ಹಾವು ಕಡಿತದಿಂದ ಸಾವು-ದೇಶಕ್ಕೆ ಕರ್ನಾಟಕ ನಂಬರ್ ಒನ್!

ಹಾವು ಕಡಿತದಿಂದ ಸಾವಿನ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲೇ ನಂಬರ್ ಒನ್. 2025ರಲ್ಲಿ 160 ಮಂದಿ ಹಾಗೂ 2024ರಲ್ಲಿ 101 ಮಂದಿ ಹಾವು ಕಡಿತಕ್ಕೆ ಬಲಿಯಾಗಿದ್ದಾರೆ.
Karnataka Snake Bite news ai image Karnataka Snake Bite news ai image
ಸಾಂದರ್ಭಿಕ ಚಿತ್ರ

ಹಾವು ಕಡಿತದಿಂದ ಸಾವು-ದೇಶಕ್ಕೆ ಕರ್ನಾಟಕ ನಂಬರ್ ಒನ್!

ನವದೆಹಲಿ:- ರಾಜ್ಯದಲ್ಲಿ ಹಾವುಕಡಿತದಿಂದ ಸಾವಿನ ಸಂಖ್ಯೆ ದೇಶಕ್ಕೇ ಮೊದಲ ಸ್ಥಾನದಲ್ಲಿದೆ. ಹೌದು ಹಾವು ಕಡಿತದಿಂದ ಸಾವನ್ನಪ್ಪುವವರ ಸಂಖ್ಯೆಗಳಲ್ಲಿ ಕರ್ನಾಟಕ ಸತತ 2ನೇ ವರ್ಷವೂ ಮೊದಲ ಸ್ಥಾನ ಪಡೆದುಕೊಂಡಿದೆ.

ಇದನ್ನೂ ಓದಿ:-Snake|ಮಳೆಗಾಲ ಬಂದ್ರೆ ಹಾವಿನ ಕಾಟ! ಹಾವುಗಳಿಂದ ರಕ್ಷಣೆ ಹೇಗೆ? ಏನಂತಾರೆ ತಜ್ಞರು ಇಲ್ಲಿದೆ ಮಾಹಿತಿ

 2025ರಲ್ಲಿ 160 ಜನ ಹಾಗೂ 2024ರಲ್ಲಿ 101 ಮಂದಿ ಹಾವು ಕಡಿತಕ್ಕೆ ಬಲಿಯಾಗಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯವು ಈ ಬಗ್ಗೆ ಸಂಸತ್ತಿಗೆ ಮಾಹಿತಿ ನೀಡಿದೆ.

Advertisement

ಕರ್ನಾಟಕವನ್ನು ಹೊರತುಪಡಿಸಿ ಬೇರೆ ಯಾವುದೇ ರಾಜ್ಯಗಳಲ್ಲಿ ಸಾವಿನ ಸಂಖ್ಯೆ 100 ರ ಗಡಿ ದಾಟಿಲ್ಲ. ಉಳಿದಂತೆ ಕಳೆದ ವರ್ಷ 27,471 ಹಾವು ಕಡಿತ ಪ್ರಕರಣಗಳೊಂದಿಗೆ ಪಶ್ಚಿಮ ಬಂಗಾಳ ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 16,805 ಮಂದಿಗೆ ಹಾವು ಕಡಿದಿದ್ದು 2ನೇ ಸ್ಥಾನದಲ್ಲಿದೆ.

2024ರಲ್ಲಿಯೂ ಪಶ್ಚಿಮ ಬಂಗಾಳ (20,888), ಕರ್ನಾಟಕ (13,235) ಹಾವು ಕಡಿತ ಪ್ರಕರಣಗಳೊಂದಿಗೆ ಅಗ್ರ 2 ಸ್ಥಾನದಲ್ಲಿದ್ದವು.

2024ರಲ್ಲಿಯೂ ಪಶ್ಚಿಮ ಬಂಗಾಳ (20,888), ಕರ್ನಾಟಕ (13,235) ಹಾವು ಕಡಿತ ಪ್ರಕರಣಗಳೊಂದಿಗೆ ಅಗ್ರ 2 ಸ್ಥಾನದಲ್ಲಿದ್ದವು.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement