BREAKING NEWS
Search

siddapur| ಮಂಗನಕಾಯಿಲೆಗೆ ಐದು ವರ್ಷದ ಮಗು ಬಲಿ

39

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ (Uttra Kannada) ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ (KFD disease) ಮತ್ತೆ ಉಲ್ಬಣಗೊಂಡಿದೆ.
ಇಂದು ಜಿಲ್ಲೆಯ ಸಿದ್ದಾಪುರ (siddapura) ತಾಲೂಕಿನ ಅರೆಂದೂರಿನಲ್ಲಿ 5 ವರ್ಷದ ಹೆಣ್ಣುಮಗು ಮಂಗನಕಾಯಿಲೆಯಿಂದ ಬಹು ಅಂಗಾಂಗ ವೈಪಲ್ಯದಿಂದ ಸಾವು ಕಂಡಿದೆ. ಈ ಮೂಲಕ ಜಿಲ್ಲೆಯಲ್ಲಿ ಮಂಗನ ಕಾಯಿಲೆಯಿಂದ ಒಂಬತ್ತು ಜನ ಸಾವು ಕಂಡಿದ್ದಾರೆ.

ಇದನ್ನೂ ಓದಿ:-ದಾಂಡೇಲಿ| ಗಂಡನ ಮೇಲಿನ ಕೋಪಕ್ಕೆ ಮಗುವನ್ನ ಮೊಸಳೆ ಗಳಿದ್ದ ನಾಲೆಗೆ ಎಸೆದ ಪಾಪಿ ತಾಯಿ.

ಕೆಲವು ದಿನದಿಂದ ಜ್ವರದಿಂದ ನರಳುತಿದ್ದ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೇ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದೆ.

ಸಿದ್ದಾಪುರ ತಾಲೂಕಿನೊಂದರಲ್ಲೇ 90 ಮಂಗನಕಾಯಿಲೆ ಪ್ರಕರಣ ಪತ್ತೆಯಾದರೇ ಇತರೆ ತಾಲೂಕುಗಳು ಸೇರಿ ಒಟ್ಟು 99 ಪ್ರಕರಣಗಳು ಈವರೆಗೆ ಪತ್ತೆಯಾಗಿವೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!