ಆಟೋದಲ್ಲಿ ಬಿಟ್ಟುಹೋಗಿದ್ದ ₹11 ಲಕ್ಷ ಮೌಲ್ಯದ ಚಿನ್ನ ಮರಳಿಸಿದ ಭಟ್ಕಳದ ಆಟೋ ಚಾಲಕ
ಕಾರವಾರ:- ಪ್ರಮಾಣಿಕತೆಯೇ ಇಲ್ಲದ ಇಂದಿನ ದಿನದಲ್ಲಿ ಹಾದಿಯಲ್ಲಿ ಏನೇ ಸಿಕ್ಕರೂ ಅದು ನನ್ನದೆಂದು ಹೊತ್ತೊಯ್ಯುವ ಕಾಲದಲ್ಲಿ ಆಟೋ ಚಾಲಕನೊಬ್ಬ ತನ್ನ ವಾಹನದಲ್ಲಿ ಮಹಿಳೆಯೊಬ್ಬರು ಬಿಟ್ಟುಹೋದ 11 ಲಕ್ಷ ಮೌಲ್ಯದ ಚಿನ್ನಾಭರಣವನ್ನ ಪ್ರಾಮಾಣಿಕವಾಗಿ ಹಿಂದಿರುಗಿಸಿ ಮಾದರಿಯಾಗಿದ್ದಾರೆ.
ಭಟ್ಕಳ(bhatkal) ಪಟ್ಟಣದ ಆಟೋ ಚಾಲಕ ಮೋಹನ್ ತಿಮ್ಮಪ್ಪ ನಾಯ್ಕ್ ಪ್ರಾಮಾಣಿಕತೆ ಮೆರೆದವರಾಗಿದ್ದು ,ನಿತ್ಯದಂತೆ ಬಾಡಿಗೆಗೆ ತೆರಳಿದ್ದಾಗ, ತಮ್ಮ ವಾಹನದಲ್ಲಿ ಪ್ರಯಾಣಿಕರು ಬ್ಯಾಗ್ ಒಂದನ್ನು ಮರೆತು ಬಿಟ್ಟುಹೋಗಿರುವುದನ್ನು ಅವರು ಗಮನಿಸಿದ್ದಾರೆ. ಅದನ್ನು ಪರಿಶೀಲಿಸಿದಾಗ ಅದರಲ್ಲಿ ಅಪಾರ ಮೌಲ್ಯದ ಚಿನ್ನಾಭರಣಗಳಿರುವುದು ಕಂಡುಬಂದಿದೆ.
Bhatkal:ಮುರ್ಡೇಶ್ವರ ದೇವಸ್ಥಾನದಲ್ಲಿ ಮಹಿಳೆಯ ಚಿನ್ನ ಎಗರಿಸಿದ ಮಹಿಳೆ ಬಂಧನ| ಕದ್ದ ಚಿನ್ನ ಏನು ಮಾಡಿದ್ಲು ಗೊತ್ತಾ?
ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳಿದ್ದರೂ ಯಾವುದೇ ಆಮಿಷಕ್ಕೊಳಗಾಗದ ಮೋಹನ್ ಅವರು, ತಕ್ಷಣವೇ ಆ ಬ್ಯಾಗ್‌ನ ಮಾಲೀಕರನ್ನು ಪತ್ತೆಹಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ. ಇದಕ್ಕೆ ಪೊಲೀಸರ ಸಹಾಯ ಪಡೆದು ಅಂತಿಮವಾಗಿ ಮಹಿಳೆಯನ್ನು ಪತ್ತೆಹಚ್ಚಿ, ಅವರ ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿ ಹಸ್ತಾಂತರಿಸಿದ್ದಾರೆ.
ಈ ಮೂಲಕ ತಮ್ಮ ಪ್ರಾಮಾಣಿಕತೆ ಮೆರೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.







