ನಿಮ್ಮ ಆರೋಗ್ಯಕ್ಕೆ ಮನೆಮದ್ದು! ಗ್ಯಾಸ್ ಸಮಸ್ಯೆಗೆ ಇಲ್ಲಿದೆ ಪರಿಹಾರ.

TextMaster 02 23 09.51.38 TextMaster 02 23 09.51.38
IMG 20210221 WA0009

ಪ್ರತಿ ದಿನದ ನಮ್ಮ ಆಹಾರದ ಕ್ರಮ ಬದಲಾವಣೆಯಿಂದ ಬಹುತೇಕ ಜನರು ಗ್ಯಾಸ ನಿಂದ ಸಮಸ್ಯೆ ಅನುಭವಿಸುತ್ತಾರೆ. ಬಹುತೇಕರು ಮಾತ್ರೆ ತೆಗೆದುಕೊಳ್ಳುತ್ತಾರೆ‌. ಇದರಿಂದ ನಿಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿ ಕಿಡ್ನಿ ವೈಪಲ್ಯ ಆಗುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಮಬೆಯಲ್ಲೇ ಸಿಗುವ ದುಬಾರಿಯಲ್ಲದ ದೇಹಕ್ಕೆ ಹಿತವಾದ ಆಯುರ್ವೇದ ಗುಣ ಹೊಂದಿದ ಔಷಧೀಯ ಗುಣವಿರುವ ಮನೆಮದ್ದು ನಿಮಗಾಗಿ. ಉಪಯೋಗಿಸಿ ಮಾಹಿತಿಯನ್ನು ಶೇರ್ ಮಾಡಿ.

TextMaster 02 23 09.45.30

ನಿಮಗೆ ಗ್ಯಾಸ ಸಮಸ್ಯೆ ಇದ್ದರೆ,ಪ್ರತಿ ದಿನ ಬೆಚ್ಚಗಿನ ನೀರು ಕುಡಿಯಿರಿ.ನಾಲ್ಕೈದು ತುಳಿಸಿ ಎಲೆ ನೀರಿನಲ್ಲಿ ಕುದಿಸಿ,ಅದಕ್ಕೆ ಜೇನುತುಪ್ಪ ಬೆರೆಸಿ ಕುಡಿಯಿರಿ.ಹಾಲಿಗೆ ಸ್ವಲ್ಪ ಕಾಳುಮೆಣಸು ಬೆರೆಸಿ ಸೇವಿಸಿ.ಮುಂಜಾನೆ ಕಾಲಿ ಹೊಟ್ಟೆಗೆ ಸ್ವಲ್ಪ ಲಿಂಬುರಸ ಹಾಗೂ ಚಿಟಕಿ ಅಡುಗೆ ಸೋಡ ಸೇರಿಸಿ ಕುಡಿಯಿರಿ.ಬೆಳ್ಳುಳ್ಳಿ,ಜೀರಿಗೆ,ಹಾಗೂ ಕೊತ್ತುಂಬರಿ ಬೀಜ ನೀರಿಗೆ ಹಾಕಿ ಕುದಿಸಿ ಕಷಾಯದ ರೀತಿ ನೀರು ಕುಡಿದರೆ ಗ್ಯಾಸ್ ಸಮಸ್ಯೆ ದೂರವಾಗುತ್ತದೆ.

ಎದೆ ಉರಿ ,ಗ್ಯಾಸ ನಿಂದ ಎದೆ ನೋವು ,ಉಬ್ಬರ ಕ್ಕೆ ಓಮಿನಕಾಳನ್ನು ತೆಗೆದುಕೊಂಡು ಬಾಯಿಯಲ್ಲಿ ಅರೆದು ಹೂ ಬಿಸಿ ನೀರು ಅದರೊಂದಿಗೆ ಕುಡಿಯುವುದರಿಂದ ಗ್ಯಾಸ್ ಸಮಸ್ಯೆ ಶೀಘ್ರ ನಿವಾರಣೆಯಾಗುತ್ತದೆ.

Advertisement

ಪ್ರತಿ ದಿನ ಊಟವಾದ ನಂತರ (ಹತ್ತು ನಿಮಿಷ ಬಿಟ್ಟು) ಅರ್ಥ ಲೋಟ ಎಳನೀರು ಸೇವಿಸುವುದರಿಂದ ಗ್ಯಾಸ್ ನಿಂದ ಉಂಟಾಗುವ ಎದೆ ಉರಿಯನ್ನು ಸಂಪೂರ್ಣ ಹೋಗಲಾಡಿಸಬಹುದು.ಈ ರೀತಿ ಒಂದು ತಿಂಗಳು ಮಾಡಿದಲ್ಲಿ ಇದರ ಫಲ ತಿಳಿಯಬಹುದು.

ಎದೆ ಉರಿ,ಹುಳಿ ತೆಗು ಬಂದಲ್ಲಿ ಒಂದು ಲೋಟ ಕಬ್ಬಿನಹಾಲು ಸೇವಿಸುವುದರಿಂದ ತಕ್ಷಣದಲ್ಲಿ ಎದೆ ಉರಿ ಹಾಗೂ ಹುಳಿ ತೇಗು ನಿವಾರಣೆಯಾಗುತ್ತದೆ.

ಲೇಕನ:- ಶುಭಶ್ರೀ ಕೆರೆಕೈ.

TextMaster 02 23 10.04.36

ಇಂದಿನ ದಿನ ಭವಿಷ್ಯ:-

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement