Gokarna |ಗೋಕರ್ಣ-ತದಡಿ ರಸ್ತೆ ಮಾರ್ಗದಲ್ಲಿ ಭೂಕುಸಿತ-ಸಂಚಾರ ಬಂದ್

Gokarna:-ಗೋಕರ್ಣ-ತದಡಿ ರಸ್ತೆ ಮಾರ್ಗದಲ್ಲಿ ಭಾರೀ ಮಳೆಯಿಂದ ಸಂಭವಿಸಿದ ಭೂಕುಸಿತದಿಂದ ರಸ್ತೆ ಮೇಲೆ ಮಣ್ಣು ಕುಸಿದು ಸಂಚಾರ ಸ್ಥಗಿತಗೊಂಡಿದೆ.
file 00000000c17072078e1b0b8b07106841 file 00000000c17072078e1b0b8b07106841

Gokarna |ಗೋಕರ್ಣ-ತದಡಿ ರಸ್ತೆ ಮಾರ್ಗದಲ್ಲಿ ಭೂಕುಸಿತ-ಸಂಚಾರ ಬಂದ್

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರಕ್ಕೆ ಕುಮಟಾ ತಾಲೂಕಿನ ಗೋಕರ್ಣದಲ್ಲಿ (gokarna)ಗುಡ್ಡ ಕುಸಿತವಾಗಿ ರಸ್ತೆ ಸಂಚಾರ ಬಂದ್ ಆಗಿದೆ.

ಸಾಣೆಕಟ್ಟ  ತದಡಿ ಸಾಗುವ ಮಾರ್ಗದಲ್ಲಿ ರಸ್ತೆ ಮೇಲೆ  ಧರೆಕುಸಿತವಾಗಿದ್ದು, ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆಗಳಾಗಿಲ್ಲ.ಇನ್ನು ಧರೆ ಕುಸಿದು ದೊಡ್ಡ ಮಟ್ಟದ ಮಣ್ಣು ರಸ್ತೆಮೇಲೆ ಕುಸಿತವಾಗಿದ್ದು ಇದರಿಂದ ಈ ಭಾಗದ ಸಂಚಾರವೇ ಸಂಪೂರ್ಣ ಬಂದ್ ಆಗಿದೆ.

Advertisement

Gokarna landslide
ಗೋಕರ್ಣ ಭೂಕುಸಿತ

ಸ್ಥಳಕ್ಕೆ ಗೋಕರ್ಣ ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸುಗಮ ಸಂಚಾರಕ್ಕೆ ವೆವಸ್ತೆಯನ್ನು ಮಾಡಲಾಗುತ್ತಿದೆ.

ನಿನ್ನೆಯಿಂದ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಗಾಳಿ ಜೊತೆ ಅಬ್ಬರದ ಮಳೆ ಸುರಿಯುತ್ತಿದೆ. ಹೀಗಾಗಿ ಈ ಅವಘಡ ಸಂಭವಿಸಿದೆ.

ಇದನ್ನೂ ಓದಿ:-Gokarna|ಮಹಾಬಲೇಶ್ವರನಿಗೆ  ಕೊಳಚೆ ನೀರು- ಸಿ.ಎ ಡಿಕೆ ಶಿವಕುಮಾರ್ ಆದೇಶವೇನು ಗೊತ್ತಾ!

ಇನ್ನು ಇದೇ ಭಾಗದಲ್ಲಿ ಗದ್ದೆಯ ನೀರು ಹಾಗೂ ರಸ್ತೆಯ ನೀರು ಸೇರಿ ಚಿನ್ನದ ಕೇರಿ ಹಿಂಭಾಗದ ವಸತಿ ಪ್ರದೇಶಕ್ಕೆ ನುಗ್ಗಿ ಅವಾಂತರ ಸೃಷ್ಟಿಮಾಡಿದ್ದು ಗೋಕರ್ಣದಲ್ಲಿ ಜನಜೀವನ ಅಸ್ತವೆಸ್ತವಾಗಿದೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement