Uttara kannada| ಅಧಿಕಾರಿಗಳ ಸಮನ್ವಯ ಕೊರತೆ ಪ್ರವಾಸೋಧ್ಯಮ ನಿರ್ಬಂಧ ಹಿಂಪಡೆತ |ಪತ್ರಕರ್ತರಿಗೆ ಇಂಗು ತಿನ್ನಿಸಿದ ಅಧಿಕಾರಿಗಳು.
ಕಾರವಾರ :- ಎತ್ತಿಗೆ ಜ್ವರ ಬಂದ್ರೆ ಕೋಣಂಗೆ ಬರೆ ಎಳೆದ್ರು ಎನ್ನುವಂತೆ ಉತ್ತರ ಕನ್ನಡ (uttara kannada) ಜಿಲ್ಲೆಯಲ್ಲಿ ಅಧಿಕಾರಿಗಳ ಸಮನ್ವಯ ಕೊರತೆ ಇದೀಗ ಹಾದಿ ಬೀದಿ ರಂಪವಾಗಿದೆ.
ಹೌದು ಪ್ರವಾಸೋಧ್ಯಮ ಇಲಾಖೆ ಮೆ.18 ರಂದು ಜಿಲ್ಲೆಯ ಜಲಸಾಹಸ ಕ್ರೀಡೆಯನ್ನು ಬಂದ್ ಮಾಡಿ ಮರುದಿನ ಮೇ 19 ರಂದು ಮಾಧ್ಯಮ ಪ್ರಕಟಣೆ ಹೊರಡಿಸಿತು.
Watermelon ಹಣ್ಣು ತಿನ್ನುವುದರಿಂದ ಸಾವು ಭವಿಸುತ್ತಾ?ಮುಂಬೈ ಕುಟುಂಬದ ಸಾವಿನ ಕಾರಣ ಬಿಚ್ಚಿಟ್ಟ ತಜ್ಞರು
ಈ ಪ್ರಕಟಣೆಯನ್ನ ಯಲ್ಲಾ ಮಾಧ್ಯಮಗಳು ವರದಿಸಿದ್ದಪಡಿಸಿ ಕಳುಹಿಸಿದರು. ನಂತರ ಮರುದಿನ ಬೆಳಗ್ಗೆ ಪತ್ರಿಕೆಗಳಲ್ಲಿ ಪ್ರಕಟ ಸಹ ಆದವು. ಆದ್ರೆ ಪ್ರಕಟವಾದ ದಿನವೇ ಮತ್ತೊಂದು ಪ್ರಕಟಣೆ ಹೊರಡಿಸಿದ್ದು ನಿಷೇಧ ಹಿಂಪಡೆದ ಮಾಹಿತಿ ಪ್ರಕಟಣೆಯಲ್ಲಿ ಇತ್ತು.
ಇನ್ನು ಈ ಪ್ರಕಟಣೆಯಲ್ಲಿ ಪ್ರವಾಸಿಗರಿಗೆ ನಿರಾಸೆ ಆಗದಂತೆ ವಾತಾವರಣ ಪರಿಗಣನೆ ತೆಗೆದುಕೊಂಡು ನಿಷೇಧವನ್ನು ಹಿಂಪಡೆದ ಬಗ್ಗೆ ಮಾಹಿತಿ ಹಾಕಲಾಗಿದೆ.

ಆದರೇ ಪ್ರವಾಸೋಧ್ಯಮದ ಪ್ರಕಟಣೆ ನಂಬಿ ಪತ್ರಕರ್ತರು ಇಂಗು ತಿಂದ ಮಂಗತಾಗಿದ್ದು ಸುದ್ದಿ ಮಾಡಿದ ತಪ್ಪಿಗೆ ಪರಿತಪಿಸುವಂತಾಗಿದೆ.
ಅಧಿಕಾರಿಗಳ ಸಮನ್ವಯ ಕೊರತೆ

ಪ್ರತಿ ವರ್ಷ ಜೂನ್ ತಿಂಗಳಲ್ಲಿ ಪ್ರವಾಸೋಧ್ಯಮ ಚಟುವಟಿಕೆಗಳು ಬಂದ್ ಆಗುತ್ತವೆ. ಆದರೇ ಸಧ್ಯ ಹವಾಮಾನ ವೈಪರಿತ್ಯ ದಿಂದ ಇನ್ನೂ ಮೂರು ದಿನ ಮಳೆ ಸುರಿಯುವ ಸೂಚನೆಯನ್ನ ಹವಾಮಾನ ಇಲಾಖೆ ನೀಡಿದ್ದು ಸಮುದ್ರ ಕ್ಷುದ್ರವಾಗಿರುವುದು ಮುಂದುವರೆದಿದೆ. ಆದರೇ ಈ ಪ್ರಕಟಣೆ ಹೊರಡಿಸುವ ಮೊದಲು ಜಿಲ್ಲಾಧಿಕಾರಿಗಳ ಹಾಗೂ ಅಪರ ಜಿಲ್ಲಾಧಿಕಾರಿಗಳ ಗಮನಕ್ಕೆ ತರದಿರುವುದೇ ಈ ಅಚಾತುರ್ಯಕ್ಕೆ ಕಾರಣ ಎನ್ನಲಾಗಿದೆ.ಈ ಮೂಲಕ ಅಧಿಕಾರಿಗಳ ನಡುವೆ ಸಮನ್ವಯ ಕೊರತೆ ಇರುವುದು ಎದ್ದು ಕಾಣುತ್ತದೆ.
ಈ ಹಿಂದೆ ಗೋಕರ್ಣ ಸುತ್ತಮುತ್ತ ಜಲಸಾಹಸ ಕ್ರೀಡೆ ನಡೆಯುವ ಪ್ರದೇಶದಲ್ಲಿ ಮೀನುಗಾರಿಕೆ ನಿಷೇಧ ಹೇರಿದ್ದ ಪ್ರವಾಸೋಧ್ಯಮ ಇಲಾಖೆ ಕೊನೆಗೆ ಮೀನುಗಾರರ ವಿರೋಧದ ನಂತರ ಹಿಂಪಡೆಯಿತು.







