Bhatkal- ಹೈ ಅಲರ್ಟ-ನಗರದಾಧ್ಯಾಂತ ಹೆಚ್ಚಿನ ಪೊಲೀಸ್ ಭದ್ರತೆ ಕಾರಣ ಏನು?

174

ಕಾರವಾರ:-ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಲೋಕಾರ್ಪಣೆ ಹಿನ್ನಲೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ತೀವ್ರ ಕಟ್ಟೆಚ್ಚರವನ್ನು ಪೊಲೀಸ್ ಇಲಾಖೆ ಕೈಗೊಂಡಿದೆ.

ಜಿಲ್ಲೆಯಲ್ಲಿ ಭಟ್ಕಳದಲ್ಲಿ ವಿಶೇಷ ಕಾರ್ಯಕ್ರಮವನ್ನು ಹಿಂದೂಪರ ಸಂಘಟನೆ ಹಮ್ಮಿಕೊಂಡಿದ್ದು ಸಂಸದ ಅನಂತಕುಮಾರ್ ಹೆಗಡೆ ಸಹ ಭಾಗಿಯಾಗಲಿದ್ದು ಯಾವುದೇ ಅಹಿತಕರ ಘಟನೆ ಜರುಗದಂತೆ ಎ.ಎಸ್.ಪಿ ಜಯಕುಮಾರ್ ನೇತ್ರತ್ವದಲ್ಲಿ ಬಿಗಿ ಪೊಲೀಸ್ ಬಂದವಸ್ತ್ ಕಲ್ಪಿಸಲಾಗಿದೆ.

ಭಟ್ಕಳ ಹಿಂದೂ ಕಾರ್ಯಕರ್ತರಿಗೆ ವಿಡಿಯೋ ಮಾಡಿ ದುಬೈ ನಿಂದ ದಮ್ಕಿ ನೀಡಿದ ಮುಸ್ಲಿಂ ಯುವಕ!

ಒಂದು ಕೆ.ಎಸ್.ಆರ್.ಪಿ ತುಕಡಿ, 200 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇನ್ನು ಭಟ್ಕಳದ ಮುರ್ಡೇಶ್ವರ‌ ದೇವಾಲಯ, ರೈಲ್ವೆ ನಿಲ್ದಾಣ, ಮಾರಿಕಾಂಬಾ ದೇವಸ್ಥಾನ, ಚನ್ನಪಟ್ಟಣ ಹನುಮಂತ ದೇವಸ್ಥಾನ ಸೇರಿ ಹಲವು ಪ್ರದೇಶಗಳಲ್ಲಿ ಬಾಂಬ್ ನಿಷ್ಕ್ರಿಯ ದಶ,ಶ್ವಾನ ದಳದಿಂದ ತಪಾಸಣೆ ನಡೆಸಲಾಗುತ್ತಿದೆ

ಇನ್ನು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಉಭಯ ಕೋಮಿನ ಮುಖಂಡರನ್ನ ಠಾಣೆಗೆ ಕರೆಯಿಸಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಸೂಚನೆಯನ್ನು ಪೊಲೀಸ್ ಇಲಾಖೆ ನೀಡಿದೆ.ಇನ್ನು ನಾಳೆ ಜಿಲ್ಲೆಯಾಧ್ಯಾಂತ ಮೆರವಣಿಗೆಗಳನ್ನು ಮೌಕಿಕವಾಗಿ ನಿಷೇಧ ಹೇರಲಾಗಿದೆ.

ಇದನ್ನೂ ಓದಿ:-ಪ್ರಜಾಪ್ರಭುತ್ವ ಕ್ಕೆ ವಿರೋಧ ಪಕ್ಷ ಬೇಕು ,ದೇಶದ್ರೋಹಿಗಳ ವಿರೋಧ ಪಕ್ಷವಲ್ಲಅನಂತಕುಮಾರ್ ಹೆಗಡೆ




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!