Honnavar|ವೃದ್ದರೇ ಈತನಿಗೆ ಟಾರ್ಗೆಟ್ – ಡ್ರಾಪ್ ಕೊಡೋ ನೆಪದಲ್ಲಿ ಹಣ ಸುಲಿಗೆ ಮಾಡುತಿದ್ದ ಯುವಕನ ಬಂಧನ

ಹೊನ್ನಾವರದಲ್ಲಿ ವೃದ್ಧರಿಗೆ ಡ್ರಾಪ್ ನೀಡುವ ನೆಪದಲ್ಲಿ ಜೀವ ಬೆದರಿಕೆ ಹಾಕಿ ಹಣ ಸುಲಿಗೆ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಬೈಕ್ ಹಾಗೂ ಕಸಿದುಕೊಂಡ ಹಣ ವಶಕ್ಕೆ.
ಹೊನ್ನಾವರದಲ್ಲಿ ವೃದ್ಧರಿಗೆ ಡ್ರಾಪ್ ನೀಡುವ ನೆಪದಲ್ಲಿ ಜೀವ ಬೆದರಿಕೆ ಹಾಕಿ ಹಣ ಸುಲಿಗೆ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ ಪ್ರಕರಣ ಹೊನ್ನಾವರದಲ್ಲಿ ವೃದ್ಧರಿಗೆ ಡ್ರಾಪ್ ನೀಡುವ ನೆಪದಲ್ಲಿ ಜೀವ ಬೆದರಿಕೆ ಹಾಕಿ ಹಣ ಸುಲಿಗೆ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ ಪ್ರಕರಣ
ಬಂಧಿತ ಆರೋಪಿ

ವೃದ್ದರೇ ಈತನಿಗೆ ಟಾರ್ಗೆಟ್ – ಡ್ರಾಪ್ ಕೊಡೋ ನೆಪದಲ್ಲಿ ಹಣ ಸುಲಿಗೆ ಮಾಡುತಿದ್ದ ಯುವಕನ ಬಂಧನ.

ಕಾರವಾರ: ಆತನಿಗೆ ವಯಸ್ಸಾದ ವೃದ್ಧರೇ ಟಾರ್ಗೆಟ್ .ಬ್ಯಾಕ್ ,ಬಸ್ ನಿಲ್ದಾಣದ ಮುಂದೆ ಬೈಕ್ ಹಿಡಿದು ನಿಲ್ಲುವ ಆ ಯುವಕ ವಯಸ್ಸಾದವರು ಕಂಡಾಗ ಡ್ರಾಪ್ ಕೊಡುವ ನೆಪದಲ್ಲಿ ಜೀವ ಬೆದರಿಕೆ ಹಾಕಿ ಹಣ ಕಿತ್ತುಕೊಳ್ಳುತಿದ್ದ ಕಳ್ಳನನ್ನ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ (honnavar)ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಇದನ್ನೂ ಓದಿ:-Honnavar| ಶರಾವತಿ ಕಣಿವೆಯಲ್ಲಿ ತುಂಡಾಗಿ ಬಿದ್ದ ವಿದ್ಯುತ್ ವಾಹಕ-1200 ಅಡಿ ಆಳಕ್ಕೆ ಇಳಿದು ವಾಹಕ ಮೇಲೆತ್ತಿದ ಸಿಬ್ಬಂದಿ.

Advertisement

ಮಂಕಿ ನಿವಾಸಿ ನಾಗರಾಜ್ ಶಂಕರ್ ನಾಯಕ್ ಬಂಧಿತ ಆರೋಪಿಯಾಗಿದ್ದು ಈತ ವಂದೂರು ಗ್ರಾಮದ ದುಗ್ಗುರು ನಿವಾಸಿ ಶಂಕರ್ ವಿಠೋಬ ನಾಯ್ಕ ಎಂಬುವವರು ಹೊನ್ನಾವರ ಪಟ್ಟಣದ ಅರ್ಬನ್ ಬ್ಯಾಂಕ್‌ನಲ್ಲಿ ಚಿನ್ನದ ಸರವನ್ನು ಅಡವಿಟ್ಟು ₹1.50 ಲಕ್ಷ ಸಾಲ ಪಡೆದಿದ್ದರು. ಈ ಪೈಕಿ ₹3,500 ಹಣವನ್ನು ಶರ್ಟ್‌ನ ಮೇಲಿನ ಜೇಬಿನಲ್ಲಿ ಹಾಗೂ ಉಳಿದ ಹಣವನ್ನು ಕೈಚೀಲದಲ್ಲಿ ಇಟ್ಟುಕೊಂಡು ಶರಾವತಿ ಸರ್ಕಲ್‌ ಬಳಿ ಬರುತ್ತಿದ್ದ ವೇಳೆ, ನಾಗರಾಜ್ ನಾಯಕ್ ಬೈಕ್‌ನಲ್ಲಿ ಬಿಡುವುದಾಗಿ ಹೇಳಿ ಅವರನ್ನು ಬೈಕ್‌ನಲ್ಲಿ ಕರೆದೊಯ್ದಿದ್ದಾನೆ.

ಇದನ್ನೂ ಓದಿ:-Honnavar|ಮಾಮನ ಸ್ವಾಮೀಜಿ ವಿರುದ್ಧ ಅಪಸ್ವರ | ಹೊನ್ನಾವರ ಮಠದಲ್ಲಿ ಗಲಾಟೆ ವಿಡಿಯೋ ವೈರಲ್.

ಸ್ವಲ್ಪ ದೂರ ತೆರಳಿದ ಬಳಿಕ ನಾಗರಾಜ್, ಶಂಕರ್ ಅವರ ಶರ್ಟ್‌ನ ಜೇಬಿನಲ್ಲಿದ್ದ ಸುಮಾರು ₹3,500 ಹಣವನ್ನು ನೀಡುವಂತೆ ಒತ್ತಾಯಿಸಿದ್ದಾನೆ. ಹಣ ನೀಡದಿದ್ದರೆ ಬೈಕ್‌ನಿಂದ ಕೆಳಕ್ಕೆ ತಳ್ಳಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ ಹಣ ಕಸಿದುಕೊಂಡು ಪರಾರಿಯಾಗಿದ್ದಾನೆ.

ಈ ಕುರಿತು ಶಂಕರ್ ವಿಠೋಬ ನಾಯ್ಕ ಅವರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದನ್ನೂ ಓದಿ:-Honnavar|ಬೋಟ್ ಗೆ ಆಕಸ್ಮಿಕ ಬೆಂಕಿ ಲಕ್ಷಾಂತರ ಹಾನಿ

ದೂರು ಸ್ವೀಕರಿಸಿದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸಿಸಿಟಿವಿ ದೃಶ್ಯಗಳು ಹಾಗೂ ತಾಂತ್ರಿಕ ಮಾಹಿತಿಯ ಆಧಾರದಲ್ಲಿ ತನಿಖೆ ನಡೆಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಬೈಕ್ ಹಾಗೂ ಕಸಿದುಕೊಂಡಿದ್ದ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈವೇಳೆ ಈತ ಮೂರಕ್ಕೂ ಹೆಚ್ಚು ಇದೇ ಮಾದರಿಯ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಇದೀಗ  ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕಾರ್ಯಾಚರಣೆಯಲ್ಲಿ psi ಮಾಹಂತೇಶ್ ತಂಡ ಭಾಗಿಯಾಗಿತ್ತು.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement