Honnavar |ಅಂಕೋಲ ಮೂಲದ ಬೋಟ್ ಮುಳುಗಡೆ-ಏಳು ಜನರ ರಕ್ಷಣೆ-video ನೋಡಿ

ಹೊನ್ನಾವರ ತಾರೇಬಾಗಿಲು ಸಮುದ್ರದಲ್ಲಿ ಅಂಕೋಲ ಮೂಲದ ‘ಶ್ರೀ ನವರತ್ನ’ ಮೀನುಗಾರಿಕಾ ಬೋಟ್ ಮುಳುಗಡೆಯಾಗಿದ್ದು, ಏಳು ಮೀನುಗಾರರನ್ನು ಸ್ಥಳೀಯ ಬೋಟ್ ಮೂಲಕ ರಕ್ಷಿಸಲಾಗಿದೆ. ಘಟನೆಯಲ್ಲಿ ₹50 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ.
ಹೊನ್ನಾವರ ತಾರೇಬಾಗಿಲು ಸಮುದ್ರದಲ್ಲಿ ಭಾಗಶಃ ಮುಳುಗಿರುವ ‘ಶ್ರೀ ನವರತ್ನ’ ಮೀನುಗಾರಿಕಾ ಬೋಟ್ ಹಾಗೂ ರಕ್ಷಣಾ ಕಾರ್ಯದ ದೃಶ್ಯ. ಹೊನ್ನಾವರ ತಾರೇಬಾಗಿಲು ಸಮುದ್ರದಲ್ಲಿ ಭಾಗಶಃ ಮುಳುಗಿರುವ ‘ಶ್ರೀ ನವರತ್ನ’ ಮೀನುಗಾರಿಕಾ ಬೋಟ್ ಹಾಗೂ ರಕ್ಷಣಾ ಕಾರ್ಯದ ದೃಶ್ಯ.
ಹೊನ್ನಾವರ ದಲ್ಲಿ ಬೋಟ್ ಮುಳುಗಡೆ ಏಳು ಜನರ ರಕ್ಷಣೆ -ವಿಡಿಯೋ ಇಲ್ಲಿದೆ.

Honnavar |ಅಂಕೋಲ ಮೂಲದ ಬೋಟ್ ಮುಳುಗಡೆ-ಏಳು ಜನರ ರಕ್ಷಣೆ-video ನೋಡಿ

ವಿಡಿಯೋ ನೋಡಿ:-

Honnavar/ಕಾರವಾರ :- ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆಯಾಗಿ  ಏಳು ಜನ ಮೀನುಗಾರರನ್ನ ರಕ್ಷಣೆ ಮಾಡಿದ ಘಟನೆ

Advertisement

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ (honnavar) ತಾಲೂಕಿನ ತಾರೇಬಾಗಿಲು ಸಮೀಪದ ಸಮುದ್ರದಲ್ಲಿ ನಡೆದಿದೆ. ಅಂಕೋಲದ ಬೆಳಂಬಾರ ಕಡಲತೀರದಿಂದ ಮೀನುಗಾರಿಕೆಗೆ ಹೊರಟಿದ್ದ ಮಂಜುನಾಥ್ ಕಾರ್ವಿ ಎಂಬುವವರ ಮಾಲಿಕತ್ವದ   ಶ್ರೀ ನವರತ್ನ ಹೆಸರಿನ ಬೋಟ್ ಹೊನ್ನಾವರದ ತಾರೇಬಾಗಿಲು ಸಮೀಪ ಮೀನುಗಾರಿಕೆ ನಡೆಸುವಾಗ ಬೋಟಿನ ಹೊರಭಾಗಕ್ಕೆ ಹಾನಿಯಾದ್ದರಿಂದ ಬೋಟ್ ಒಳಗೆ ನೀರು ತುಂಬಿ ಮುಳುಗಡೆಯಾಗಿದೆ.ತಕ್ಷಣ ಸ್ಥಳೀಯ ಮೀನುಗಾರಿಕಾ ಬೋಟ್ ನ ಇಕ್ಬಾಲ್ ಅಬ್ದುಲ್ ಗಫೂರ್ ಎಂಬುವವರು ತಮ್ಮ ಬೋಟ್ ನಿಂದ ಏಳುಜನ ಮೀನುಗಾರರ ರಕ್ಷಣೆ ಮಾಡಿದ್ದಾರೆ.

Honnavar |ಸಿಡಿಲು ಬಡಿದು ಮೀನುಗಾರ ಸಾವು,ಪ್ರವಾಸಿಗ ಗಂಭೀರ.

ವೆಂಕಟೇಶ್ ಖಾರ್ವಿ,ನಾಗಪ್ಪ ಖಾರ್ವಿ,ಸಂದೀಪ್ ಖಾರ್ವಿ,ವಿಕಾಸ್ ಖಾರ್ವಿ,ವಿಘ್ನೇಶ್ ಖಾರ್ವಿ,ರಜತ್ ಬಾಣಾವಳಿಕರ್, ಹಾಗೂ ಲತೇಶ್ ಖಾರ್ವಿ ರಕ್ಷಣೆಗೊಳಗಾದ ಮೀನುಗಾರರಾಗಿದ್ದು ಸುರಕ್ಷಿತವಾಗಿ ದಡ ಸೇರಿದ್ದಾರೆ. ಬೋಟ್ ಮುಳುಗಡೆಯಿಂದ ಅಂದಾಜು 50 ಲಕ್ಷಕ್ಕೂ ಹೆಚ್ಚು ನಷ್ಟವಾಗಿದ್ದು ,ಘಟನೆ ಸಂಬಂಧ ಹೊನ್ನಾವರ ಸಿ.ಎಸ್.ಪಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement