Bhatkal- ಸಾಲ ನೀಡಿದ ಹಣ ಮರುಪಾವತಿಯಾಗದೇ ಕಾಲೇಜು ಶುಲ್ಕ ಕಟ್ಟಲಾಗದೇ ವಿದ್ಯಾರ್ಥಿನಿ ಆತ್ಮಹತ್ಯೆ

ಭಟ್ಕಳ ತಾಲೂಕಿನ ಬೆಳಕೆ ಗ್ರಾಮದಲ್ಲಿ ಕಾಲೇಜು ಶುಲ್ಕ ಪಾವತಿಸಲಾಗದೇ ಮನನೊಂದ ಬಿಸಿಎ ವಿದ್ಯಾರ್ಥಿನಿ ಗಾಯಿತ್ರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸಾಲ ನೀಡಿದ ಹಣ ಮರುಪಾವತಿಯಾಗದ ಹಿನ್ನೆಲೆ ಈ ದುರ್ಘಟನೆ ನಡೆದಿದೆ.
Bhatkal news Bhatkal news
Bhatkal news

Bhatkal- ಸಾಲ ನೀಡಿದ ಹಣ ಮರುಪಾವತಿಯಾಗದೇ ಕಾಲೇಜು ಶುಲ್ಕ ಕಟ್ಟಲಾಗದೇ ವಿದ್ಯಾರ್ಥಿನಿ ಆತ್ಮಹತ್ಯೆ.

 

ಕಾರವಾರ :- ಸಾಲ ಕೊಟ್ಟ ಹಣ ಮರಳಿ ಸಿಗದ ಹಿನ್ನಲೆಯಲ್ಲಿ  ಕಾಲೇಜು ಶುಲ್ಕ ಪಾವತಿಸಲಾಗದೇ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ (bhatkal)ತಾಲೂಕಿನ ಬೆಳಕೆ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ:-bhatkal| ಬಾವಿಗೆ ಬಿದ್ದ ಚಿರತೆ ರಕ್ಷಣೆ ವಿಡಿಯೋ ನೋಡಿ.

Advertisement

ಭಟ್ಕಳದಲ್ಲಿ(bhatkal) ಬಿಸಿಎ ಓದುತ್ತಿರುವ ಗಾಯಿತ್ರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯಾಗಿದ್ದಾಳೆ.ಈಕೆಗೆ ಕಾಲೇಜಿಗೆ ಶುಲ್ಕ ಕಟ್ಟಲು ತಂದೆ ನಾಗರಾಜ ಲಚ್ಚಯ್ಯ ನಾಯ್ಕ ಹತ್ತುಸಾವಿರ ಹಣ ನೀಡಿದ್ದರು.

ಊರಿನ ಪರಿಚಯಸ್ತ ಸಂತೋಷ ಮಾಧೇದ ನಾಯ್ಕ ಎಂಬಾತ ಈಕೆಯ ಬಳಿ ಹತ್ತುಸಾವಿರವನ್ನು ಶರತ್ತಿನಲ್ಲಿ ನಿಗಧಿ ಸಮಯದಲ್ಲಿ ಮರಳಿಸುವುದಾಗಿ ಸಾಲ ಪಡೆದಿದ್ದನು.ಆದರೇ ಆತ ನಿಗದಿ ಸಮಯಕ್ಕೆ ಹಣ ಮರಳಿ ನೀಡದಿದ್ದರಿಂದ ಶುಲ್ಕ ಕಟ್ಟಲಾಗದೇ ಹಾಲ್ ಟಿಕೇಟ್ ದೊರೆತಿರಲಿಲ್ಲ.ಇದರಿಂದ ಮನನೊಂದ ಗಾಯಿತ್ರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement