ಸಚಿವ ಸ್ಥಾನಕ್ಕೆ ಕೊಕ್ಕೆ- ಆರ್.ವಿ ದೇಶಪಾಂಡೆ ವಿರುದ್ಧ ಸತೀಶ್ ಸೈಲ್ ಗರಂ|ಏನಂದ್ರು ವಿವರ ಇಲ್ಲಿದೆ.
ಕಾರವಾರ :-ಸಚಿವ ಸ್ಥಾನ ಜಿಲ್ಲೆಗೆ ನೀಡದಿದ್ದಕ್ಕೆ ಕಾರವಾರದ (karwar)ಶಾಸಕ ಸತೀಶ್ ಸೈಲ್ ಅಸಮಧಾನ ಗೊಂಡಿದ್ದು ನೇರ ಹೆಸರು ಪ್ರಸ್ತಾಪಿಸದೇ ಹಿರಿಯ ನಾಯಕರು ಎಂದು ಹೇಳುವ ಮೂಲಕ ಶಾಸಕ ಆರ್.ವಿ ದೇಶಪಾಂಡೆ ವಿರುದ್ಧ ಅಸಮಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ:-Karwar|ಉಸ್ತುವಾರಿ ಸಚಿವರ ಸಭೆ ಜಿಲ್ಲಾಧಿಕಾರಿ ಕಚೇರಿಗೇಟಿಗೆ ಬೀಗ! ಏನಾಯ್ತು ಅಂತದ್ದು?
ಗಡಿನಾಡಿಗೆ ಸಚಿವ ಸ್ಥಾನ ಕೊಡಬೇಕಿತ್ತು ,ಹಿರಿಯರು ಈ ಬಗ್ಗೆ ಮಾತನಾಡಬೇಕಿತ್ತು .ಉಡುಪಿಯಲ್ಲಿ ಯೂನಿಟಿ ಇದೆ ಹಾಗಾಗಿ ಸಚಿವ ಸ್ಥಾನ ನೀಡಿದ್ದಾರೆ .ನಮ್ಮಲ್ಲಿ ಯೂನಿಟಿ ಇಲ್ಲ ಹಾಗಾಗಿ ಸಚಿವ ಸ್ಥಾನ ನೀಡಿಲ್ಲ ,ನಮ್ಮಲ್ಲಿ ಕೆಲವರಿಗೆ ಸಾಯುವ ತನಕ ನಾನೇ ಮಂತ್ರಿ ಆಗಬೇಕು ಎಂಬುದು ಇರ್ತದೆ ,ಅದಕ್ಕೆ ಏನೂ ಆಗಿಲ್ಲ.ಒಳ್ಳೆ ಮನಸ್ಸು ಇಟ್ಟುಕೊಂಡಿದ್ದರೇ ಒಳ್ಳೆಯದಾಗಿ ಹೋಗಬಹುದು .
ಹಿರಿಯರು ಆಶಿರ್ವಾದ ಮಾಡಬೇಕು ,ನಮಗೆ ಅಡ್ವೈಸ್ ಮಾಡಬೇಕು ,ಅದು ಆಗುತ್ತಿಲ್ಲ.ಆದರೂ ನಾನು ವೆಲ್ ನಾಲೆಡ್ಜ್ ಪರ್ಸನ್ ನಾನು ಏನೂ ತಿಳಿಯದ ಅಂಗೋಟ ಛಾಪ್ ಅಲ್ಲ. ಮಂತ್ರಿಗಿರಿ ಮುಖ್ಯವಲ್ಲ ನಮಗೆ ಕೆಲಸ ಮುಖ್ಯ ,ಕಾರವಾರಕ್ಕೆ ನಾನೇ ಮುಖ್ಯಮಂತ್ರಿ.
ಇದನ್ನೂ ಓದಿ:-Karwar|25 ವರ್ಷ ಬಿಜೆಪಿಯಲ್ಲಿ ಇದ್ದು ಎಲ್ಲವನ್ನೂ ನೋಡಿದ್ದೇನೆ-ಸಚಿವ ಲಕ್ಷಣ್ ಸವಧಿ ಹೇಳಿದ ಆರು ಪ್ರಮುಖ ವಿಷಯಗಳೇನು ಗೊತ್ತಾ?
ಡಿಕೆ ಶಿವಕುಮಾರ್ ರವರು ಮೊದಲು ಸಚಿವ ಸ್ಥಾನ ಕೊಡುವುದಾಗಿ ಹೇಳಿದ್ರು, ಆದ್ರೆ ಕೊನೆಗೆ ಫಿಷರ್ ಮನ್ ಕಮ್ಯುನಿಟಗೆ ಆಧ್ಯತೆ ಕೊಡುವ ಎಂದರು. ಎರಡೂವರೆ ವರ್ಷ ಆದ ನಂತರ ನನಗೆ ಸಚಿವ ಸ್ಥಾನ ಕೊಡುತ್ತೇವೆ ಎಂದು ಹೇಳಿದರು.ನಿನಗೆ ಸಚಿವ ಸ್ಥಾನ ನೀಡಲು ಸಮಸ್ಯೆ ಇದೆ,ಸಚಿವ ಸ್ಥಾನ ಕೊಡಲು ಆಗೋಲ್ಲ ಎಂದರು. ಈ ಬಗ್ಗೆ ನನಗೆ ಬೇಜಾರು ಇಲ್ಲ .ಕಾರವಾರಕ್ಕೆ ನಾನೇ ಮುಖ್ಯಮಂತ್ರಿ , ಹಿಂದಿಗಿಂತಲೂ ಹೆಚ್ಚಿನ ಅನುದಾನ ತರ್ತೀನಿ ಎಂದ ಶಾಸಕ ಸತೀಶ್ ಸೈಲ್ ಹೇಳಿದರು.
ವಿಡಿಯೋ ನೋಡಿ:- (ವಿಡಿಯೋ ಹೇಳಿಕೆ ಪ್ರತ್ತೇಕ ಹೇಳಿಕೆ ಆಗಿದೆ)







