BREAKING NEWS
Search

ಭಟ್ಕಳ ಹಿಂದೂ ಕಾರ್ಯಕರ್ತರಿಗೆ ವಿಡಿಯೋ ಮಾಡಿ ದುಬೈ ನಿಂದ ದಮ್ಕಿ ನೀಡಿದ ಮುಸ್ಲಿಂ ಯುವಕ!

196

ಕಾರವಾರ :- ಅತೀ ಸೂಕ್ಷ ಪ್ರದೇಶವಾದ ಭಟ್ಕಳದಲ್ಲಿ ಇದೀಗ ಕೋಮು ಸಂಘರ್ಷದ ಹೊಗೆಯಾಡುತಿದ್ದು ಅಧಿಕಾರಿಗಳು ಮಾಡಿದ ಸಣ್ಣ ತಪ್ಪಿನಿಂದ ಇದೀಗ ಸಂಘರ್ಷಕ್ಕೆ ಎಡೆಮಾಡಿಕೊಡುವಂತೆ ಮಾಡಿದೆ.

ಹೌದು ಭಟ್ಕಳದ ಜಾಲಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ದೇವಿನಗರದ ದೇವಿ ನಗರ ಎಂಬ ನಾಮಫಲಕವನ್ನು ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಮುಸ್ಲಿಂ ವ್ತಕ್ತಿಯೊಬ್ಬರ ಒತ್ತಡದಿಂದ ಮಸೀದಿ ಬಳಿ ಇರುವ ದೇವಿನಗರ ಎಂಬ ನಾಮಫಲಕವನ್ನು ತೆರವು ಮಾಡಿದ್ದಾರೆ ಎಂದು ಆರೋಪಿಸಿ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.

ಇದನ್ನೂ ಓದಿ:-ಭಟ್ಕಳದಲ್ಲಿ ರಂಗೇರಿದ ಜೂಜಾಟ:ರಾಜಕೀಯ ಮುಖಂಡರ ನೆರಳಲ್ಲಿ ಕಣ್ಣುಮುಚ್ಚಿ ಕುಳಿತ ಪೊಲೀಸರು!

ಇದಲ್ಲದೇ ಎರಡು ಗುಂಪುಗಳ ನಡಯವೆ ಮಾತಿನ ಸಂಘರ್ಷಕ್ಕೆ ಕಾರಣವಾಗಿತ್ತು.ಇನ್ನು ಸ್ಥಳೀಯ ಹಿಂದು ಕಾರ್ಯಕರ್ತರು ಅನಧಿಕೃತವಾಗಿ ನಿರ್ಮಾಣವದ ಮಸೀದಿಯನ್ನು ತೆರವುಗೊಳಿಸಬೇಕು ಮಸೀದಿಗೆ ಅಳವಡಿಸಿರುವ ಮೈಕ್ ತೆಗೆಯಬೇಕು ಎಂದು ಮನವಿ ನೀಡುವ ಜೊತೆ ಜನವರಿ22 ರ ವರೆಗೆ ಗಡುವು ನೀಡಿದ್ದು ಉಗ್ರ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಇನ್ನು ಪ್ರತಿಭಟನೆ ನಡೆಸಿದ್ದ ಹಿಂದೂ ಕಾರ್ಯಕರ್ತರಾದ ಹರೀಶ್ ,ದೆಯಾ ,ಮಹೇಶ್ ಎಂಬುವವರಿಗೆ ದುಬೈ ನಿಂದ ಮುಕ್ತಾರ್ ಮಹ್ಮದ್ ಕೊಟ್ಟಿಕೇಡಿ ಎಂಬಾತ ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಲ್ಲದೇ ದಮ್ಕಿ ಹಾಕಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಇದನ್ನೂ ಓದಿ:- Bhatkal ಜಾಲಿಯಲ್ಲಿ ನಾಮಫಲಕ ಸಂಘರ್ಷ- ಪೊಲೀಸ್ ಬಿಗಿ ಬಂದವಸ್ತ್!

ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಭಟ್ಕಳದ ಜಾಲಿ ಪಟ್ಟಣ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದವಸ್ತ್ ಕಲ್ಪಿಸಲಾಗಿದ್ದು ಯಾವ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದಾಗಿದ್ದು ಈ ಭಾಗದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಪರಿಸ್ಥಿತಿ ಇದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!