ಮುರುಡೇಶ್ವರ-ಜಗಳ ಬಿಡಿಸಲು ಹೋದ ಇಬ್ಬರು ಪೊಲೀಸರಿಗೆ ಚಾಕು ಇರಿದ ರೌಡಿಶೀಟರ್ ಗುಂಪು |ಗಂಭೀರ ಸ್ಥಿತಿಯಲ್ಲಿ ಇಬ್ಬರು ಪೊಲೀಸರು.
Bhatkal :- ಕ್ಷುಲ್ಲಕ ಕಾರಣಕ್ಕೆ ಜಗಳವಾಡುತಿದ್ದ ರೌಡಿಶೀಟರ್ ಗಳ ಜಗಳ ಬಿಡಿಸಲು ಹೋದ ಇಬ್ಬರು ಪೊಲೀಸರಿಗೆ ಹಾಗೂ ಓರ್ವ ಯುವಕನಿಗೆ ಚಾಕು ಇರಿದು ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಹವಲ್ದಾರ್ ಸಂಗಪ್ಪ ಮತ್ತು ಕಾನಸ್ಟೇಬಲ್ ವಿನಾಯಕ್ ಶಟ್ಟಿ ಜೊತೆ ಮನೋಜ್ ಎಂಬಾತನೂ ಚಾಕು ಇರಿತಕ್ಕೊಳಗಾದವರಾಗಿದ್ದಾರೆ.

ಇದನ್ನೂ ಓದಿ:-Murdeshwar : ಮುರುಡೇಶ್ವರ ದಲ್ಲಿ ಹೊರ ರಾಜ್ಯದ ಮಹಿಳೆ ತಂದು ವೇಶ್ಯಾವಾಟಿಕೆ -ಮೂರು ಜನರ ಬಂಧನ.
ತಡರಾತ್ರಿ ಮುರುಡೇಶ್ವರದ (murdeshwar) ಕಮಾನಿನ ಬಳಿ ರೌಡಿ ಶೀಟರ್ ರಾಜು ಮತ್ತು ಆತನ ಗುಂಪು ಮನೋಜ್ ಎಂಬಾತನೊಂದಿಗೆ ತಡರಾತ್ರಿ ಜಗಳವಾಡುತಿದ್ದರು,ಈವೇಳೆ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು.
ಇದನ್ನೂ ಓದಿ:-Murdeshwar ಪ್ರವಾಸಿ ತಾಣದಲ್ಲಿ ಸರಣಿ ಸಾವು- ಜಿಲ್ಲಾಧಿಕಾರಿ, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ವಿರುದ್ಧ ದೂರು ದಾಖಲು
ತಕ್ಷಣ ಸ್ಥಳಕ್ಕೆ ಬಂದಿದ್ದ ಹವಾಲ್ದಾರ್ ಸಂಗಪ್ಪ ,ಕಾನಸ್ಟೇಬಲ್ ವಿನಾಯಕ್ ಶಟ್ಟಿ ಜಗಳ ಬಿಡಿಸುವಾಗ ರೌಡಿ ಶೀಟರ್ ರಾಜು ಮತ್ತು ಆತನ ಗುಂಪು ಪೊಲೀಸರ ಜೊತೆ ಮನೋಜ್ ಎಂಬಾತನಿಗೂ ಚಾಕು ಇರಿತ ಮಾಡಿ ಪರಾರಿಯಾಗಿದ್ದಾರೆ. ಈ ಗಟನೆಯಲ್ಲಿ ಇಬ್ಬರು ಪೊಲೀಸರು ಗಂಭೀರ ಗಾಯಗೊಂಡರೇ ಮನೋಜ್ ಎಂಬಾತ ಅಪಾಯದಿಂದ ಪಾರಾಗಿದ್ದು ,ಮುರುಡೇಶ್ವರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಗೊಳಗಾಗಿದ್ದಾನೆ.ಗಂಭೀರ ಗಾಯಗೊಂಡ ಇಬ್ಬರು ಪೊಲೀಸರನ್ನ ಮಂಗಳೂರಿನ ಆದರ್ಶ ಹಾಸ್ಪೆಟಲ್ ಗೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ:-Bigg Boss ರಕ್ಷಿತಾ ಶಟ್ಟಿ ಮುರುಡೇಶ್ವರದಲ್ಲಿ ಹೀಗೆ ಹೇಳೋದಾ! ವೈರಲ್ ಆಯ್ತು ವಿಡಿಯೋ ಏನದು ನೋಡಿ
ಚಾಕು ಇರಿತ ಪ್ರಕರಣ ಸಂಬಂಧ ರಾಜು ,ರಿತೀಕ್,ಮದನ್ ನಾಯ್ಕ ,ಯೋಗೇಶ್ ,ದರ್ಶನ್ ಎಂಬುವ ನಾಲ್ಕು ಜನರ ಮೇಲೆ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ,ರೌಡಿ ಶೀಟರ್ ರಾಜು ಮತ್ತು ಮನೋಜ್ ಎಂಬುವವರನ್ನ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಕೈಗೊಂಡಿದ್ದು ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
