Ankola|ಬಾವಿಕೇರಿಯಲ್ಲಿ ಅಣು ವಿದ್ಯುತ್ ಸ್ಥಾವರ-ಪ್ರಫೋಸಲ್ ಗೆ ಬ್ರೇಕ್ -ಡಿಸಿ ಏನಂದ್ರು?
Ankola:-ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ ರಾಜ್ಯದ ಐದು ಜಿಲ್ಲೆಗಳಲ್ಲಿ ತಲಾ ಒಂದೊಂದು ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಚಿಂತನೆ ನಡೆಸಿದ್ದು ,ಉತ್ತರ ಕನ್ನಡ ಜಿಲ್ಲೆಯಲ್ಲೂ ಹೊಸದಾಗಿ ಅಣು ವಿದ್ಯುತ್ ಸ್ಥಾವರದ ಪ್ರಸ್ತಾಪ ಸಾಕಷ್ಟು ಸದ್ದು ಮಾಡಿದೆ.ಈ ಕುರಿತು ಕನ್ನಡವಾಣಿ ವಿಸೃತ ವರದಿ ಪ್ರಕಟಿಸಿತ್ತು.
ಉತ್ತರ ಕನ್ನಡ ಜಿಲ್ಲೆಯ ಬಾವಿಕೇರಿ,ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಬೇಸೂರು, ವಿಜಯಪುರ ಜಿಲ್ಲೆಯ ಮಣ್ಣೂರು, ಕೊಪ್ಪಳ ಜಿಲ್ಲೆ ಬನ್ನಿಕುಮಟ, ರಾಯಚೂರು ಜಿಲ್ಲೆಯ ಹಲ್ಕವಟಗಿಯಲ್ಲಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪಿಸುವ ಸಂಬಂಧ ಪ್ರಾಥಮಿಕ ಅಧ್ಯಯನ ಹಾಗೂ ವರದಿಗಳನ್ನ ಸರ್ಕಾರಕ್ಕೆ ಸಲ್ಲಿಸಲಾಗಿದೆ.
NTPC:ಉತ್ತರ ಕನ್ನಡ ,ಶಿವಮೊಗ್ಗ ಸೇರಿ ಐದು ಕಡೆ ಪರಮಾಣು ವಿದ್ಯುತ್ ಸ್ಥಾವರ ?
ಉತ್ತರ ಕನ್ನಡ (uttara Kannada) ಜಿಲ್ಲೆಯ ಬಾವಿಕೇರಿ(bavikeri) ಗ್ರಾಮದಲ್ಲಿ 1200 ಎಕರೆ ಪ್ರದೇಶದಲ್ಲಿ 2000 ವೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಘಟಕ ಅಥವಾ ಹೆಚ್ಚು ಜಾಗ ದೊರೆತಲ್ಲಿ 1600 ಹೆಕ್ಟೇರ್ ಪ್ರದೇಶದಲ್ಲಿ 4000 ಮೆಗಾವ್ಯಾಟ್ ವಿದ್ಯುತ್ ಘಟಕ ಸ್ಥಾಪನೆ ಜೊತೆಗೆ ಸಿಬ್ಬಂದಿ ವಸತಿ ಗೃಹ ,ಕುಡಿಯುವ ನೀರು ಪೂರೈಕೆ ವೆವಸ್ತೆ ಕಲ್ಪಿಸುವ ಕುರಿತು ಜಿಲ್ಲಾಧಿಕಾರಿಗೆ ಲಿಖಿತ ಮಾಹಿತಿ ಕೇಳಿದ್ದು ಸಧ್ಯ ಜಿಲ್ಲಾಧಿಕಾರಿಗಳು ಸರ್ಕಾರದ ಯಾವುದೇ ಜಮೀನು ಇಲ್ಲದ ಕಾರಣ ಕೃಷಿ ಹಾಗೂ ಖಾಸಗಿ ಜಮೀನುಗಳನ್ನ ಹಸ್ತಾಂತರಿಸಿ ಕಾರ್ಯಯೋಜನೆ ಮಾಡಬೇಕು ಇದಲ್ಲದೇ ಈ ಜಾಗ ಸೂಕ್ತವಲ್ಲ ಎಂದು ವರದಿಯನ್ನ ಕಳುಹಿಸಿದ್ದಾರೆ.
ಜಿಲ್ಲಾಧಿಕಾರಿ ಹೇಳಿದ ವಿಡಿಯೋ ಹೇಳಿಕೆ ಇಲ್ಲಿದೆ:-







