ಉತ್ತರ ಕನ್ನಡ ಲೋಕಸಭಾ ಅಖಾಡಕ್ಕೆ ಮಾಜಿ ಸಚಿವ ಆರ್.ವಿ ದೇಶಪಾಂಡೆ!

177

ಕಾರವಾರ:- ಲೋಕಸಭಾ ಚುನಾವಣೆಗೆ ಕೆಲವು ತಿಂಗಳು ಬಾಕಿ ಇರುವಾಗಲೇ ಕಾಂಗ್ರೆಸ್ ,ಬಿಜೆಪಿ ಪಕ್ಷದಲ್ಲಿ ಲೆಕ್ಕಾಚಾರ ಬಲು ಜೋರಾಗಿದೆ.

ಬಿಜೆಪಿ ವಲಯದಲ್ಲಿ ಲೋಕಸಭಾ ಅಖಾಡಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ ,ಹಾಲಿ ಸಂಸದ ಅನಂತಕುಮಾರ್ ಹೆಗಡೆ ಫೈಪೋಟಿ ಜೋರಾಗಿದೆ. ಈ ಮಧ್ಯೆ ಮಾಜಿ ಶಾಸಕಿ ರೂಪಾಲಿ ನಾಯ್ಕ ಸಹ ಮಹಿಳೆಯರಿಗೆ ಅವಕಾಶ ನೀಡಿದಲ್ಲಿ ತಮಗೂ ನೀಡುವಂತೆ ತಮ್ಮ ಪ್ರಭಾವ ಬೀರುತಿದ್ದಾರೆ.

ಈ ನಡುವೆ ಕಾಂಗ್ರೆಸ್ ಬಿಜೆಪಿ ನಡುವಿನ ಆಂತರಿಕ ಗುದ್ದಾಟವನ್ನು ಬಳಸಿಕೊಳ್ಳುವ ಜೊತೆ ಅಭ್ಯರ್ಥಿಯನ್ನು ಯಾರು ನಿಲ್ಲಿಸಬೇಕು ಎಂಬ ಚರ್ಚೆ ನಡೆಸಿದೆ.
ಈ ಹಿಂದೆ ಕಾಂಗ್ರೆಸ್ ಜೆಡಿಎಸ್ ಅಭ್ಯರ್ಥಿ ಆನಂದ್ ಆಸ್ನೋಟಿಕರ್ ಗೆ ಬೆಂಬಲ ನೀಡಿ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಜೆಡಿಎಸ್ ಗೆ ಬೆಂಬಲ ನೀಡಿದ್ದರೂ
4,79,649 ಮತದ ಅಂತರದಲ್ಲಿ ಬಿಜೆಪಿ ಗೆಲುವು ಕಂಡಿತ್ತು.

2014 ರ ಚುನಾವಣೆಯಲ್ಲಿ ಆರ್.ವಿ ದೇಶಪಾಂಡೆ ತಮ್ಮ ಪುತ್ರ ಪ್ರಶಾಂತ್ ದೇಶಪಾಂಡೆ ರವರನ್ನು ಕಣಕ್ಕಿಳಿಸಿದ್ದರು.
ಈ ಸಂದರ್ಭದಲ್ಲಿ ಬಿಜೆಪಿಯ ಅನಂತಕುಮಾರ ಹೆಗಡೆ 5,46,476 ಮತಗಳು,ಪ್ರಶಾಂತ ಆರ್ ದೇಶಪಾಂಡೆ 4,06,116 ಮತ ಗಳಿಸಿದ್ದು 1,40,360 ಮತದ ಅಂತರದಲ್ಲಿ ಅನಂತಕುಮಾರ್ ಹೆಗಡೆ ಗೆಲುವು ಕಂಡಿದ್ದರು.

ದೊಡ್ಡ ಅಂತರದ ಸೋಲಿನಿಂದ ಆರ್.ವಿ ದೇಶಪಾಂಡೆ ವಿಚಲಿತರಾಗಿದ್ದರು‌. ಮರಳಿ 2019 ರಲ್ಲಿ ಪ್ರಶಾಂತ್ ದೇಶಪಾಂಡೆ ಹೆಸರು ಕೇಳಿಬಂತಾದರೂ ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕಿದರು. ಇದರ ಫಲವಾಗಿ ಕಾಂಗ್ರೆಸ್ ನಲ್ಲಿ ಪ್ರಭಲ ಅಭ್ಯರ್ಥಿ ಕೊರತೆ ಕಾರಣಕ್ಕೆ ಜೆಡಿಎಸ್ ಗೆ ಬೆಂಬಲ ನೀಡುವ ದುಸ್ತಿತಿಗೆ ಬಂದೊದಗಿತು.

ಇದೀಗ 2014 ರ ಲೋಕಸಭಾ ಚುನಾವಣೆಗೆ ಮತ್ತೆ ದೇಶಪಾಂಡೆ ಕುಟುಂಬದತ್ತ ಕಾಂಗ್ರೆಸ್ ಮುಖ ಮಾಡಿದೆ.ಆದ್ರೆ ಪುತ್ರ ಪ್ರಶಾಂತ್ ಲೋಕಸಭೆ ಚುನಾವಣೆಗೆ ಸ್ಪರ್ದಿಸಲು ಆಸಕ್ತಿ ತೋರಿಲ್ಲ,ಇನ್ನು ದೇಶಪಾಂಡೆರವರು ಸಹ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ನಿರಾಸಕ್ಕಿ ಹೊಂದಿದ್ದಾರೆ. ಆದರೂ ಕೇಂದ್ರ ನಾಯಕರು ಇದೀಗ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಆರ್.ವಿ ದೇಶಪಾಂಡೆ ಯನ್ನು ಕಣಕ್ಕಿಳಿಸಲು ಮುಂದಾಗಿದೆ‌.

ಈಕುರಿತು ದೇಶಪಾಂಡೆ ಜೊತೆ ಚರ್ಚೆ ನಡೆದಿದೆ ಎನ್ನಲಾಗಿದೆ. 9 ಬಾರಿ ಶಾಸಕರಾದ ಆರ್.ವಿ ದೇಶಪಾಂಡೆ 25 ವರ್ಷದ ಸುದೀರ್ಗ ಸಚಿವರಾದ ಕೀರ್ತಿ ಅವರಿಗಿದೆ. ಬಿಜೆಪಿ ಗೆ ನಿರ್ಣಾಯಕ ಮತಕ್ಷತ್ರವಾದ ಕಿತ್ತೂರು ,ಖಾನಾಪೂರ ಸಹ ದೇಶಪಾಂಡೆ ಪ್ರಭಾವವಿದೆ‌ . ಇನ್ನು ಜಿಲ್ಲೆಯ ಮಟ್ಟಿಗೆ ಹೇಳುವುದಾದರೇ ಹೆಚ್ಚು ಬಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಇವರು ಕ್ಷೇತ್ರ ಅಭಿವೃದ್ಧಿ ಗೆ ಹೆಚ್ಚು ಕಾಣಿಕೆ ನೀಡಿದ್ದಾರೆ.

ಬಿಜೆಪಿ ವಲಯದಲ್ಲೂ ಸಹ ಉತ್ತಮ ಸಂಬಂಧ ಹೊಂದಿರುವ ಇವರು ಈಗಲೂ ಕ್ಷೇತ್ರದಲ್ಲಿ ಉತ್ತಮ ಹಿಡಿತ ಇಟ್ಟುಕೊಂಡಿದ್ದಾರೆ.
ಬಿಜೆಪಿ ಯಿಂದ ಒಂದೊಮ್ಮೆ ಕಾಗೇರಿ ಗೆ ಟಿಕೆಟ್ ನೀಡಿದಲ್ಲಿ ಅನಂತಕುಮಾರ್ ಬಣ ಕಾಗೇರಿ ಸೋಲಿಸಲು ಪ್ರಯತ್ನಿಸಲಿದೆ.ಅನಂತಕುಮಾರ್ ಹೆಗಡೆಗೆ ಟಿಕೆಟ್ ನೀಡಿದ್ರೆ ಕಾಗೇರಿ ಬಣ ಸೋಲಿಸಲು ಪ್ರಯತ್ನಿಸಲಿದೆ.ಹೀಗಾಗಿ ಕಾಂಗ್ರೆಸ್ ನಿಂದ ಆರ್.ವಿ ದೇಶಪಾಂಡೆ ಗೆ ಟಿಕೆಟ್ ನೀಡಿದರೇ ಎರಡೂ ಬಣದೊಂದಿಗೆ ಉತ್ತಮ ಸಂಪರ್ಕ ಹೊಂದಿದ ಆರ್.ವಿ.ಡಿ ಗೆಲವು ಸುಲಭ ಆಗಲಿದೆ. ಹೀಗಾಗಿ ಹಲವು ಲೆಕ್ಕಾಚಾರದೊಂದಿಗೆ ಆರ್.ವಿ ದೇಶಪಾಂಡೆ ಕಣಕ್ಕಿಳಿಸಲು ಕಾಂಗ್ರೆಸ್ ಸಿದ್ದತೆ ಮಾಡಿಕೊಂಡಿದ್ದು ಬಿಜೆಪಿ ಅಭ್ಯರ್ಥಿ ಘೋಷಣೆ ನಂತರವೇ ತಮ್ಮ ಅಭ್ಯರ್ಥಿಯನ್ನು ಅಧಿಕೃತವಾಗಿ ಘೋಷಣೆ ಮಾಡಲಿದೆ ಎಂದು ಮೂಲಗಳು ಹೇಳುತ್ತಿವೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!