ ಸಾಕಷ್ಟು ಸಹಾಯ ಮಾಡಿದ್ದೀರಿ. ಆದರೆ ನನಗೆ ತೀವ್ರ ಎದೆನೋವು ಕಾಡುತ್ತಿದೆ. ಆದ್ದರಿಂದ ನಾನು ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ. ಇದು ನನ್ನ ಸ್ವಂತ ನಿರ್ಧಾರ. ದಯವಿಟ್ಟು ನನ್ನ ಕುಟುಂಬಕ್ಕೆ ಸಹಾಯ ಮಾಡಿ. ನಗರ ಪೊಲೀಸ್ ಆಯುಕ್ತರಿಗೂ ಮಾಹಿತಿ ನೀಡಿ” ಎಂದು ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.

ಇದೇ ವೇಳೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ ಡಾ. ಕೆರೂರ ಅವರಿಗೂ ಮೆಸೇಜ್ ಮಾಡಿದ್ದಾಗಿ ತಿಳಿದುಬಂದಿದೆ.

ಸದ್ಯ ಘಟನೆ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement