NTPC:ಉತ್ತರ ಕನ್ನಡ ,ಶಿವಮೊಗ್ಗ ಸೇರಿ ಐದು ಕಡೆ ಪರಮಾಣು ವಿದ್ಯುತ್ ಸ್ಥಾವರ ? 

NTPC proposes nuclear power plants in five Karnataka districts including Uttara Kannada and Shivamogga. Land survey, feasibility study, and local opposition details explained.
NTPC nuclear power plant proposed locations in Karnataka including Shivamogga Sagar Basur and Uttara Kannada Bawikeri land survey site NTPC nuclear power plant proposed locations in Karnataka including Shivamogga Sagar Basur and Uttara Kannada Bawikeri land survey site

NTPC:ಉತ್ತರ ಕನ್ನಡ ,ಶಿವಮೊಗ್ಗ ಸೇರಿ ಐದು ಕಡೆ ಪರಮಾಣು ವಿದ್ಯುತ್ ಸ್ಥಾವರ ?

 

ಬೆಂಗಳೂರು :- ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ ರಾಜ್ಯದ ಐದು ಜಿಲ್ಲೆಗಳಲ್ಲಿ ತಲಾ ಒಂದೊಂದು ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಚಿಂತನೆ ನಡೆಸಿದ್ದು ,ಈ ಸಂಬಂಧ ನಿಗದಿ ಮಾಡಿದ ಪ್ರದೇಶದ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿ ಮಾಹಿತಿ ಕಲೆಹಾಕಿರುವು ಮಾಹಿತಿ ಹೊರಬಿದ್ದಿದೆ.

Advertisement

IMG 20260426 212551 1

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಬೇಸೂರು, ವಿಜಯಪುರ ಜಿಲ್ಲೆಯ ಮಣ್ಣೂರು, ಕೊಪ್ಪಳ ಜಿಲ್ಲೆ ಬನ್ನಿಕುಮಟ, ರಾಯಚೂರು ಜಿಲ್ಲೆಯ ಹಲ್ಕವಟಗಿ, ಉತ್ತರ ಕನ್ನಡ ಜಿಲ್ಲೆಯ ಬಾವಿಕೇರಿಯಲ್ಲಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪಿಸುವ ಸಂಬಂಧ ಪ್ರಾಥಮಿಕ ಅಧ್ಯಯನ ನಡೆಸುವುದು, ಭೂಮಿಯಲ್ಲಿ ರಂಧ್ರ ಕೊರೆದು ಮಣ್ಣಿನ ರಚನೆ ತಿಳಿಯುವುದಕ್ಕಾಗಿ ಜಿಲ್ಲಾಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದೆ.

Karnataka |ಒಳಮೀಸಲಾತಿ ಬಗ್ಗೆ ರಾಜ್ಯ ಸಂಪುಟದ ಮಹತ್ವದ ತೀರ್ಮಾನ: ಎಸ್‌ಸಿ ವರ್ಗಗಳಿಗೆ ಹೊಸ ಹಂಚಿಕೆ ಘೋಷಣೆ

ಇಷ್ಟೆಲ್ಲ ಪ್ರಕ್ರಿಯೆ ನಡೆದಿರುವುದು ಎರಡು ತಿಂಗಳ ಹಿಂದೆ. ಫೆ.3ರಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಕಂದಾಯ ಇಲಾಖೆ ಭೂ ಮಂಜೂರಾತಿ ವಿಭಾಗದ ಅಪರ ಕಾರ್ಯದರ್ಶಿ, ಇಂಧನ ಇಲಾಖೆ ಅಪರ ಕಾರ್ಯದರ್ಶಿ ಸೇರಿ ಐದು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆದಿದೆ ಎನ್ನಲಾಗಿದೆ.

ಸಾಗರ ತಾಲೂಕಿನ ಬೇಸೂರು ಗ್ರಾಪಂ ಸರ್ವೇ ನಂಬರ್ 104, 94, 80, 82ರಲ್ಲಿ ಅಣುವಿದ್ಯುತ್ ಸ್ಥಾವರಕ್ಕೆ ಜಾಗ ಸೂಕ್ತ ಎಂದು ಎನ್‌ಟಿಪಿಸಿ ಗುರುತಿಸಿದೆ. ಇದು ಶರಾವತಿ ಕಣಿವೆಯ ಪಶ್ಚಿಮ ಘಟ್ಟ ಶ್ರೇಣಿಯ ಸೂಕ್ಷ್ಮ ಪ್ರದೇಶವಾಗಿದೆ. ಇದು ಕೋಳೂರು, ಆವಿನಹಳ್ಳಿ, ಹೆಗ್ಗೋಡು, ಕಲ್ಮನೆ, ತುಮರಿ, ಯಡಜಿಗಳೇಮನೆ ಗ್ರಾಪಂ ವ್ಯಾಪ್ತಿಯ ಕಂದಾಯ ಪ್ರದೇಶಗಳನ್ನು ಒಳಗೊಂಡಿದೆ.

file 0000000024f0720bbfcdd678af258787 1

ಎರಡು ಸಾವಿರ ಎಕರೆ ಲಭ್ಯ: ವಿಡಿಯೋ ಸಂವಾದದಲ್ಲಿ ಭಾಗವಹಿಸಿದ ಬಹುತೇಕ ಜಿಲ್ಲಾಧಿಕಾರಿಗಳು ಅಲ್ಲಿಯ ಜನರ ಸಂಕಷ್ಟ, ಅಲ್ಲಿರುವ ಫಲವತ್ತಾದ ಕೃಷಿ ಜಮೀನು, ಈಗಾಗಲೇ ಅನೇಕ ಯೋಜನೆಗಳಿಂದ ನಿರಾಶ್ರಿತರಾದವರು ಸಮಸ್ಯೆಗಳನ್ನು ಹಿರಿಯ ಅಧಿಕಾರಿಗಳ ಮುಂದಿರಿಸಿದ್ದಾರೆ. ಆದರೆ ಸಭೆಯ ನಡಾವಳಿ ಪ್ರಕಾರ ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಬೇಸೂರು ಗ್ರಾಮದಲ್ಲಿ ಎರಡು ಸಾವಿರ ಎಕರೆ ಜಮೀನು ಲಭ್ಯವಿದೆ. 173 ಮನೆಗಳು ನಿರ್ಮಾಣವಾಗಿವೆ. ಬಗರ್‌ಹುಕುಂ ಅರ್ಜಿ ನಮೂನೆ 53 ಹಾಗೂ 57ರಲ್ಲಿ ಸಲ್ಲಿಕೆಯಾದ ಅಹವಾಲುಗಳ ಇತ್ಯರ್ಥ ಬಾಕಿಯಿದೆ ಎಂದಿದ್ದಾರೆ. ಇದೆಲ್ಲ ನಡೆದು ಎರಡು ತಿಂಗಳಾದರೂ ಜಿಲ್ಲೆಯ ಜನಪ್ರತಿನಿಧಿಗಳಿಗೆ ತಿಳಿದಿಲ್ಲ.

ಅಧಿಕಾರಿಗಳೊಂದಿಗಿನ ವಿಡಿಯೋ ಸಂವಾದದಲ್ಲಿ ಇಂಧನ ಇಲಾಖೆ ಅಪರ ಕಾರ್ಯದರ್ಶಿ ಪರಮಾಣು ವಿದ್ಯುತ್ ಸ್ಥಾವರಕ್ಕೆ ಅವಶ್ಯವಾದ ಭೂಮಿ ಲೆಕ್ಕಾಚಾರವನ್ನು ವಿವರಿಸಿದ್ದಾರೆ. ಅದರ ಪ್ರಕಾರ 2 ಸಾವಿರ ಮೆಗಾವಾಟ್ ಸಾಮರ್ಥ್ಯದ ಘಟಕಕ್ಕೆ 1,200 ಎಕರೆ ಭೂಮಿ, ನಾಲ್ಕು ಸಾವಿರ ಮೆಗಾವಾಟ್‌ಗೆ 1,600 ಎಕರೆ ಹಾಗೂ ಆರು ಸಾವಿರ ಮೆಗಾವಾಟ್ ಉತ್ಪಾದನಾ ಸಾಮರ್ಥ್ಯದ ಘಟಕ ನಿರ್ಮಾಣಕ್ಕೆ ಎರಡು ಸಾವಿರ ಎಕರೆ ಭೂಮಿ ಅವಶ್ಯಕ. ಇದರ ಜತೆಗೆ ಕಾಲನಿ ಸ್ಥಾಪನೆಗೆ ಹೆಚ್ಚುವರಿಯಾಗಿ 100-150 ಎಕರೆ ಭೂಮಿ ಬೇಕು. ಈಗಾಗಲೇ ಶಿವಮೊಗ್ಗ ಜಿಲ್ಲಾಧಿಕಾರಿ ಬೇಸೂರಿನಲ್ಲಿ ಎರಡು ಸಾವಿರ ಎಕರೆ ಜಮೀನು ಲಭ್ಯವಿದೆ ಎಂದು ಹೇಳಿದ್ದಾರೆ. ಅದರ ಪ್ರಕಾರ ಬೇಸೂರಿನಲ್ಲಿ ಆರು ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆ ಕುರಿತು ಯೋಚಿಸಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಬಾವೀಕೇರಿ ಯಲ್ಲೂ ಪ್ರಯತ್ನ

Kaiga nuclear power plant units 5 and 6 first concreting ceremony inaugurated by AEC Chairman Ajit Kumar Mohanty in Karwar Uttara Kannada.
Kaiga nuclear power plant units 5 and 6 first concreting ceremony inaugurated by AEC Chairman Ajit Kumar Mohanty in Karwar Uttara Kannada.

ಇನ್ನು ಮಾಧ್ಯಮ ಒಂದರ ವರದಿ ಪ್ರಕಾರ ಉತ್ತರ ಕನ್ನಡ ಜಿಲ್ಲೆಯ ಬಾವಿಕೇರಿಯಲ್ಲೂ ಅಣುಸ್ಥಾವರದ ಪ್ರಸ್ತಾಪ ಮಾಡಲಾಗಿದೆ. ಇಲ್ಲಿನ ಮಣ್ಣಿನ ಪರೀಕ್ಷೆ ಸಹ ನಡೆಸಲಾಗಿದೆ ಎನ್ನಲಾಗಿದೆ. ಆದರೇ ಈಗಾಗಲೇ ಬೇಲಿಕೇರಿಯಲ್ಲಿ ಬಂದರು ಯೋಜನೆ ,ಪಕ್ಕದಲ್ಲಿಯೇ ಕದಂಬ ನೌಕಾನೆಲೆ ಯೋಜನೆ ಗಳು ಇದ್ದು ವಿಮಾನ ನಿಲ್ದಾಣದ ಪ್ರಸ್ತಾಪ ಸಹ ಇದೆ. ಇದಲ್ಲದೇ ಕೈಗಾ ದಲ್ಲಿ ಎರಡು ಹೊಸ ವಿದ್ಯುತ್ ಘಟಕದ ಸ್ಥಾಪನೆಗೆ ಈಗಾಗಲೇ ಕಾಮಗಾರಿ ಪ್ರಾರಂಭವಾಗಿದ್ದು ಸುಮಾರು 21 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಎರಡು ನೂತನ ಘಟಕಗಳನ್ನು ಐದು ವರ್ಷದಲ್ಲಿ ಸಂಪೂರ್ಣವಾಗಿ ನಿರ್ಮಾಣ ಮಾಡುವ ಗುರಿ ಹೊಂದಲಾಗಿದ್ದು, ಹೊಸ ಎರಡು ಘಟಕಗಳು ತಲಾ 700 ಮೆಗಾ ವ್ಯಾಟ್​ನಂತೆ ಒಟ್ಟು 1400 ಮೆಗಾ ವ್ಯಾಟ್ ಸಾಮರ್ಥ್ಯ ಹೊಂದಿವೆ. ಹೀಗಿರುವಾಗ ಬಾವಿಕೇರಿ ಭಾಗದಲ್ಲಿ ಮತ್ತೊಂದು ಅಣು ವಿದ್ಯುತ್ ಗಾರಕ್ಕೆ ಪ್ರಯತ್ನ ಪಟ್ಟರೇ ದೊಡ್ಡ ವಿರೋಧ ಎದುರಿಸಬೇಕಾಗುತ್ತದೆ.

ಇನ್ನು ಈ ಬಗ್ಗೆ ಜಿಲ್ಲಾಡಳಿತದ ಮೂಲಗಳು ಸಹ ಸ್ಪಷ್ಟ ಚಿತ್ರಣ ನೀಡಿಲ್ಲ .ಇನ್ನು ಪರಮಾಣು ವಿದ್ಯುತ್ ಗಾರಕ್ಕಾಗಿ ವಿಜಯಪುರ,ಕೊಪ್ಪಳ ಮತ್ತು ರಾಯಚೂರಿನಲ್ಲಿ 4,800 ಹೆಕ್ಟೇರ್ ಗೂ ಹೆಚ್ಚು ಜಮೀನನ್ನು ಗುರುತಿಸಲಾಗಿದೆ.

Kaiga| ಕೈಗಾ 5&6 ನೇ ಘಟಕದಲ್ಲಿ ಉದ್ಯೋಗಕ್ಕಾಗಿ ಅರ್ಜಿ ಹಾಕಿದವರು 3000 ,ತರಬೇತಿಗೆ ಬಂದವರು 180 ಜನ!

ಸದ್ಯ ಈ ಪ್ರಸ್ತಾವನೆ ಪ್ರಾಥಮಿಕ ಹಂತದಲ್ಲಿದ್ದು ಈಗ ಗುರುತಿಸಿದ ಸ್ಥಳಗಳ ಸಾಧಕ -ಭಾದಕದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.

ಇನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಈ ಬಗ್ಗೆ ವಿರೋಧ ವ್ಯಕ್ತವಾಗಿದ್ದು ಸಾಗರದಲ್ಲಿ ಹೋರಾಟಗಾರರ ಮತ್ತು ಯೋಜನೆ ಗುರುತಿಸಿದ ಸ್ಥಳದ ಜನಗಳ ಸಭೆ ಕರೆಯಲಾಗಿದ್ದು ಸಾಧಕ ಭಾದಕದ ಬಗ್ಗೆ ಚರ್ಚೆ ನಡೆಸುವ ಜೊತೆಗೆ ವಿರೋಧ ವ್ಯಕ್ತಪಡಿಸುವ ನಿರ್ಣಯ ಕೈಗೊಳ್ಳಲಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement