Bhatkal| ಮಂಕಿ ಪಟ್ಟಣ ಪಂಚಾಯ್ತಿ ಚುನಾವಣೆ:ಸಚಿವ ಮಂಕಾಳು ವೈದ್ಯ ಬೆಂಬಲಿಗರಿಗೆ ಹಿನ್ನಡೆ|ಬಿಜೆಪಿ ಗೆ ಜಯ

Bhatkal news:- ಉತ್ತರ ಕನ್ನಡ ಜಿಲ್ಲೆಯ ಭಟ್ಕಳ (bhatkal)ತಾಲೂಕಿನ ಮಂಕಿ ಪಟ್ಟಣದಲ್ಲಿ ನಡೆದ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದಾರೆ.
ಒಟ್ಟು 20 ವಾರ್ಡುಗಳಿಗೆ ಚುನಾವಣೆ ಘೋಷಣೆ ಮಾಡಲಾಗಿದ್ದು, ಇದರಲ್ಲಿ ಎರಡು ವಾರ್ಡುಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು.

ಉಳಿದ 18 ವಾರ್ಡುಗಳಿಗೆ ಡಿಸೆಂಬರ್ 21ರಂದು ಮತದಾನ ನಡೆದಿತ್ತು.
Bhatkal| ಸಮುದ್ರದಲ್ಲಿ ಮುಳಗಿ ಇಬ್ಬರು ಸಾವು
ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 12 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಸ್ಪಷ್ಟ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಬೆಂಬಲಿತ 6 ಸ್ಥಾನಗಳಲ್ಲಿ ಮಾತ್ರ ಜಯ ಸಾಧಿಸಿದ್ದು, ಅವಿರೋಧ ಆಯ್ಕೆ ಸೇರಿಸಿ ಒಟ್ಟು 8 ಸ್ಥಾನಗಳಿಗೆ ಸೀಮಿತವಾಗಿದೆ.
ಈ ಫಲಿತಾಂಶದಿಂದಾಗಿ ಸಚಿವ ಮಂಕಾಳು ವೈದ್ಯ ಅವರ ಪ್ರಭಾವಕ್ಕೆ ಮಂಕಿ ಪಟ್ಟಣದಲ್ಲಿ ಭಾರೀ ಹಿನ್ನೆಡೆ ಆಗಿರುವುದು ಸ್ಪಷ್ಟವಾಗಿದೆ.

2020ರಲ್ಲಿ ರಚನೆಯಾದ ಮಂಕಿ ಪಟ್ಟಣ ಪಂಚಾಯ್ತಿಗೆ ಇದು ಮೊದಲ ಬಾರಿಗೆ ನಡೆದ ಚುನಾವಣೆ ಆಗಿದ್ದು, ಮೊದಲ ಚುನಾವಣೆಯಲ್ಲೇ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಬಹುಮತ ಸಾಧಿಸಿದ್ದಾರೆ.
ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಮಂಕಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದು, ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂತಸ ವ್ಯಕ್ತಪಡಿಸಿದರು.








