Chitradurga: ಮುರುಘಾ ಶರಣರಿಗೆ ರಿಲೀಫ್! ಏನಾಯ್ತು ಕೋರ್ಟ ನಲ್ಲಿ?

72

ಚಿತ್ರದುರ್ಗ: ಪೋಕ್ಸೋ ಪ್ರಕರಣದ (POSCSO Case) ಆರೋಪಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರ (Shivamurthy Murugha Sharanaru) ವಿಚಾರದಲ್ಲಿ ಭಾರಿ ಬೆಳವಣಿಗೆ ( davlapment) ನಡೆದಿದೆ.

2ನೇ ಪೋಕ್ಸೋ ಕೇಸ್‌ಗೆ ಸಂಬಂಧಿಸಿದಂತೆ ಶನಿವಾರ ಜೈಲಿನಿಂದ ರಿಲೀಸ್ ಆಗಿದ್ದ ಶಿವಮೂರ್ತಿ ಶರಣರ ವಿರುದ್ಧ ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (Chitradurga Court) ಜಾಮೀನುರಹಿತ ಬಂಧನ ವಾರೆಂಟ್ ಹೊರಡಿಸಿತು. ಈ ಬೆನ್ನಲ್ಲೇ ಚಿತ್ರದುರ್ಗ ಗ್ರಾಮೀಣ ಪೊಲೀಸರು ದಾವಣಗೆರೆಗೆ ತೆರಳಿ ಶಿವಮೂರ್ತಿ ಶರಣರವನ್ನು ಬಂಧಿಸಿ ನ್ಯಾಯಾಧೀಶೆ ಬಿ ಕೆ ಕೋಮಲಾ ಮುಂದೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾ. ಕೋಮಲಾ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಪ್ರಕಟಿಸಿದರು.
ಹೈಕೋರ್ಟ್ ಆದೇಶವನ್ನು ತಪ್ಪಾಗಿ ಅರ್ಥೈಸಲಾಗಿದೆ. ಹೀಗೆ ಆದರೆ ನಾವು ಕ್ರಮಕೈಗೊಳ್ಳಬೇಕಾಗುತ್ತದೆ. ಅದಕ್ಕೆ ಅವಕಾಶ ಇದೆ ಎಂದು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠ ಎಚ್ಚರಿಕೆ ನೀಡಿತು.

ಚಿತ್ರದುರ್ಗ ಕೋರ್ಟ್ ಆದೇಶಕ್ಕೆ ತಡೆ ನೀಡಿದ ಹೈಕೋರ್ಟ್ ಕೂಡಲೇ ಆರೋಪಿಯನ್ನು ರಿಲೀಸ್ ಮಾಡಲು ಸೂಚಿಸಿತು. ಇಷ್ಟೆಲ್ಲಾ ಆಗುವ ಹೊತ್ತಿಗೆ ಸಂಜೆ ಆಗಿತ್ತು. ಹೀಗಾಗಿ ಶಿವಮೂರ್ತಿ ಶರಣರನ್ನು ಮಂಗಳವಾರ ಚಿತ್ರದುರ್ಗ ಜೈಲಿನಿಂದ ಬಿಡುಗಡೆ ಮಾಡಲಾಗುತ್ತದೆ. ಸದ್ಯಕ್ಕೆ ಮುರುಘಾ ಶರಣರಿಗೆ ರಿಲೀಪ್ ಆದ್ರೂ ಮತ್ತೆ ಜೈಲು ಕಂಬಿ ಎಣಿಸುವ ಸಾಧ್ಯತೆ ಇದ್ದು ಮುಂದಿನ ದಿನಾಂಕದಲ್ಲಿ ವಾದ ವಿವಾದದ ನಂತರ ಪೂರ್ಣ ವಿವರ ತಿಳಿಯಲಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!