ಆಹಾರದ ಗುಣಮಟ್ಟದ ಬಗ್ಗೆ ದೂರು ಕೊಡಲು ಆನ್ ಲೈನ್ ನಲ್ಲಿ ಜಾತಿ ನಮೋದು ಕಡ್ಡಾಯ ! ಸರ್ಕಾರದ ನಡೆಗೆ ಹೊತ್ತಿದ ಕಿಡಿ.
ಬೆಂಗಳೂರು :- ಆಹಾರ, ಔಷಧ ಗುಣಮಟ್ಟದ ಲೋಪಕ್ಕೆ ಇನ್ಮುಂದೆ ‘ಕ್ಯೂಆರ್ ಕೋಡ್’ ಮೂಲಕ ಸುಲಭ ದೂರು ದಾಖಲು ಮಾಡಬಹುದು. ಇ-ಆಡಳಿತ ಕೇಂದ್ರದ ಸಹಯೋಗದಲ್ಲಿ ರಾಜ್ಯ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯಿಂದ ವಿನೂತನ ಡಿಜಿಟಲ್ ಹೆಜ್ಜೆ ಇರಿಸಲಾಗಿದೆ.
ಈ ಮೂಲಕ ಡಿಜಿಟಲ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ನೇರ ಆನ್ ಲೈನ್ ನಲ್ಲಿ ದೂರು ದಾಖಲಿಸಬಹುದು. ಆದರೇ ಕ್ಯೂಆರ್ ಕೋಡ್ ನನ್ನು ಸ್ಕಾನ್ ಮಾಡಿದಕೂಡಲೇ ಮೊದಲು ನಿಮ್ಮ ನಂಬರ್ ಅನ್ನು ಕೇಳುತ್ತದೆ. ನಂತರ ಓಟಿಪಿ ಹಾಕಿ ಗೆ ಹೋದರೆ ,ನಿಮ್ಮ ಹೆಸರು,ಆಧಾರ್ ಸಂಖ್ಯೆ, ಜೊತೆ ನಿಮ್ಮ ಜಾತಿಯನ್ನೂ ನಮೋದು ಮಾಡಬೇಕು.
ಇದನ್ನೂ ಓದಿ:-Karnataka|ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ನಿಧನ
ಈ ಬಗ್ಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ದೂರು ಕೊಡಲು ಜಾತಿಯನ್ನ ನೋಡುತ್ತದೆ ಎಂದರೇ ಇಂದಿನ ಸರ್ಕಾರ ಇನ್ಯಾವ ರೀತಿಯ ಕೆಳಮಟ್ಟಕ್ಕೆ ಬಂದಿದೆ ಎಂಬುದಕ್ಕೆ ಈ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಈ ಎಡವಟ್ಟೇ ಸಾಕ್ಷಿ.

ಜಾತಿ ಆಧಾರದಲ್ಲಿ ಹುದ್ದೆ, ಜಾತಿ ಆಧಾರದಲ್ಲಿ ಕೆಲಸ ಇದೀಗ ಜಾತಿ ಆಧಾರದಲ್ಲಿ ದೂರು ಕೊಡುವುದನ್ನ ನಿಗದಿಮಾಡಿರುವುದು ರಾಜ್ಯ ಸರ್ಕಾರ ಯಾವ ಮಟ್ಟಕ್ಕೆ ಇಳಿದಿದೆ ಎಂಬುದಕ್ಕೆ ಈ ನಡೆ ಸಾಕ್ಷಿಯಾಗಿದೆ.
ಜ್ಯಾತ್ಯಾತೀತ ರಾಷ್ಟ್ರ ಎನ್ನುವ ನಾವುಗಳು ಹೀಗೆ ಎಲ್ಲಾ ವಿಷಯದಲ್ಲಿ ಜಾತಿ ತಂದರೆ ಮುಂದೊಂದು ದಿನ ಈ ಜಾತಿ ವ್ಯವಸ್ತೆ ಏನೆಲ್ಲಾ ಅನಾಹುತ ತಂದೊಡ್ಡುವುದು ಎಂಬ ಅರಿವನ್ನೇ ಸರ್ಕಾರ ಮರೆತಂತೆ ಕಾಣುತ್ತದೆ.

ಪಕ್ಷ,ಸಚಿವ ಸ್ಥಾನಮಾನ ನೀಡುವುದರಲ್ಲಿ ಜಾತಿ ಆಧಾರದಲ್ಲಿ ಕಾಂಗ್ರೆಸ್ ಪಕ್ಷ ನೀಡುತ್ತಿದೆ. ಆದರೇ ದೂರು ಕೊಡುವುದಕ್ಕೂ ಜಾತಿಗು ಏನು ಸಂಬಂಧ ಎಂಬುದನ್ನ ಮತಿಗೆಟ್ಟ ಸರ್ಕಾರವೇ ಹೇಳಿಬೇಕಿದೆ.


