ಕಾರವಾರ :- ಕುಡಿದ ಮತ್ತಿನಲ್ಲಿ ಪತ್ನಿಯನ್ನ ಕತ್ತು ಹಿಸುಕಿ ಸಾಯಿಸಿ ಹೃದಯಾಘಾತ ಎಂದು ನಂಬಿಸಿದ್ದ ಗಂಡನನ್ನ ಹೊನ್ನಾವರ (honnavar) ಪೊಲೀಸರು ಬಂಧಿಸಿದ್ದಾರೆ.
ಮಂಗಳ(27) ಗಂಡನಿಂದಲೇ ಹತ್ಯೆಯಾದ ಮಹಿಳೆಯಾಗಿದ್ದು ,ಆಗಸ್ಟ್ 25 ರಂದು ಪತ್ನಿಗೆ ಹೃದಯಾಘಾತವಾಗಿದೆ,ರಕ್ತ ಕಾರಿ ಸತ್ತುಹೋಗಿದ್ದಾಳೆ ಎಂದು ಮೃತಳ ಕುಟುಂಬಕ್ಕೆ ತಿಳಿಸಿದ್ದಾನೆ . ತಕ್ಷಣ ಮೃತಮಹಿಳೆಯನ್ನ ಮೊದಲು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿತ್ತು.
ಮಂಗಳ ಸಾವಿನ ಬಗ್ಗೆ ಸಹೋದರಿ ಹಾಗೂ ಕುಟುಂಬಕ್ಕೆ ಅನುಮಾನ ಬಂದಿದ್ದು ತಕ್ಷಣ ಹೊನ್ನಾವರ ತಾಲೂಕಿನ ಮಂಕಿಯ ಪೊಲೀಸರಿಗೆ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ದೂರು ನೀಡಲಾಗಿತ್ತು. ಮೇಲ್ನೋಟಕ್ಕೆ ಹೃದಯಾಘಾತ ಎಂದು ಅನಿಸುವಂತೆಯೇ ಇತ್ತು. ಇನ್ನು ಶವವನ್ನು ಕಾರವಾರದ ಕ್ರಿಮ್ಸ್ ಗೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಇದನ್ನೂ ಓದಿ:-Honnavar|ವೃದ್ದರೇ ಈತನಿಗೆ ಟಾರ್ಗೆಟ್ – ಡ್ರಾಪ್ ಕೊಡೋ ನೆಪದಲ್ಲಿ ಹಣ ಸುಲಿಗೆ ಮಾಡುತಿದ್ದ ಯುವಕನ ಬಂಧನ
ನಂತರ ಆಕೆ ಉಸಿರುಗಟ್ಟಿ ಸತ್ತಿರುವ ಬಗ್ಗೆ ತಿಳಿದಿದ್ದು ,ದೇಹದ ಕೆಲವು ಭಾಗದಲ್ಲಿನ ಸಂಶಯಾಸ್ಪದ ಗುರುತುಗಳು ಆಕೆಯ ಹತ್ಯೆಯ ಸತ್ಯ ಹೊರಬಂದಿದೆ.
ಇದನ್ನೂ ಓದಿ:-Honnavar| ಶರಾವತಿ ಕಣಿವೆಯಲ್ಲಿ ತುಂಡಾಗಿ ಬಿದ್ದ ವಿದ್ಯುತ್ ವಾಹಕ-1200 ಅಡಿ ಆಳಕ್ಕೆ ಇಳಿದು ವಾಹಕ ಮೇಲೆತ್ತಿದ ಸಿಬ್ಬಂದಿ.
ತಕ್ಷಣ ಮಂಕಿ ಪೊಲೀಸರು ಮೃತ ಮಂಗಳ ಗಂಡ ಗಣಪತಿ ಮಂಜುನಾಥ ನಾಯ್ಕನನ್ನು ವಶಕ್ಕೆ ಪಡೆದಾಗ ತಾನೂ ಕುಡಿದ ಮತ್ತಿನಲ್ಲಿ ಮಲಗಿದ್ದ ಪತ್ನಿಯನ್ನು ಕುತ್ತಿಗೆ ಹಿಡಿದು ಹಿಸುಕಿ ಹತ್ಯೆ ಮಾಡಿರುವ ಬಗ್ಗೆ ಬಾಯಿ ಬಿಟ್ಟಿದ್ದು ಇದೀಗ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

