Ankola|ಅಂಕೋಲಾದಲ್ಲಿ ಹೆತ್ತ ಮಗಳ ಮೇಲೆಯೇ ಅತ್ಯಾಚಾರ ಮಾಡಿದ ಪಾಪಿ ತಂದೆ

ಅಂಕೋಲ ತಾಲೂಕಿನ ಹೊಸಗದ್ದೆ ಗ್ರಾಮದಲ್ಲಿ 13 ವರ್ಷದ ಅಪ್ರಾಪ್ತ ಮಗಳ ಮೇಲೆಯೇ ಅತ್ಯಾಚಾರ ಎಸಗಿದ ಆರೋಪದಲ್ಲಿ ಪಾಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
Crime news Karnataka Crime news Karnataka

Ankola|ಅಂಕೋಲಾದಲ್ಲಿ ಹೆತ್ತ ಮಗಳ ಮೇಲೆಯೇ ಅತ್ಯಾಚಾರ ಮಾಡಿದ ಪಾಪಿ ತಂದೆ.

Ankola:-​ಹೆತ್ತಮಗಳ ರಕ್ಷಣೆಗೆ ನಿಲ್ಲಬೇಕಾದ ತಂದೆಯೇ ರಾಕ್ಷಸನಾಗಿ ವರ್ತಿಸಿ, ತನ್ನ 13 ವರ್ಷದ ಅಪ್ರಾಪ್ತ ಮಗಳ ಮೇಲೆಯೇ ಒಂದೇ ದಿನ ಐದು ಬಾರಿ ಅತ್ಯಾಚಾರ ಎಸಗಿದ ಭೀಕರ ಮತ್ತು ಮನುಕುಲವೇ ತಲೆತಗ್ಗಿಸುವಂತಹ ಘಟನೆ ತಾಲೂಕಿನ ಹೊ*”*ಗದ್ದೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

Ankola| ಯುವತಿ ಕೊಲೆಯತ್ನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ -ರಾತ್ರಿ ಜೊತೆಗೆ ಮಲಗಿದವಳೇ ಆರೋಪಿ! 

Advertisement

​ಬಂಧಿತ ಆರೋಪಿಯನ್ನು ತಾಲೂಕಿನ ಹೊಸಗದ್ದೆ ಗ್ರಾಮದ ನಿವಾಸಿ ವಿ..ರ (ಹೆಸರು ಬದಲಾಯಿಸಲಾಗಿದೆ) (45) ಎಂದು ಗುರುತಿಸಲಾಗಿದೆ.ಆರೋಪಿ ಕುಡಿತದ ನಶೆಯಲ್ಲಿ ಸಂಪೂರ್ಣವಾಗಿ ವಿವೇಚನೆ ಕಳೆದುಕೊಂಡು, ತನ್ನದೇ ರಕ್ತ ಹಂಚಿಕೊಂಡು ಹುಟ್ಟಿದ 13 ವರ್ಷದ ಅಪ್ರಾಪ್ತ ಮಗಳ ಮೇಲೆ ಒಂದೇ ದಿನದಲ್ಲಿ ನಾಲ್ಕೈದು ಬಾರಿ ಅತ್ಯಾಚಾರ ಎಸಗಿ ಪೈಶಾಚಿಕ ಕೃತ್ಯ ಜರುಗಿಸಿದ್ದಾನೆ. ತಂದೆಯ ಈ ರಾಕ್ಷಸೀ ಪ್ರವೃತ್ತಿಯಿಂದ ಕಂಗೆಟ್ಟ ಬಾಲಕಿ ತೀವ್ರ ಆಘಾತಕ್ಕೊಳಗಾಗಿದ್ದು,ಅಕ್ಕ-ಪಕ್ಕದವರಲ್ಲಿ ಹೇಳಿಕೊಂಡಿದ್ದಾಳೆ.

Ankola|ಬಾವಿಕೇರಿಯಲ್ಲಿ ಅಣು ವಿದ್ಯುತ್ ಸ್ಥಾವರ-ಪ್ರಫೋಸಲ್ ಗೆ ಬ್ರೇಕ್ -ಡಿಸಿ ಏನಂದ್ರು?

ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸದ್ಯ ಅಂಕೋಲಾ(ankola) ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಪೋಕ್ಸೋ (POCSO) ಕಾಯ್ದೆ ಹಾಗೂ ಐಪಿಸಿ ಅಡಿಯಲ್ಲಿ ಕಠಿಣ ಪ್ರಕರಣ ದಾಖಲಾಗಿದೆ. ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಕಾಮುಕ ತಂದೆಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

​ಸಮಾಜದಲ್ಲಿ ತಂದೆ-ಮಗಳ ಪವಿತ್ರ ಸಂಬಂಧಕ್ಕೆ ಕಪ್ಪುಚುಕ್ಕೆ ಇಟ್ಟ ಈ ಘಟನೆ ಇಡೀ ತಾಲೂಕನ್ನು ಬೆಚ್ಚಿಬೀಳಿಸಿದ್ದು, ಇಂತಹ ಕಾಮುಕನಿಗೆ ಕಾನೂನಿನಡಿ ಕಠಿಣಾತಿಕಠಿಣ ಶಿಕ್ಷೆಯಾಗಬೇಕು ಎಂದು ಸಾರ್ವಜನಿಕರು ಮತ್ತು ಮಹಿಳಾ ಸಂಘಟನೆಗಳು ತೀವ್ರವಾಗಿ ಒತ್ತಾಯಿಸಿವೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement