ಕಾಂಗ್ರೆಸ್ ಮಾಜಿ ಶಾಸಕ ಮಂಕಾಳು ವೈದ್ಯರಿಂದ ಕಾಂಗ್ರೆಸ್ ಅಭಿಮಾನಿ ಬಳಗ ಫೇಸ್ ಬುಕ್ ಖಾತೆ ವಿರುದ್ಧ ಠಾಣೆಯಲ್ಲಿ ದೂರು.

2686

ಕಾರವಾರ :- ಭಟ್ಕಳದಲ್ಲಿ ಕೋಮು ಸಾಮರಸ್ಯ ಹಾಳು ಮಾಡುವ ದೃಷ್ಟಿಯಿಂದ ಸೃಷ್ಟಿಯಾಗಿದ್ದ ಭಟ್ಕಳ ಕಾಂಗ್ರೆಸ್ ಅಭಿಮಾನಿ ಬಳಕ ಫೇಸ್ ಬುಕ್ ಖಾತೆ ಹಾಗೂ ಬಿಜೆಪಿ ಉತ್ತರ ಕನ್ನಡ ವಾಟ್ಸ್ ಅಪ್ ಗ್ರೂಪ್ ವಿರುದ್ಧ ಕಾಂಗ್ರೇಸ್ ಮಾಜಿ ಶಾಸಕ ಮಂಕಾಳು ವೈದ್ಯರಿಂದ ಇಂದು ರಾತ್ರಿ ಮುರಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ,ಮುಖಂಡರು ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣೆ ಭಾಗವಹಿಸಬಾರು.ಭಾಗವಹಿಸಿದಲ್ಲಿ ಅಂತವರನ್ನು ಪಕ್ಷದಿಂದ ಉಚ್ಚಾಟಿಸಲಾಗುವು ಎಂದು ಬರೆಯುವ ಮೂಲಕ ಮಾಜಿ ಶಾಸಕ ಮಂಕಾಳು ವೈದ್ಯ ಹಾಗೂ ಕಾಂಗ್ರೆಸ್ ಅಗ್ರ ನಾಯಕರ ಫೋಟೋ ಹಾಕಿದ್ದ ಭಟ್ಕಳದ ಕಾಂಗ್ರೆಸ್ ಅಭಿಮಾನಿ ಬಳಗದಿಂದ ಫೋಸ್ಟ್ ಮಾಡಲಾಗಿತ್ತು.

ಇದಲ್ಲದೇ ಈ ಪೋಸ್ಟ್ ಅನ್ನು
ನಮ್ಮ ಸ್ನೇಹಿತರು ವಾಟ್ಸ್ ಅಪ್ ಗ್ರೂಪ್,ಬಿಜೆಪಿ ಉತ್ತರ ಕನ್ನಡ ವಾಟ್ಸ್ ಅಪ್ ಗ್ರೂಪ್,ಪ್ರಾಣಿಪ್ರಿಯ ವಾಟ್ಸ್ ಅಪ್ ಗ್ರೂಪ್ ಗಳಲ್ಲಿ ಶೇರ್ ಮಾಡಲಾಗಿದೆ.

ಇದರಿಂದಾಗಿ ಭಟ್ಕಳದಲ್ಲಿ ಮಾಜಿ ಶಾಸಕ ಮಂಕಾಳು ವೈದ್ಯರ ವಿರುದ್ಧ ಒಂದು ಕೋಮಿನವರು ಕೋಪಗೊಂಡಿದ್ದಲ್ಲದೇ ಎರಡು ಕೋಮುಗಳ ಸಾಮರಸ್ಯಕ್ಕೆ ದಕ್ಕೆಯಾಗಿತ್ತು.

ಈ ವಿಷಯ ಮಾಜಿ ಶಾಸಕರ ಗಮನಕ್ಕೆ ಬಂದಕೂಡಲೇ ಮುರಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಹಿಂದೆಯೂ ನಡೆದಿತ್ತು ಘಟನೆ

ಈ ಹಿಂದೆಯು ಕೂಡ ಶಿಕ್ಷಣ ಪ್ರೇಮಿ ಮಂಕಾಳುವೈದ್ಯ ಅಭಿಮಾನಿ ಬಳಗ ಎಂಬ ಶಿರೋ ನಾಮದಲ್ಲಿ ಇದೇ ಅಕೌಂಟ್ ಮಾಡಲಾಗಿದ್ದು ಹಿಂದೂ ಧಾರ್ಮಿಕರಲ್ಲಿ ಉದ್ರಿಕ್ತ ಪ್ರಚೋಧನೆಗಳ ಪೋಸ್ಟ್ ಹಾಕಲಾಗುತಿತ್ತು.ಇದರಿಂದಾಗಿ ಕಾಂಗ್ರೆಸ್ ಪಕ್ಷದ ಮೇಲೆ ಹಾಗೂ ಮಾಜಿ ಶಾಸಕ ಮಂಕಾಳು ವೈದ್ಯರ ಮೇಲೆ ಅಪಪ್ರಚಾರಗಳು ಆಗು ವಂತಾಗುತಿದ್ದು ಕೋಮುಗಳ ನಡುವೆ ಸಂಘರ್ಷ ಏರ್ಪಡುವ ಸ್ಥಿತಿ ನಿರ್ಮಾಣವಾಗಿತ್ತು.

ಈಗ ಅದೇ ಖಾತೆಯನ್ನು ಭಟ್ಕಳ ಕಾಂಗ್ರೆಸ್ ಅಭಿಮಾನಿ ಬಳಗ ಎಂಬ ಮರುನಾಮಕರಣ ಮಾಡಿ ಜನರ ಭಾವನೆಗಳಿಗೆ ಧಕ್ಕೆಯಾಗುವಂತಹ ಪೋಸ್ಟ್ ಗಳನ್ನು ಹಾಕಲಾಗುತ್ತಿದೆ. ಈ ಪೋಸ್ಟ್ ಗಳನ್ನ ಬಿಜೆಪಿ ಗ್ರೂಪ್ ಗಳಲ್ಲಿ ಶೇರ್ ಮಾಡಲಾಗುತಿತ್ತು.

ಭಟ್ಕಳ ಕಾಂಗ್ರೆಸ್ ಅಭಿಮಾನಿ ಬಳಗ ಸೇರಿದಂತೆ ಈ ಪೋಸ್ಟ್ ಅನ್ನು ಶೇರ್ ಮಾಡಿದ ಬಿಜೆಪಿ ಉತ್ತರಕನ್ನಡ ವಾಟ್ಸ್ ಅಪ್ ಗ್ರೂಪ್ ಗಳ ವಿರುದ್ಧ ಮಾಜಿ ಶಾಸಕರು ದೂರು ದಾಖಲಿಸಿದ್ದಾರೆ.

ಕನ್ನಡವಾಣಿ.ನ್ಯೂಸ್ ನೊಂದಿಗೆ ಮಾತನಾಡಿದ ಅವರು ಈ ಹಿಂದೆ ಚುನಾವಣಾ ಪ್ರಚಾರದಲ್ಲಿ ಪಾಕಿಸ್ತಾನದ ದ್ವಜ ಹಾರಿಸಿದ್ದೇವೆ ಎಂದು ಸುಳ್ಳು ಸುದ್ದಿ ಹರಡಿದ್ದರು. ಹಾಲಿ ಬಿಜೆಪಿ ಶಾಸಕ ಸುನಿಲ್ ನಾಯ್ಕ ಇದಕ್ಕೆ ನೇರ ಹೊಣೆ .ಅವರ ತಂಡ ಈ ರೀತಿಯ ಕೃತ್ಯಮಾಡುತ್ತಿದೆ. ಹಿಂದೆ ದೂರು ಕೊಟ್ಟಾಗ ಇಲಾಖೆ ಸಹ ಏನೂ ಮಾಡಲಿಲ್ಲ .ಈಗ ತುಂಬಾ ಅನಿವಾರ್ಯವಾಗಿದೆ.ದೂರು ಕೊಟ್ಟಿದ್ದೇನೆ,ಕ್ರಮ ಕೈಗೊಳ್ಳದಿದ್ದಲ್ಲಿ ಡಿ.ಜಿ ಕಚೇರಿಯಲ್ಲಿ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಸುದ್ದಿ ಗಳನ್ನು ಪ್ರತಿ ದಿನ ಉಚಿತವಾಗಿ ಓದಲು ಈ ಕೆಳಗಿನ ವಾಟ್ಸ್ ಅಪ್ ಗ್ರೋಪ್‌ಲಿಂಕ್ ಬಳಸಿ ಸೇರಿ:-

https://chat.whatsapp.com/GcWt6hupIs299UU7VTWYtI
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!