ಮಾಜಾಳಿ ಎಣ್ಣೆ ಪ್ರಸಂಗ! 80 ಲಕ್ಷ ಸ್ಪಿರೀಟ್ ನಾಲ್ಕು ಕೋಟಿ ಬೆಲೆ ಏನಿದು ಕಥೆ! ಮಾಜಿ ಹಾಲಿಗಳು ಹೇಳೋದೇನು?

242

ಕಾರವಾರ :- 80 ಲಕ್ಷ ಮೌಲ್ಯದ ENA ಸ್ಪಿರೀಟ್ ನನ್ನು ಕಾರವಾರದ ಮಾಜಾಳಿ ತಪಾಸಣ ಕೇಂದ್ರದಲ್ಲಿ ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು ಇಬ್ಬರ ವಿರುದ್ಧ ತನಿಖೆ ಕೈಗೊಂಡಿದ್ದರು. ಮೊದಲನೆಯದಾಗಿ 70 ಲಕ್ಷ ಮೌಲ್ಯದ ದಾಖಲೆಯಲ್ಲಿ ಗೋವಾದ ಗ್ಲೋಬಾಲ್ ಇಂಡಸ್ಟ್ರಿ ಗೆ ಸರಬರಾಜಾಗುವ ಕಾರ್ಖಾನೆ ಬಳಕೆಯ ಮದ್ಯಸಾರ ಎಂದು ನಮೋದಾಗಿ ದಾಖಲೆ ಯನ್ನು ಅಬಕಾರಿ ಅಧಿಕಾರಿಗಳಿಗೆ ತಪಾಸಣೆ ವೇಳೆ ನೀಡಿದ್ದರು. ಈ ವೇಳೆ ಇದನ್ನು ಪರಿಶೀಲಿಸಿದ್ದ ಅಬಕಾರಿ ಅಧಿಕಾರಿಗೆ ಇದು ಮದ್ಯ ತಯಾರಿಕೆಗೆ ಬಳಸುವ ಮದ್ಯಸಾರ ಎಂಬುದು ಅನುಮಾನ ಬಂದಿದೆ. ಹೀಗಾಗಿ ಇದರ ಷಾಂಪಲ್ ನನ್ನು ಲ್ಯಾಬ್ ಗೆ ಕಳುಹಿಸಿದ್ದರು. ಇದಲ್ಲದೇ ಎರಡು ದಿನ ಗೋವಾಕ್ಕೆ ತೆರಳದಂತೆ ತಡೆಯಲಾಗಿತ್ತು.

ಇದನ್ನೂ ಓದಿ:-80 ಲಕ್ಷ ಮೌಲ್ಯದ ಮದ್ಯಸಾರ ವಶ: ಪ್ರಕರಣ ದಾಖಲಿಸದಿದ್ದಕ್ಕೆ ಅಬಕಾರಿ ಅಧಿಕಾರಿಯನ್ನು ತರಾಟೆ ತೆಗೆದುಕೊಂಡ ಸತೀಶ್ ಸೈಲ್! ಅಕ್ಷರದ ಮೇಲೆ ಕ್ಲಿಕ್ ಮಾಡಿ ಓದಿ.

ಇನ್ನು ಈ ಕುರಿತು ಕುದ್ದು ಶಾಸಕ ಸತೀಶ್ ಸೈಲ್ (MLA sathish sail) ಮಾಜಾಳಿ ತಪಾಸಣ ಕೇಂದ್ರಕ್ಕೆ ನಿನ್ನೆ ತೆರಳಿ ಪ್ರಕರಣ ದಾಖಲಿ ಇಲ್ಲವೇ ಅಕ್ರಮವಾಗಿ ಲಾರಿ ಚಾಲಕರನ್ನು ಬಂಧಿಸಿದ್ದು ಅವರನ್ನು ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದರು.
ಇನ್ನು ಅಧಿಕಾರಿಗಳು ಸಹ ಲ್ಯಾಬ್ ವರದಿ ಬರುವ ವರೆಗೆ ಮದ್ಯಸಾರ ತುಂಬಿದ ಟ್ಯಾಂಕರ್ ನನ್ನು ಬಿಡಲು ಆಗುವುದಿಲ್ಲ ಎಂದು ಹೇಳಿದ್ದರು. ಹೀಗಾಗಿ ಶಾಸಕ ಸತೀಶ್ ಸೈಲ್ ಪ್ರಕರಣ ದಾಖಲಿಸುವಂತೆ ಹೇಳಿ ತೆರಳಿದ್ದರು‌ .

ಆದ್ರೆ ಇದೀಗ ಈ ಮದ್ಯಸಾರ ಕಾರ್ಖಾನೆ ಬಳಕೆಗೆ ಬಳಕೆಯಾಗುವ ಮದ್ಯವಲ್ಲ, ಬದಲಾಗಿ ಮದ್ಯ ತ್ಯಯಾರಿಸುವ ಮದ್ಯ ವೆಂದು ಲ್ಯಾಬ್ ವರದಿ ಬಂದಿದೆ. ಇನ್ನು ಬೀದರ್ ನಿಂದ ಕಾರವಾರದ ಮೂಲಕ ಈ ಟ್ಯಾಂಕರ್ ಹೋಗುತಿದ್ದು ,ರಾಮನಗರ ಮೂಲಕ ಹೋಗುವ ಅಥವಾ ಬೆಳಗಾವಿ ಮೂಲಕ ಹೋಗುವ ಅವಕಾಶ ಇದ್ದರೂ ಕಾರವಾರದ ಮಾರ್ಗ ಏಕೆ ಆಯ್ಕೆ ಮಾಡಿಕೊಂಡಿತ್ತು ಎಂಬ ಪ್ರಶ್ನೆ ಎದುರಾಗಿದೆ.
ಇನ್ನು ಈ ಕುರಿತು ಕಾರವಾರದಲ್ಲಿ ಮಾಜಿವಶಾಸಕಿ ರೂಪಾಲಿ ನಾಯ್ಕ (former MLA Rupali naik) ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ವೆಂಕಟೇಶ್ ನಾಯ್ಕ ರವರು ಪತ್ರಿಕಾ ಗೋಷ್ಟಿ ನಡೆಸಿ ಮದ್ಯಸಾರ ಹೊಂದಿದ ಟ್ಯಾಂಕರ್ ನನ್ನು ಬಿಡಿಸಲು ಇಷ್ಟು ಮುತುವರ್ಜಿ ಏಕೆ ಶಾಸಕರಿಗೆ? ಇದರ ಹಿಂದೆ ಶಾಸಕರ ಪಾತ್ರ ಏನು ಎಂದು ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯ್ಕ ರವರು ಮದ್ಯಸಾರದಲ್ಲಿ ಎರಡು ವಿಧಗಳಿವೆ, ಒಂದು ಕಾರ್ಖಾನೆ ಬಳಕೆ ಮತ್ತೊಂದು ಮನುಷ್ಯರು ಕುಡಿಯುವ ಮದ್ಯದ ಬಳಕೆಗೆ ಉಪಯೋಗವಾಗುವ ಮದ್ಯಸಾರ.
ಇದನ್ನು ಕಾರ್ಖಾನೆಗೆ ಬಳಸಲು ಎಂದು ದಾಖಲೆಯಲ್ಲಿ ತೋರಿಸಲಾಗಿದೆ.ಆದ್ರೆ ಲ್ಯಾಬ್ ವರದಿ ಪ್ರಕಾರ ಇದು ಮದ್ಯ ತಯಾರಿಕೆಗೆ ಬಳಸುವ ಮದ್ಯ ಎಂದು ಸಾಬೀತಾಗಿದೆ. ಹೀಗಾಗಿ ಸರ್ಕಾರಕ್ಕೆ ಇದರಿಂದ 18 ಲಕ್ಷ ತೆರಿಗೆ ವಂಚನೆಯಾಗಿದೆ. ಇನ್ನು ಈ ಮದ್ಯಸಾರ ದಿಂದ ನಾಲ್ಕು ಕೋಟಿ ಮೌಲ್ಯದ ಮದ್ಯ ತಯಾರಿಸಬಹುದು ಇದರಿಂದ ಕೋಟ್ಯಾಂತರ ರುಪಾಯಿ ತೆರಿಗೆ ವಂಚಿಸಲಾಗುತ್ತಿದೆ. ಇದಲ್ಲದೇ ಈ ಟ್ಯಾಂಕರ್ ನಂತೆ ಹಲವು ಮದ್ಯಸಾರ ಹೊಂದಿದ ಟ್ಯಾಂಕರ್ ಕಾರವಾರ ಮಾರ್ಗವಾಗಿ ಗೋವಾಕ್ಕೆ ತೆರಳಿದೆ,ಇದರ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಈ ಕುರಿತು ಮಾತನಾಡಿದ ಕಾರವಾರದ ಮಾಜಿ ಶಾಸಕಿ ರೂಪಾಲಿ ನಾಯ್ಕ ಸತೀಶ್ ಸೈಲ್ ಅಧಿಕಾರಿಗಳ ವಿರುದ್ಧ ಗೂಂಡಾಗಿರಿ ಪ್ರದರ್ಶಿಸಿದ್ದಾರೆ,ಅಕ್ರಮವಾಗಿ ಹಿಡಿದ ಲಿಕ್ಕರ್( liquor) ನನ್ನು ಪರಿಶೀಲನೆ ನೆಪದಲ್ಲಿ ಹೋಗಿ ಅಲ್ಲಿ ರಂಪಾಟ ಮಾಡಿದ್ದಾರೆ, ಅಧಿಕಾರಿಗಳಿಗೆ ಒತ್ತಡ ತರುವ ಕೆಲಸ ಮಾಡಿದ್ದಾರೆ, ಸೈಲ್ ಗೆ ಕರ್ನಾಟಕ ಲಿಕ್ಕರ್ ಜೊತೆ ಸಂಬಂಧವೋ ಅಥವಾ ಗೋವಾ(goa) ಲಿಕ್ಕರ್ ಜೊತೆಗೋ ಎಂದು ಪ್ರಶ್ನೆ ಮಾಡಿದ್ದಾರೆ. ಮದ್ಯಸಾರದ ಟ್ಯಾಂಕರ್ ( spirit tanker) ಇದು ಮದ್ಯ ತೆಯಾರಿಕೆಗೆ ಬಳಸುವ ಸ್ಪಿರೀಟ್ ಎಂದು ಗೊತ್ತಾಗಿದೆ. ಈ ಹಗರಣದಲ್ಲಿ ಶಾಸಕ ಸತೀಶ್ ಸೈಲ್ ಶಾಮೀಲಾಗಿದ್ದಾರೆ.ಹೀಗಾಗಿ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಸದ್ಯ ಅಬಕಾರಿ ಅಧಿಕಾರಿಗಳು ನಡೆಸಿದ ತನಿಖೆಯಲ್ಲಿ ಈ ಮದ್ಯ ಮದ್ಯ ತೆಯಾರಿಕೆಗೆ ಬಳಸುವ ಮದ್ಯವೆಂದು ತಿಳಿದುಬಂದಿದೆ.ಇನ್ನು ಈ ಟ್ರಾನ್ಸಪೊರ್ಟ ಮಾಡುತ್ತಿರುವುದು ಮಂಗಳೂರು ಮೂಲದ ವ್ಯಕ್ತಿ ಎಂದುಸಹ ತಿಳಿದುಬಂದಿದ್ದು ಇದರ ಹಿಂದೆ ದೊಡ್ಡ ಅಕ್ರಮದ ಜಾಲವಿದೆ ಎನ್ನುತ್ತದೆ ಅಬಕಾರಿ ಮೂಲಗಳು.
ಸದ್ಯ ಅಬಕಾರಿ ಅಧಿಕಾರಿಗಳ ಉತ್ತಮ ಕಾರ್ಯದಿಂದ ದೊಡ್ಡ ಮೊತ್ತದ ಬ್ರಷ್ಟಾಚಾರ ಹೊರಬಂದಂತಾಗಿದ್ದು
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!