ಭಟ್ಕಳದಲ್ಲಿ ಮಹಿಳೆಯರ ಹಿಂದೆ ಬಿದ್ದ ಕಪಿರಾಯ- ಮೂವರು ಒಂದೇ ಹೆಸರಿನ ಮಹಿಳೆಯರಿಗೆ ಮಾಡಿದ್ದೇನು ಗೊತ್ತಾ?
ಕಾರವಾರ :-ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹೆಬಳೆ ಗ್ರಾಮದ ಶ್ರೀ ಸಿದ್ದಿವಿನಾಯಕ ದೇವಸ್ಥಾನ ಸಮೀಪ ಕಳೆದ ಕೆಲವು ದಿನಗಳಿಂದ ಮಂಗನ ಕಾಟ ಹೆಚ್ಚಾಗಿದ್ದು, ಈಗಾಗಲೇ ಮೂವರು ಮಹಿಳೆಯರಿಗೆ ಕಚ್ಚಿ ಗಾಯಗೊಳಿಸಿರುವ ಘಟನೆ ನಡೆದಿದೆ.
Bhatkal| ಸಮುದ್ರಕ್ಕೆ ವಾಯು ವಿವಾರಕ್ಕೆ ತೆರಳಿದ ಮೂವರು ನೀರುಪಾಲು.
ಗ್ರಾಮದಲ್ಲಿ ಮನೆಮನೆಗೆ ನುಗ್ಗುತ್ತಿರುವ ಮಂಗ ಸಾರ್ವಜನಿಕರಲ್ಲಿ ಭೀತಿ ಉಂಟು ಮಾಡಿದೆ. ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಮನೆಯಿಂದ ಹೊರಬರಲು ಆತಂಕಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಕುರಿತು ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳೀಯ ಪಂಚಾಯಿತಿ ಅಧಿಕಾರಿಗಳಿಗೆ ಲಿಖಿತ ಅರ್ಜಿಯನ್ನೂ ಸಲ್ಲಿಸಿದ್ದಾರೆ. ಆದರೆ, ಅರ್ಜಿ ಸಲ್ಲಿಸಿ 15 ದಿನಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೂವರು ಕಮಲಾರಿಗೆ ಕಚ್ಚಿದ ಮಂಗ!
ಉಪಟಳ ನೀಡುತ್ತಿರುವ ಮಂಗವು ಹೆಬಳೆ ಭಾಗದ ಮೂವರು ಮಹಿಳೆಯರಿಗೆ ಕಚ್ಚಿ ಗಾಯಗೊಳಿಸಿದೆ. ಗಾಯಗೊಂಡ ಮೂವರು ಮಹಿಳೆಯರ ಹೆಸರೂ ಕಮಲಾ ಎಂಬುದಾಗಿ ತಿಳಿದುಬಂದಿದೆ. ಇದು ಸ್ಥಳೀಯರಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ಈ ಕುರಿತು ವಲಯ ಅರಣ್ಯಾಧಿಕಾರಿ ವಿಶ್ವನಾಥ ನಾಯ್ಕ ಮಾತನಾಡಿ, ಮಾಹಿತಿ ಲಭ್ಯವಾದ ತಕ್ಷಣ ನಮ್ಮ ಸಿಬ್ಬಂದಿ ಸ್ಥಳಕ್ಕೆ ತೆರಳಿ ಉಪಟಳ ನೀಡಿದ ಮಂಗವನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ, ಅದು ಬೇರೆ ಮಂಗಗಳ ಗುಂಪಿಗೆ ಸೇರಿಕೊಂಡಿರುವುದರಿಂದ ಕಾರ್ಯಾಚರಣೆಗೆ ತೊಂದರೆಯಾಗಿದೆ. ಎಂದಿದ್ದಾರೆ. ಒಟ್ಟಿನಲ್ಲಿ ಭಟ್ಕಳದ (bhatkal) ಮೂವರು ಮೂವರು ಕಮಲಾ ಎಂಬ ಮಹಿಳೆಯರ ಹಿಂದೆ ಬಿದ್ದ ಮಂಗ ಊರಿನ ಜನರ ನಿದ್ದೆ ಕೆಡಿಸುವಂತೆ ಮಾಡಿದೆ.
