Uttra Kannada news

Uttrakannada-ಫಟಾ ಫಟ್ ಸುದ್ದಿ! ಇಂದು ಏನಾಯ್ತು ವಿವರ ನೋಡಿ.

74

ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಒಂದೇ ಲಿಂಕ್ ನಲ್ಲಿ ನೀವು ಓದಬಹುದಾಗಿದೆ.ಜಿಲ್ಲೆಯಲ್ಲಿ ಜನವರಿ 27 ರಂದು ಎಲ್ಲಿ ಏನಾಗಿತು ವಿವರ ಈ ಕೆಳಗಿನಂತಿದೆ.

ಶಿರಸಿ ತಾಲೂಕಿನ ಓಣಿಕೇರಿ ಗ್ರಾಮದ ಮುದ್ದಿನಪಾಲ್‌ ಅರಣ್ಯ ಪ್ರದೇಶದಲ್ಲಿ ಅಂದರ ಬಾಹರ್ ಆಡುತ್ತಿದ್ದ ವೇಳೆ( Rummy )ಮಾಹಿತಿಪಡೆದ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿ 5 ಜನರನ್ನು ಬಂಧಿಸಿದ ಘಟನೆ ಶನಿವಾರ ನಡೆದಿದೆ.

ಶಿರಸಿ (sirsi)ತಾಲೂಕಿನ ಕಡಬಾಳದ ಅಶೋಕ ಕಲ್ಲಾ ನಾಯ್ಕ, ಗಣೇಶ ನಗರದ ಉದಯ ಸೀತಾರಾಮ ಪಾಲೇಕ‌ರ್, ಹುಲದೇವನಸರದ ಮನೀಂದ್ರ ಶ್ರೀಧರ ನಾಯ್ಕ ಹಾಗೂ ಸೊಂದಾ ಉದಯ ಮಂಜುನಾಥ ನಾಯ್ಕ ಬಂದಿತ ಆರೋಪಿಗಳಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಂಧಿತರಿಂದ 5 ಸಾವಿರ ರೂ. ಗಳನ್ನು. ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ:-wild animal attack:ಕುಮಟಾ ಹೊನ್ನಾವರ ಭಾಗದಲ್ಲಿ ಚಿರತೆ ಕಾಟ :ಹಸು ಬಲಿಪಡೆದ ಚಿರತೆ.

ಹೊನ್ನಾವರ :-ಹಿಂಸಾತ್ಮಕ ರೀತಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 4 ಜಾನುವಾರುಗಳನ್ನು ರಕ್ಷಣೆ ಮಾಡಿ ಮೂವರನ್ನು ವಶಕ್ಕೆ ಪಡೆದ ಘಟನೆ
ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಶನಿವಾರ (ಜಮವರಿ-27) ನಡೆದಿದೆ.
2 ಎತ್ತು, 2 ಹೋರಿ ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಹಾವೇರಿ ಜಿಲ್ಲೆಯ ರೆಹೆಮಾನ್ ರಿತ್ತಿ, ನವೀದ್ ರಿತ್ತಿ, ಯಲ್ಲಪ್ಪ ಎಂಬುವವರನ್ನು ಹೊನ್ನಾವರ ಪೊಲೀಸರು ಬಂಧಿಸಿದ್ದು ಒಟ್ಟು 70 ಸಾವಿರ ಮೌಲ್ಯದ ಜಾನುವಾರುಗಳು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ:-ಅನಂತಕುಮಾರ್ ಹೆಗಡೆ ವಿರುದ್ದ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲು.

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಫೆ.5 ರಿಂದ ಪಾದಯಾತ್ರೆ- ಅನಂತಮೂರ್ತಿ ಹೆಗಡೆ.

ಹಳಿಯಾಳ( Haliyala):- ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬಿಜೆಪಿಯಿಂದ ಕಾಂಗ್ರೆಸ್ಸಿಗೆ ಸೇರ್ಪಡೆಗೊಂಡು, ಇದೀಗ ಕಾಂಗ್ರೆಸ್‌’ನಿಂದ ಮರಳಿ ಬಿಜೆಪಿಗೆ ಸೇರ್ಪಡೆಯಾಗಿರುವುದು ನನಗೆ ಆಶ್ಚರ್ಯ ತಂದಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ
ಅಧ್ಯಕ್ಷ ಆ‌ರ್. ವಿ. ದೇಶಪಾಂಡೆ ಹೇಳಿದರು. ಹಳಿಯಾಳ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಯಾವ ಕಾರಣದಿಂದಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಅವರನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಂಡಿದ್ದೇವೆ ಎಂದರು.

ಕುಮಟಾ : ಜನರ ಜೀವ ಉಳಿಸುವ ದೃಷ್ಟಿಯಿಂದ ಉತ್ತರ ಕನ್ನಡಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಅವಶ್ಯವಿದ್ದು ಅದನ್ನು ನಿರ್ಮಾಣ ಮಾಡಲು ತಕ್ಷಣ ಸರ್ಕಾರ ಹಣ ಮಂಜೂರು ಮಾಡಬೇಕು ಎಂದು ಒತಾಯಿಸಿ ಫೆ. ೫ ರಂದು ಕುಮಟಾದಲ್ಲಿ ಈ ಹಿಂದೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ನಿಗದಿಯಾಗಿದ್ದ ಸ್ಥಳದಲ್ಲಿ ಭೂಮಿ ಪೂಜೆ ನೆರವೇರಿಸಿ, ಪಾದಯಾತ್ರೆ ಪ್ರಾರಂಭಿಸುತ್ತೇವೆ. ಮೂರು ದಿನದಲ್ಲಿ ಭಟ್ಕಳವನ್ನು ತಲುಪಿ, ಮಂಕಾಳ ವೈದ್ಯರಿಗೆ ಮನವಿ ನೀಡಲಿದ್ದೇವೆ ಎಂದು ಹೋರಾಟಗಾರ ಅನಂತಮೂರ್ತಿ ಹೆಗಡೆ ಹೇಳಿದರು. ಅವರು ಕುಮಟಾದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಪಟ್ಟಣದಲ್ಲಿ ಗುರುತಿಸಲಾದ ಸ್ಥಳದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಶೀಘ್ರವಾಗಿ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಕುಮಟಾದಿಂದ ಭಟ್ಕಳದ ವರೆಗೆ ಪಾದಯಾತ್ರೆ ನಡೆಸಿ, ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳ ವೈದ್ಯರವರಿಗೆ ಮನವಿ ನೀಡಲಾಗುವುದು. ಆಸ್ಪತ್ರೆಯ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ ಅವರು, ಕುಮಟಾದಲ್ಲಿ ಈ ಹಿಂದೆಯೇ ಆಸ್ಪತ್ರೆಗೆ ಸ್ಥಳ ನಿಗದಿಯಾಗಿತ್ತು, ಆದರೆ ಯಾಕಿನ್ನೂ ಆಸ್ಪತ್ರೆ ನಿರ್ಮಾಣ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು. ಜನರು ನಿಮಗೇನು ತೊಂದರೆ ಮಾಡಿದ್ದಾರೆ? ನಾವು ಏನು ಶಾಪವನ್ನು ಹೊಂದಿದ್ದೇವೆ? ಯಾಕೆ ಅಸಡ್ಡೆ ಮಾಡುತ್ತಿದ್ದೀರಿ? ಎಂದು ಸರಕಾರವನ್ನು ಕುಟುಕಿದರು.

ಬೇಡದ ಯೋಜನೆಗಳಿಗೆ 100 ಕೋಟಿ 200 ಕೋಟಿಯನ್ನು ಕೊಡುತ್ತಿದ್ದೀರಿ. ಜನರ ಜೀವ ಉಳಿಸುವ ಆಸ್ಪತ್ರೆ ನಿರ್ಮಾಣಕ್ಕೆ 300 ಕೋಟಿ ನೀಡಲು ಸಾಧ್ಯವಿಲ್ಲವೇ? ಎಂದರು.

