Bhatkal| ಎರಡು ಗುಂಪುಗಳ ನಡುವೆ ಘರ್ಷಣೆ – ಇಬ್ಬರಿಗೆ ಚಾಕು ಇರಿತ

Bhatkal:Two persons were seriously injured in a stabbing incident following a bike accident clash in Bhatkal. Police have registered a case and launched a search for the accused.
Police officers monitoring tense situation in Bhatkal Police officers monitoring tense situation in Bhatkal
Police officers monitoring tense situation in Bhatkal

Bhatkal| ಎರಡು ಗುಂಪುಗಳ ನಡುವೆ ಘರ್ಷಣೆ – ಇಬ್ಬರಿಗೆ ಚಾಕು ಇರಿತ.

Bhatkal|ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ (Bhatkal )ತಾಲೂಕಿನ ಜಾಲಿಯ ದೇವಿನಗರದಲ್ಲಿ ಬೈಕ್ ಅಪಘಾತದ ಹಿನ್ನೆಲೆ ಎರಡು ಗುಂಪುಗಳ ನಡುವೆ ಸಂಘರ್ಷ ನಡೆದಿದೆ.

 ಈ ಸಂಘರ್ಷದಲ್ಲಿ ಮತ್ತೊಂದು ಗುಂಪಿನ ಇಬ್ಬರಿಗೆ ಚಾಕು ಇರಿತ ಮಾಡಲಾಗಿದೆ. ಚಾಕು ಇರಿತಕ್ಕೊಳಗಾದವರನ್ನು ತಕ್ಷಣವೇ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ನಂತರ ಅವರ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

Advertisement

Bhatkal news
ಭಟ್ಕಳ ದಲ್ಲಿ ಗಾಲಾಟೆ ಮಾಡಿಕೊಳ್ಳುತ್ತಿರುವ ಎರಡು ಗುಂಪು

ಗಾಯಗೊಂಡವರನ್ನು ರಂಗಿನಕಟ್ಟೆಯ ತೌಸಿಫ್ ಕತೀಬ್ (39)ನಾಗಪ್ಪ ನಾಯ್ಕ ರಸ್ತೆ ನಿವಾಸಿ ಜುಪಾಪ್ ಅರ್ಮರ್ (22) ಎಂದು ಗುರುತಿಸಲಾಗಿದೆ.

ಪರಾರಿಯಾದ ಆರೋಪಿಗಳು.

Videoshot 20260326 231000 e1774547667172

ಬೈಕ್ ಅಪಘಾತದಿಂದ ಉದ್ಭವಿಸಿದ ವಿಚಾರವೇ ಗಲಾಟೆಗೆ ಕಾರಣವಾಗಿದ್ದು, ಒಂದು ಗುಂಪಿನ ಯುವಕರು ಚಾಕು ಇರಿದು ಸ್ಥಳದಿಂದ ಪರಾರಿಯಾಗಿದ್ದಾರೆ .

Bhatkal :ಪುರಸಭಾ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ ಆತ ಪಡೆದಿದ್ದ ಹಣವೆಷ್ಟು ಗೊತ್ತಾ?

ಘಟನೆಯ ಸುದ್ದಿ ಹರಡುತ್ತಿದ್ದಂತೆ ಸ್ಥಳೀಯ ಮುಸ್ಲಿಂ ಸಮುದಾಯದವರು ಆಸ್ಪತ್ರೆ ಎದುರು ಜಮಾಯಿಸಿ ಆತಂಕದ ವಾತಾವರಣ ನಿರ್ಮಾಣವಾಯಿತು. ಆರೋಪಿಗಳನ್ನ ಬಂಧಿಸುವಂತೆ ಆಗ್ರಹಿಸಿದ್ದು

,ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಡಿವೈಎಸ್‌ಪಿ ಗಿರೀಶ್ ಹಾಗೂ ಸಿಪಿಐ ದಿವಾಕರ್ ನೇತೃತ್ವದಲ್ಲಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ನಡೆಸಲಾಯಿತು.

ಈ ಸಂಬಂಧ Bhatkal Town Police Station ನಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement