Karwar | ಸಿಎಂ ಕನಸು ಹೊತ್ತು ಡಿಕೆಶಿ ದೇವಾಲಯ ದರ್ಶನ – ಆಂದ್ಲೆ ಜಗದೀಶ್ವರಿ ದೇವಿಗೆ ವಿಶೇಷ ಪೂಜೆ.
Karwar(ಕಾರವಾರ) (18 ಡಿಸೆಂಬರ್ 2025):ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಪೈಪೋಟಿ ತೀವ್ರವಾಗುತ್ತಿರುವ ನಡುವೆಯೇ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಚಲನವಲನಗಳು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿವೆ. ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ದೇವರ ಮೊರೆ ಹೋಗಿರುವ ಡಿಕೆಶಿ, ಉತ್ತರ ಕನ್ನಡ ಜಿಲ್ಲೆಯ ಆಂದ್ಲೆಯಲ್ಲಿರುವ ಶ್ರೀ ಜಗದೀಶ್ವರಿ ದೇವಿ ದೇವಸ್ಥಾನಕ್ಕೆ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಲು ಮುಂದಾಗಿದ್ದಾರೆ.
Gokarna Eden Ember Castle Resort ಪ್ರವಾಸಿಗರಿಗಾಗಿ ಹೊಸ ಆಥಿತ್ಯದ ಮನೆ ಹೇಗಿದೆ ಗೊತ್ತಾ?
ಈ ಹಿಂದೆ ತಮ್ಮ ಸಂಕಷ್ಟದ ಸಮಯದಲ್ಲಿ ಕಾನೂನಿನ ಬಂಧನದಿಂದ ಪಾರಾಗಿ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳಲು ನೆರವಾದ ದೇವಾಲಯವಿದು ಎಂಬ ನಂಬಿಕೆ ಡಿಕೆ ಶಿವಕುಮಾರ್ ಅವರಲ್ಲಿದೆ. ಇದೇ ಹಿನ್ನೆಲೆ ಮುಖ್ಯಮಂತ್ರಿ ಸ್ಥಾನ ಪಡೆಯುವ ಕನಸಿನೊಂದಿಗೆ, ಡಿಕೆಶಿ ಮತ್ತೊಮ್ಮೆ ಶಕ್ತಿ ದೇವಿಯ ಸನ್ನಿಧಿಗೆ ಆಗಮಿಸುತ್ತಿದ್ದಾರೆ.
ಬೆಳಗ್ಗೆ 9 ಗಂಟೆಗೆ ದೇವಾಲಯ ಭೇಟಿ.

ಬೆಳಗಾವಿಯಿಂದ ಬೆಳಗ್ಗೆ ಪ್ರಯಾಣ ಆರಂಭಿಸಿರುವ ಡಿಕೆ ಶಿವಕುಮಾರ್, ಇಂದು ಬೆಳಗ್ಗೆ 9 ಗಂಟೆಗೆ ಆಂದ್ಲೆಯ ಶ್ರೀ ಜಗದೀಶ್ವರಿ ದೇವಾಲಯಕ್ಕೆ ಆಗಮಿಸಲಿದ್ದು, ಸುಮಾರು ಎರಡು ಗಂಟೆಗಳ ಕಾಲ ವಿಶೇಷ ಪೂಜಾ ಕಾರ್ಯಗಳಲ್ಲಿ ಭಾಗವಹಿಸಲಿದ್ದಾರೆ. ದೇವಾಲಯದ ಮುಖ್ಯ ಅರ್ಚಕ ಗಣೇಶ್ ನಾಯ್ಕ ಅವರ ನೇತೃತ್ವದಲ್ಲಿ ಏಕಾಂತ ಪೂಜೆ ನಡೆಯಲಿದೆ.
Karwar |ಜೈಲಿನ ಮೇಲೆ ಪೊಲೀಸರ ದಾಳಿ | ಮೊಬೈಲ್ ಸೇರಿದಂತೆ ಹಲವು ವಸ್ತುಗಳು ವಶಕ್ಕೆ
ಪೂಜಾ ಸಂದರ್ಭದಲ್ಲಿ ದೇವಿಗೆ ವಿಶೇಷ ಹೂವಿನ ಅಲಂಕಾರ, ಹಿಂಗಾರ ಸಮರ್ಪಣೆ ಹಾಗೂ ಮಂಗಳಾರತಿ ನೆರವೇರಲಿದ್ದು, ನಂತರ ಫಲಸಿದ್ಧಿ ಪ್ರಶ್ನೆ ಕೇಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಕ್ಕಾಗಿ ದೇವಾಲಯದಲ್ಲಿ ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಬೆಂಬಲಿಗರಿಗೆ “ಸುಗಂಧರಾಜ” ಹಾರ ತರಲು ನಿರ್ಬಂಧ !
ಇನ್ನು ಡಿಕೆ ಬರುತ್ತಿರುವ ಹಿನ್ನಲೆಯಲ್ಲಿ ಬೆಂಬಲಿಗರಿಗೆ ಹಾಗೂ ಮುಖಂಡರಿಗೆ ಸುಂಧರಾಜ ಹಾರವನ್ನು ತರದಂತೆ ಸೂಚಿಸಲಾಗಿದೆ.