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಜೊತೆಗೆ, ಮಹಿಳೆಯರಿಗೆ ಉದ್ಯೋಗ ನೀಡುವಂತೆ ಕೈಗಾರಿಕಾ ವಲಯ ಸ್ಥಾಪನೆಗೆ ಸರಕಾರ ಮುಂದಾಗಬೇಕು ಎಂದು ಒತ್ತಾಯಿಸಿದ ಅವರು, ಎಲ್ಲಡಿಯಲ್ಲಿಯೂ ಗಾರ್ಮೆಂಟ್ಸ್ ಫ್ಯಾಕ್ಟರಿಗಳನ್ನು ಸ್ಥಾಪಿಸಬೇಕು. ಸರಕಾರವೇ 15 ರಿಂದ 20 ಎಕರೆಯನ್ನು ಗುರುತಿಸಿ. ಉದ್ದಿಮೆದಾರರಿಗೆ ಅವುಗಳನ್ನು ನೀಡುವುದರ ಮೂಲಕ ಉದ್ಯೋಗ ಸೃಷ್ಟಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಹಿರೇಗುತ್ತಿಯಲ್ಲಿ 1800 ಎಕರೆ ಸರಕಾರದ ವಶದಲ್ಲಿರುವ ಜಾಗ ಇದೆ. ಅದನ್ನು ಏನೂ ಬಳಕೆ ಮಾಡಿಲ್ಲ. ಇಲ್ಲಿಯ ಯುವಕರು ಬೆಂಗಳೂರು ಪುಣೆ ಮುಂಬೈ ಹೀಗೆ ಬೇರೆ ಬೇರೆ ಸ್ಥಳಗಳಿಗೆ ಉದ್ಯೋಗವನ್ನು ಆರಿಸಿ ಹೋಗುತ್ತಿದ್ದಾರೆ. ಅದರ ಬದಲು ಹಿರೇಗುತ್ತಿಯ ಈ ಜಾಗದಲ್ಲಿಯೇ 500 ಎಕರೆಯನ್ನು ಸಾಫ್ಟ್ವೇರ್ ಪಾರ್ಕ್ ಎಂದು ಘೋಷಣೆ ಮಾಡಿ, 300 ಎಕರೆಯನ್ನು ಗಾರ್ಮೆಂಟ್ಸ್ ಹಬ್ಬ್ ಮಾಡಬೇಕು ಎಂದರು.

ಈ ಪಾದಯಾತ್ರೆಯಲ್ಲಿ ಯಾರೆಲ್ಲಾ ಭಾಗವಹಿಸಲಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಪಕ್ಷಾತೀತವಾಗಿ ನಡೆಯುವ ಪಾದಯಾತ್ರೆ ಇದು. ಇದಕ್ಕೆ ಶಿವಾನಂದ ಹೆಗಡೆ ಕಡತೋಕಾ, ಗಜಾನನ ಪೈ, ಸೂರಜ್ ನಾಯ್ಕ ಸೋನಿ, ಆರ್.ಜಿ ನಾಯ್ಕ ಹಾಗೂ ಹಲವು ಪ್ರಮುಖರನ್ನು ಆಹ್ವಾನಿಸಿದ್ದೇನೆ. ಅವರೆಲ್ಲರೂ ಭಾಗವಹಿಸುವ ನಿರೀಕ್ಷೆ ಇದೆ. ಯಾರೂ ಇರದಿದ್ದರೂ ನಾನು ಇರುತ್ತೇನೆ ಎಂದರು.

ಬಿಜೆಪಿ ಮುಖಂಡ ಶಿವಾನಂದ ಹೆಗಡೆ ಕಡತೋಕಾ, ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸಂಸ್ಥಾಪಕ ಉಮೇಶ ಹರಿಕಾಂತ, ಟ್ರಸ್ಟಿ ಸಂತೋಷ ನಾಯ್ಕ, ಸಾಮಾಜಿಕ ಹೋರಾಟಗಾರ ಮಂಜುನಾಥ ಗುನಗಾ ಇದ್ದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!