ಈ ಹಾರದ ಪರಿಮಳ ಅವರಿಗೆ ಅಲರ್ಜಿ ಇದ್ದು ಈ ಹಿನ್ನಲೆಯಲ್ಲಿ ಈ ಬಗ್ಗೆ ಸೂಚನೆ ನೀಡಲಾಗಿದೆ.
2019ರ ಸಂಕಷ್ಟ ಮತ್ತು ದೇವಾಲಯದ ನಂಬಿಕೆ

2019ರಲ್ಲಿ ಡಿಕೆ ಶಿವಕುಮಾರ್ ಗಂಭೀರ ರಾಜಕೀಯ ಹಾಗೂ ಕಾನೂನು ಸಂಕಷ್ಟಕ್ಕೆ ಒಳಗಾಗಿದ್ದು, ಜೈಲು ವಾಸವನ್ನೂ ಅನುಭವಿಸಿದ್ದರು. ಆ ಸಂದರ್ಭದಲ್ಲಿ ಇದೇ ದೇವಾಲಯಕ್ಕೆ ಆಗಮಿಸಿ ಮೂರು ಗಂಟೆಗಳ ಕಾಲ ಪೂಜೆ ಸಲ್ಲಿಸಿದ್ದರು. ಆಗ ದೇವಿಯ ಪ್ರಸಾದ ಹಾಗೂ ಇಷ್ಟಾರ್ಥ ಪೂರೈಕೆಯ ಸಂಕೇತ ನೀಡಿತ್ತು ಎನ್ನಲಾಗಿದ್ದು, ನಂತರ ಡಿಕೆಶಿ ಪ್ರಭಾವಿ ಸ್ಥಾನಕ್ಕೆ ಏರಿದ್ದರು. ಈ ಹಿನ್ನೆಲೆ ಜಗದೀಶ್ವರಿ ದೇವಿಯ ಮೇಲೆ ಅವರಿಗೆ ಅಪಾರ ನಂಬಿಕೆ ಬೆಳಸಿಕೊಂಡಿದ್ದಾರೆ.
ಗೋಕರ್ಣದ ಮಹಾಬಲೇಶ್ವರ, ಮಹಾಗಣಪತಿ ದರ್ಶನ
ಆಂದ್ಲೆಯ ಪೂಜೆ ಜೊತೆಗೆ ಡಿಕೆ ಶಿವಕುಮಾರ್ ಗೋಕರ್ಣಕ್ಕೆ ತೆರಳಿ ಮಹಾಬಲೇಶ್ವರ ದೇವಸ್ಥಾನ ಹಾಗೂ ಮಹಾಗಣಪತಿ ದೇವಾಲಯಗಳಲ್ಲಿ ವಿಶೇಷ ಶುಕ್ರವಾರದ ಪೂಜೆ ಸಲ್ಲಿಸಲಿದ್ದಾರೆ. ನಂತರ ಅವರು ಹೆಲಿಕಾಪ್ಟರ್ ಮೂಲಕ ಬೆಳಗಾವಿಗೆ ಮರಳಲಿದ್ದಾರೆ ಎಂದು ತಿಳಿದುಬಂದಿದೆ.
ರಾಜಕೀಯವಾಗಿ ಮಹತ್ವದ ಭೇಟಿ.
ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಆಡಳಿತ ಪಕ್ಷದೊಳಗೆ ಅಂತರಂಗದ ಪೈಪೋಟಿ ಮುಂದುವರಿದಿರುವ ನಡುವೆ, ಡಿಕೆಶಿಯ ಈ ಧಾರ್ಮಿಕ ಕ್ಷೇತ್ರದ ಭೇಟಿ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ. ಪಕ್ಷದ ಒಳಗಿನ ಸಮೀಕರಣಗಳು, ಹೈಕಮಾಂಡ್ ನಿರ್ಧಾರ ಹಾಗೂ ಮುಂದಿನ ಚುನಾವಣೆಗಳ ಲೆಕ್ಕಾಚಾರಗಳ ಮಧ್ಯೆ, ಡಿಕೆಶಿಯ ದೇವಾಲಯ ಭೇಟಿ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗಳಿಗೆ ವೇದಿಕೆ ಸೃಷ್ಟಿಸಿದೆ.
Ankola| ಪುರಸಭೆಯಲ್ಲಿ ಕರ್ತವ್ಯ ಲೋಪ ಅಧಿಕಾರ ದುರುಪಯೋಗ ಲೋಕಾಯುಕ್ತರಲ್ಲಿ ದೂರು: ಮಂಜುನಾಥ ನಾಯ್ಕ
ಒಟ್ಟಿನಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ರಾಜಕೀಯ ಹಾಗೂ ಧಾರ್ಮಿಕ ಎರಡೂ ಮಾರ್ಗಗಳಲ್ಲಿ ಪ್ರಯತ್ನ ಮುಂದುವರಿಸಿರುವ ಡಿ.ಕೆ.ಶಿವಕುಮಾರ್ ಅವರ ನಡೆ, ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.







